ಕ್ರಿಕೆಟ್ ಆಟಗಾರರನ್ನು ಕ್ವಾರಂಟೈನ್ ಮಾಡಲೇಬೇಕು..!

ಕೊರೊನಾ ಎಫೆಕ್ಟ್ ನಿಂದ ಕ್ರಿಕೆಟ್ ಲೋಕಕ್ಕೂ ದೊಡ್ಡ ಹೊಡೆತ ಬಿದ್ದಿದ್ದು, ಈಗಾಗಲೇ ನಿಗದಿಯಾಗಿದ್ದ ಎಲ್ಲಾ ಇಂಟರ್ ನ್ಯಾಶನಲ್ ಪಂದ್ಯಾವಳಿಗಳು ರದ್ದಾಗಿದ್ದು ಇದರಿಂದ ಸಾವಿರಾರು ಕೋಟಿ ನಷ್ಟವನ್ನು ಅನುಭವಿಸಿದೆ ಕ್ರಿಕೆಟ್‌ಮಂಡಳಿಗಳು, ಇನ್ನು ಹೀಗಿರುವಾಗಲೇ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಕ್ರಿಕೆಟ್ ಟೂರ್ನಿಯನ್ನು ಈ ವರ್ಷದ ಅಂತ್ಯದಲ್ಲಿ ನಡೆಸಲು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಮತ್ತು ಬಿಸಿಸಿಐ ಆಸಕ್ತಿ ವಹಿಸಿದ್ದು, ಇದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆಯಂತೆ. ಇನ್ನು ಈ ಟೂರ್ನಿ ನಡೆಯದೆ ಹೋದಲ್ಲಿ ಭಾರಿ ನಷ್ಟ ಅನುಭವಿಸ ಬೇಕಾಗುತ್ತದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಕೂಡ ಹೇಳಿಕೊಂಡಿದೆ. ಇನ್ನು ಅಕಸ್ಮಾತ್ ಭಾರತ ತಂಡ ಈ ಟೂರ್ನಿಗೆ ಪ್ರವಾಸ ಕೈಗೊಂಡರೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಖಜಾಂಜಿ ಅರುಣ್ ಧುಮಾಲ್ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಆಸ್ಟ್ರೇಲಿಯಾ ಪ್ರವಾಸ ಹೋದ ಕ್ರಿಕೆಟರ್ ಗಳು ಎರಡು ವಾರ ಕ್ವಾರಂಟೈನ್ ನಲ್ಲಿ ಇರಬೇಕು ಅಂತಾನೂ ಹೇಳಿದ್ದಾರೆ. ಸದ್ಯ ನಮ್ಮ ಮುಂದೆ ಯಾವುದೇ ದಾರಿ ಇಲ್ಲ,ಹೀಗಿರುವ ಪರಿಸ್ಥಿತಿಯಲ್ಲಿ ಪ್ರವಾಸ ಕೈಗೊಳ್ಳ ಬೇಕು, ಜೊತೆಗೆ ಕ್ವಾರಂಟೈನಲ್ಲಿ ಇರಬೇಕಾಗುತ್ತದೆ‌,ಲಾಕ್ ಡೌನ್ ಸಮಯದಲ್ಲಿ ಇದ್ದ ನಮಗೆ ಎರಡು ವಾರ ಇರುವುದು ದೊಡ್ಡ ವಿಷಯವಲ್ಲ ಅಂತ ಅರುಣ್ ಧುಮಾಲ್ ಹೇಳಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದ್ದು ಈ ವೇಳೆ 5 ಟೆಸ್ಟ್ ಪಂದ್ಯ ಆಡುವ ಬದಲು ಏಕದಿನ ಟಿ20ಪಂದ್ಯಗಳನ್ನು ಆಡುವುದು ಒಳ್ಳೆಯದು ಇದು ಆರ್ಥಿಕವಾಗಿಯೂ ಉಪಯೋಗವಾಗಲಿದೆ ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top