ಗಂಡನ ವಿರುದ್ಧದ ಕೇಸ್‌ ವಾಪಾಸ್‌ ತೆಗೆದುಕೊಂಡ ಪೂನಂ ಪಾಂಡೆ

ಮದುವೆಯಾಗಿ ಕೇವಲ 13 ದಿನಗಳಲ್ಲೇ ತನ್ನ ಪತಿ ನನ್ನ ಮೇಲೆ ಹಲ್ಲೇ ಮಾಡಿದ್ದಾನೆ. ಶೂಟಿಂಗ್‌ ಸೆಟ್‌ಗೆ ಬಂದು ಹಿಂಸೆ ನೀಡುತ್ತಾನೆ ಎಂದು ಗೋವಾದಲ್ಲಿ ದೂರು ದಾಖಲಿಸಿ , ಪತಿಯನ್ನು ಬಂಧಿಸಿದ್ದ ಬಾಲಿವುಡ್‌ ಹಾಡ್‌ ಬ್ಯೂಟಿ ಪೂನಂ ಪಾಂಡೆ ಇದೀಗ ತನ್ನ ಪತಿಯ ವಿರುದ್ಧ ಕೇಸ್‌ ಅನ್ನು ವಾಪಾಸ್‌ ತೆಗೆದುಕೊಂಡಿದ್ದಾಳೆ. ನಾವಿಬ್ಬರು ಹುಚ್ಚರಂತೆ ಪ್ರೀತಿಸುತ್ತಿದ್ದೇವೆ.ಇದರಿಂದಾಗಿ ನನ್ನ ಗಂಡನ ಮೇಲಿನ ಕೇಸ್‌ ವಾಪಾಸ್‌ ತೆಗೆದುಕೊಂಡಿದ್ದ, ಅವನ ಜೊತೆ ಸಂತೋಷದಿಂದ ಬಾಳುವುದಾಗಿ ತಿಳಿಸಿದ್ದಾಳೆ. ಇನ್ನು ಗಂಡ ಹೆಂಡತಿ ಇಬ್ಬರು ನಾಟಕವಾಡುತ್ತಿದ್ದಾರೆ. ಬಿಗ್‌ಬಾಸ್‌ ಸೀಸನ್‌ 14ರಲ್ಲಿ ಸ್ಪರ್ಧಿಯಾಗುವ ನಿಟ್ಟಿನಲ್ಲಿ ಪೂನಂ ಪಾಂಡೆ ಈ ರೀತಿಯಾಗಿ ನಾಟಕವಾಡುತ್ತಿದ್ದಾಳೆ. ಇದರಿಂದ ಪ್ರಚಾರ ಗಿಟ್ಟಿಸಿಕೊಳ್ಳವು ಆಸೆ ಅವಳಿಗೆ ಎಂದು ಬಾಲಿವುಡ್‌ನಲ್ಲಿ ಮಾತುಗಳು ಕೇಳಿ ಬರ್ತಾ ಇವೆ.

ಇನ್ನು ಈ ಬಗ್ಗೆ ಮಾತನಾಡಿರೋ ಪೂನಂ ಪಾಂಡೆ ನನಗೆ ಬಿಗ್‌ಬಾಸ್‌ಗೆ ಹೋಗುವ ಆಸೆ ಇಲ್ಲ, ನಾನು ಆ ಶೋನಲ್ಲಿ ಭಾಗವಹಿಸಲು ತುಂಬಾ ಚಿಕ್ಕವಳು ಎಂದು ಹೇಳಿದ್ದಾಳೆ.

ಇನ್ನು ಪತಿ ಸ್ಯಾಮ್‌ ತುಂಬಾ ಅಳುತ್ತಿದ್ದಾನೆ. ಅವನ ವಿರುದ್ಧ ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಬೇಡಿಕೊಳ್ಳುತ್ತಿದ್ದಾನೆ. ಮುಂದೆ ಈ ರೀತಿ ತಪ್ಪು ಆಗುವುದಿಲ್ಲ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆಯನ್ನು ನೀಡಿದ್ದಾನೆ. ತಪ್ಪನ್ನು ತಿದ್ದಿಕೊಳ್ಳುವುದಾಗಿ ಹೇಳಿದ್ದಾನೆ. ಹೀಗಾಗಿ ಒಟ್ಟಿಗೆ ಜೀವನ ನಡೆಸಲು ಮನಸ್ಸುಮಾಡಿದ್ದಾವೆ, ಇಬ್ಬರಿ ಒಬ್ಬರಿಗೊಬ್ಬರು ಹುಚ್ಚರಂತೆ ಪ್ರೀತಿಸುತ್ತೇವೆ ಎಂದು ಪೂನಂ ಪಾಂಡೆ ಹೇಳಿಕೊಂಡಿದ್ದಾಳೆ.

ಸದ್ಯ ಇಬ್ಬರು ಗೋವಾದಲ್ಲಿದ್ದು, ಸದ್ಯರಲ್ಲಿಯೇ ಮುಂಬೈಗೆ ವಾಪಾಸ್‌ ಆಗೋದಾಗಿ ಹೇಳಿದ್ದಾರೆ. ಇನ್ನು ಜಗಳ ತಣ್ಣಗಾದ ಬಳಿಕ ಸ್ಯಾಮ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮದುವೆಯ ಫೋಟೋವನ್ನು ಶೇರ್‌ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top