ಗಂಡನನ್ನು ಕೊಂದು ಫೇಸ್‍ಬುಕ್‍ನಲ್ಲಿ ಎಲ್ಲರಿಗೂ ಹೇಳಿದ ಹೆಂಡತಿ

ಗಂಡನನ್ನು ಕೊಂದು ಫೇಸ್‍ಬುಕ್‍ನಲ್ಲಿ ಕೊಲೆ ವಿಚಾರವನ್ನು ಹೆಂಡತಿ ಶೇರ್ ಮಾಡಿಕೊಂಡಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿ ವಾಸಿಯಾಗಿರೋ ದಂಪತಿಗಳಾಗಿದ್ದು ಇವರು, ಇದ್ದಕ್ಕಿದ್ದಂತೆ ತನ್ನ ಗಂಡನ್ನು ಕೊಲೆ ಮಾಡಿ ಕೊಲೆ ಮಾಡಿರೋ ವಿಷಯವನ್ನು ಹೆಂಡತಿ ತನ್ನ ಫೇಸ್ ಬುಕ್ ಅಕೌಂಟ್‍ನಲ್ಲಿ ಶೇರ್ ಮಾಡಿದ್ದಾಳೆ. ಅಲ್ಲದೇ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ವಿಷಯವನ್ನು ನೋಡಿದ ಮಹಿಳೆಯೊಬ್ಬಳು ತಕ್ಷಣ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ಪೋಲಿಸರು ಸ್ಥಳಕ್ಕೆ ಧಾವಿಸಿದ್ದಾರೆ. ಮನೆಯ ಬಾಗಿಲು ಮುಚ್ಚಿದ್ದರಿಂದ ಬಾಗಿಲು ಮುರಿದು ಒಳಗೆ ಹೋದ ಪೊಲೀಸರಿಗೆ ಗಂಡ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದು ಕಂಡಿದೆ,ಇನ್ನು ಮಹಿಳೆ ಪ್ರಜ್ಞಹೀನಳಾಗಿ ಬಿದ್ದಿದ್ದಳು. ತಕ್ಷಣ ಮಹಿಳೆಯನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಕಾರಣ ಏನೂ ಅನ್ನೋದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ, ಸ್ಥಳಿಯರು ಹೇಳುವ ಪ್ರಕಾರ ದಂಪತಿಗಳಿಗೆ ಮಕ್ಕಳಿಲ್ಲದ ಕಾರಣ ಈ ಘಟನೆ ನಡೆದಿದೆ ಅಂತ ಹೇಳಲಾಗಿದೆ. ಇನ್ನು ಸ್ಥಳಿಯರ ಹೇಳಿಕೆಯನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top