ಗಂಡನ ಜೊತೆ ಬ್ಯೂಟಿಪಾರ್ಲರ್‌ಗೆ ಹೋದವಳು ಲವರ್‌ ಜೊತೆ ಓಡಿ ಹೋದ್ಲು..

ಗಂಡನ ಜೊತೆ ಬ್ಯೂಟಿಪಾರ್ಲರ್‌ಗೆ ಹೋಗಿ ಗಂಡನನ್ನು ಹೊರಗೆ ನಿಲ್ಲಿಸಿ, ಬ್ಯೂಟಿ ಪಾರ್ಲರ್‌ ಬೇರೆ ಡೋರ್‌ನಿಂದ ತನ್ನ ಪ್ರಿಯತಮನ ಜೊತೆ ಓಡಿಹೋಗಿರೋ ಘಟನೆ ಪಾಟ್ನಾದ ಬೇತಿಯಾದಲ್ಲಿ ನಡೆದಿದೆ. ಅಕ್ಟೋಬರ್‌ 3ರಂದು ಈ ಘಟನೆ ನಡೆದಿದ್ದು, ಎಸ್ಕೇಪ್‌ ಆದ ಮಹಿಳೆಯ ಪತಿ ಪೊಲೀಸರಿಗೆ ಕಂಪ್ಲೇಂಟ್‌ ಕೊಟ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದೆ ಮಹಿಳೆ ತನ್ನ ತವರು ಮನೆಗೆ ಬಂದಿದ್ದು, ಗಂಡ ಹೆಂಡತಿಯನ್ನು ತವರು ಮನೆಯಿಂದ ಕರೆದುಕೊಂಡು ಬರಲು ಅತ್ತೆ ಮನೆಗೆ ಹೋಗಿ ಕರೆದಿದ್ದಾನೆ. ಆಗ ಹೆಂಡತಿ ಬೇತಿಯಾ ಸಿಟಿಯಲ್ಲಿ ಒಂದಿಷ್ಟು ಸಾಮಗ್ರಿಗಳನ್ನು ಕೊಂಡುಕೊಳ್ಳ ಬೇಕು ಮತ್ತು ಬ್ಯೂಟಿ ಪಾರ್ಲರ್‌ಗೆ ಹೋಗ ಬೇಕು ಎಂದು ಹೇಳಿದ್ದು, ಗಂಡ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಪತ್ನಿ ಗಂಡನನ್ನು ಹೊರಗೆ ನಿಲ್ಲಿಸಿ ಬ್ಯೂಟಿ ಪಾರ್ಲರ್‌ ಒಳಗೆ ಹೋಗಿದ್ದಾಳೆ.

ಪತ್ನಿ ಸುಮಾರು ಸಮಯವಾದರು ಬರೆದೆ ಇದ್ದಾಗ ಗಂಡ ಇಮಾಮ್‌ ಬ್ಯೂಟಿ ಪಾರ್ಲರ್‌ ಒಳಗೆ ಹೋಗಿ ನೋಡಿದಾಗ ಅಲ್ಲಿ ಆಕೆ ಇರಲಿಲ್ಲ, ನಂತರ ಬ್ಯೂಟಿ ಪಾರ್ಲರ್‌ ಸಿಬ್ಬಂದಿಯನ್ನು ವಿಚಾರಿದಾದ ಆಕೆ ಇನ್ನೊಂದು ಡೋರ್‌ ಮೂಲಕ ಹೋಗಿರುವ ಬಗ್ಗೆ ಹೇಳಿದ್ದಾರೆ. ನಂತರ ಸಿಸಿಟಿವಿ ಪರಿಶೀಲಿಸಿದಾಗ ಆಕೆ ಇಮ್ರಾನ್‌ ಎಂಬ ವ್ಯಕ್ತಿಯ ಜೊತೆ ತನ್ನ ಎರಡುವರೆ ವರ್ಷದ ಮಗುವನ್ನು ಕರೆದುಕೊಂಡು ಓಡಿಹೋಗಿರೋದು ಬೆಳಕಿಗೆ ಬಂದಿದೆ.

ಇಮಾನ್‌ ಸದ್ಯ ಓಡಿಹೋಗಿರೋ ಇಮ್ರಾನ್‌ ವಿರುದ್ಧ ದಾಖಲಿಸಿದ್ದಾರೆ. 2017ರಲ್ಲಿ ಇವರಿಬ್ಬರ ವಿವಾಹವಾಗಿದ್ದು, ಈಕೆ 2019ರಲ್ಲಿ ಒಮ್ಮೆ ಓಡಿಹೋಗಿದ್ದಳು, ಆಗ ಮನೆಯವರು ಆಕೆಯ ವಾಪಾಸ್‌ ಕರೆದುಕೊಂಡು ಬಂದಿದ್ದರು, ಆದ್ರೆ ಇದೀಗ ಇಮ್ರಾನ್‌ ಜೊತೆಯಲ್ಲಿ ಮಗಳನ್ನು ಕರೆದುಕೊಂಡು ಎಸ್ಕೇಪ್‌ ಆಗಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top