ಕ್ರಿಸ್ ಗೇಲ್ ಎರಡು ದಾಖಲೆ ಮುರಿದ ಎಬಿಡಿ, ಚೇತರಿಸಿಕೊಂಡ ಯೂನಿವರ್ಸಲ್ ಬಾಸ್..

ಐಪಿಎಲ್ 2020ಯಲ್ಲಿ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಲೇ ಇದೆ, ಈಗಾಗಲೇ ಎಲ್ಲಾ ತಂಡಗಳು ಇನ್ನಷ್ಟು ದಾಖಲೆಗಳನ್ನು ಸೃಷ್ಟಿ ಮಾಡಲು ರೆಡಿಯಾಗ್ತಾ ಇವೆ. ಅದರಲ್ಲೂ ಪ್ರತಿ ತಂಡಗಳು ಶಾರ್ಜಾ ಮೈದಾನದಲ್ಲಿ ಒಂದು ದಾಖಲೆ ನಮ್ದು ಇರಲಿ ಅನ್ನೋ ಮಟ್ಟಕ್ಕೆ ಆಡುತ್ತಿವೆ, ಹೀಗಿರಬೇಕಾದ್ರೆ ನಿನ್ನೇ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಎರಡು ದಾಖಲೆಗಳನ್ನು ಮಾಡುವ ಮೂಲಕ ಗೇಲ್‍ರ ಎರಡೆರೆಡು ದಾಖಲೆಗಳನ್ನು ಸರಿಗಟ್ಟಿದ್ದಾರೆ. ಹೌದು ಕೆಕೆಆರ್ ವಿರುದ್ಧ ಆರ್‍ಸಿಬಿ ಭರ್ಜರಿ ಗೆಲುವು ಸಾಧಿಸಿದ್ದು, 33 ಬಾಲ್‍ಗಳಲ್ಲಿ 73ರನ್‍ಗಳನ್ನು ಬಾರಿಸೋ ಮೂಲಕ ಮ್ಯಾನ್ ಆಫ್ ದಿ ಮ್ಯಾಚ್‍ಗೆ ಭಾಜನರಾಗಿದ್ದಾರೆ. ಆ ಮೂಲಕ ಕ್ರಿಸ್ ಗೇಲ್‍ನ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿ ನಾನೇ ಕಿಂಗ್ ಅಂತ ಹೇಳಿದ್ದಾರೆ.

ಹೌದು ಐಪಿಎಲ್‍ನಲ್ಲಿ ಅತಿ ಹೆಚ್ಚು ಮ್ಯಾನ್‍ಆಫ್ ದಿ ಮ್ಯಾಚ್ ಪಡೆದ ಆಟಗಾರ ಅಂದ್ರೆ ಅದು ಕ್ರಿಸ್ ಗೇಲ್ ಹೆಸರಿನಲ್ಲಿ ಇತ್ತು, ಒಟ್ಟು 21 ಮ್ಯಾನ್‍ಆಫ್ ದಿ ಮ್ಯಾಚ್ ಪಡೆದಿದ್ದ ದಾಖಲೆಯನ್ನು ಎಬಿಡಿ ನಿನ್ನೆ ಕೆಕೆಆರ್ ವಿರುದ್ಧ ಪಡೆಯುವ ಮೂಲಕ ಒಟ್ಟು 22 ಮ್ಯಾನ್ ಆಫ್‍ದಿ ಮ್ಯಾಚ್ ಪ್ರಶಸ್ತಿ ಗೆದ್ದು ಹೊಸ ದಾಖಲೆ ಬರೆದಿದ್ದಾರೆ. ಇನ್ನು ಇದೇ ಪಂದ್ಯದಲ್ಲಿ ಗೇಲ್‍ರ ಇನ್ನೊಂದು ದಾಖಲೆಯನ್ನು ಸಹ ಎಬಿಡಿ ಸರಿಗಟ್ಟಿದ್ದಾರೆ.

ಹೌದು ಕ್ರಿಸ್‍ಗೇಲ್ ಮತ್ತು ವಿರಾಟ್ ಕೊಹ್ಲಿ ಹೆಸರಿನಲ್ಲಿ ಇದ್ದ ಅತಿ ಹೆಚ್ಚು ಜೊತೆಯಾಟದ ರನ್ ಅನ್ನು ಸರಿಗಟ್ಟಿ ವಿರಾಟ್ ಮತ್ತು ಎಬಿಡಿ 3000 ರನ್‍ಗಳನ್ನು ಸೇರಿಸುವ ಮೂಲಕ ಎಬಿಡಿ ಈ ದಾಖಲೆಯನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಗೇಲ್ ಹೆಸರಿನಲ್ಲಿದ ಎರಡು ದಾಖಲೆಗಳನ್ನು ಸರಿಗಟ್ಟಿ ತಮ್ಮ ರೆಕಾರ್ಡ್ ಬುಕ್‍ಗೆ ಸೇರಿಸಿಕೊಂಡಿದ್ದಾರೆ. ಆ ಮೂಲಕ ಇದೀಗ ಎಬಿಡಿ ದಾಖಲೆಗಳ ಸರದಾರರನಾಗಿ ಹೊರಹೊಮ್ಮಿದ್ದಾರೆ.

ಚೇತರಿಸಿಕೊಂಡ ಯೂನಿವರ್ಸಲ್ ಬಾಸ್ ಕ್ರಿಸ್‍ಗೇಲ್..

ಪಂಜಾಬ್ ತಂಡದ ಸ್ಪೋಟಕ ಬ್ಯಾಟ್ಸ್‍ಮನ್ ಯೂನಿವರ್ಸಲ್ ಬಾಸ್ ಕ್ರಿಸ್‍ಗೇಲ್ ಐಪಿಎಲ್ ಶುರುವಿನಿಂದ ಕೇವಲ ಬೆಂಜ್ ಕಾಯುತ್ತಾ ಕುಳಿತ್ತಿದ್ದಾರೆ. ಇನ್ನು ಕಳೆದ ಕೆಲವು ಪಂದ್ಯದಲ್ಲಿ ಗೇಲ್ ಆಡುತ್ತಾರೆ ಅಂತ ಹೇಳಲಾಗುತ್ತಿತ್ತು ಆದ್ರೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕಳೆದ ಎರಡು ಪಂದ್ಯದಿಂದಲೂ ಮಿಸ್ ಆಗಿದ್ರು, ಇದೀಗ ಕ್ರಿಸ್ ಗೇಲ್ ನೆಟ್‍ನಲ್ಲಿ ಅಭ್ಯಾಸ ನಡೆಸುತ್ತಿರೋ ಫೋಟೋವನ್ನು ಪಂಜಾಬ್ ತನ್ನ ಟ್ವೀಟರ್ ಖಾತೆಯಲ್ಲಿ ಹಾಕಿಕೊಂಡಿದ್ದು, ಆ ಮೂಲಕ ಮುಂದಿನ ಪಂದ್ಯ ಶಾರ್ಜಾದಲ್ಲಿ ಆರ್‍ಸಿಬಿ ವಿರುದ್ಧ ನಡೆಯಲ್ಲಿದ್ದು ಆ ಪಂದ್ಯಕ್ಕೆ ಯೂನಿವರ್ಸಲ್ ಬಾಸ್ ಅಧಿಕೃತವಾಗಿ ಎಂಟ್ರಿಕೊಡಲಿದ್ದಾರೆ ಅನ್ನೋ ಸೂಚನೆಯನ್ನು ನೀಡಿದ್ದಾರೆ. ಈಗಾಗಲೇ ಪಂಜಾಬ್ ತಂಡ ಕೂಡ ತಾವು ಆಡಿದ ಪಂದ್ಯದಲ್ಲಿ ಸೋಲನ್ನು ಕಾಣುತ್ತಿದ್ದು, ಇದೀಗ ಕ್ರಿಸ್‍ಗೇಲ್ ಎಂಟ್ರಿ ಒಂದಿಷ್ಟು ಬಲ ತಂದುಕೊಡಲಿದ್ಯ ಮತ್ತು ಶಾರ್ಜಾದಲ್ಲಿ ಯೂನಿವರ್ಸಲ್ ಬಾಸ್ ರನ್ ಹೊಳೆಹರಿಸಲಿದ್ದಾರಾ ಕಾದುನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top