ಕ್ರಿಕೆಟ್‌ ಬಿಟ್ಟು ಚಿತ್ರ ನಿರ್ಮಾಣದ ಕಡೆ ಹೊರಟ ಎಂಎಸ್‌ ಧೋನಿ..

ಟೀಂ ಇಂಡಿಯಾದ ಕ್ಯಾಪ್ಟನ್‌ ಕೂಲ್‌ ಆಂತಾನೇ ಖ್ಯಾತಿಯಾಗಿದ್ದ ಮಹೇಂದ್ರ ಸಿಂಗ್‌ ಧೋನಿ ,ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿ ಆಗಿದೆ. ಸದ್ಯ ಐಪಿಎಲ್‌ ಆಡುತ್ತಿರೋ ಧೋನಿ ಮುಂದಿನ ಆವೃತ್ತಿಯಲ್ಲಿ ಐಪಿಎಲ್‌ ಆಡುತ್ತಾ ಇಲ್ಲವೋ ಅನ್ನೋ ಲೆಕ್ಕಾಚಾರಗಳು ಶುರುವಾಗಿದ್ದು, ಹೀಗಿರಬೇಕಾದ್ರೆನೆ ಧೋನಿ ಕ್ರಿಕೆಟ್‌ ಲೋಕ ಬಿಟ್ಟು ಎಂಟರ್‌ಟೈನ್ಮೆಂಟ್‌ ಕ್ಷೇತ್ರದ ಕಡೆ ಕಾಲು ಇಡಲು ಪ್ಲಾನ್‌ ಮಾಡಿಕೊಂಡಿದ್ದಾರೆ.

ಕಳೆದ ವರ್ಷ ಧೋನಿ ಎಂಟರ್‌ಟೈನ್ಮೆಂಟ್‌ ಅನ್ನೋ ನಿರ್ಮಾಣ ಸಂಸ್ಥೆ ಘೋಷಣೆ ಮಾಡಿದ್ದ ಧೋನಿ, ಆ ಮೂಲಕ ʻರೋರ್‌ ಆಫ್‌ ದಿ ಲಯನ್‌ʼ ಅನ್ನೋ ಡಕ್ಯುಮೆಂಟರಿ ಒಂದನ್ನು ಹೊರತಂದಿದ್ದರು, ಆದ್ರೀಗ ಧೋನಿ ನಿರ್ಮಾಣ ಸಂಸ್ಥೆಯಿಂದ ವೆಬ್‌ ಸೀರಿಸ್‌ ನಿರ್ಮಾಣ ಮಾಡಲು ಪ್ಲಾನ್‌ ನಡೆಸಿದ್ದು, ಇದಕ್ಕಾಗಿ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

ಇನ್ನು ಧೋನಿ ಎಂಟರ್‌ಟೈನ್ಮೆಂಟ್‌ ಸಂಸ್ಥೆಗೆ ವ್ಯವಸ್ಥಾಪಕಿ ಆಗಿ ಸಾಕ್ಷಿ ಧೋನಿ ಇದ್ದು, ವೆಬ್‌ ಸೀರಿಸ್‌ ನಿರ್ಮಾಣದ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನು ಇವರು ಮಾಡೋ ವೆಬ್‌ ಸೀರಿಸ್‌ ಆಕ್ಷನ್‌ ಥ್ರಿಲ್ಲರ್‌ ಕತೆ ಹೊಂದಿರಲಿದ್ದು, ಜೊತೆಗೆ ಪುರಾಣದ ಕತೆಗಳನ್ನು ಸಹ ಮಾಡಲಿದ್ದಾರಂತೆ.

ಈಗಾಗಲೇ ಅಘೋರಿ ಒಬ್ಬರು ಆಧುನಿಕ ತಂತ್ರಜ್ಞಾನದ ಜೊತೆ ಒಂದು ಕಟ್ಟದಲ್ಲಿ ಇರಿಸಲಾಗುತ್ತದೆ. ಅವರು ಹೇಳುವ ಕಥೆ ಮತ್ತು ಅನುಭವಗಳು ಎಲ್ಲವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ತಾಳೆ ಮಾಡಲಾಗುತ್ತದೆ, ಆ ಮೂಲಕ ಕಥೆ ಸಾಗಲಿದೆ ಎಂದು ಹೇಳಿದ್ದಾರೆ. ಹೊಸಬರು ಮಾಡಿರೋ ಈ ಕಥೆಗೆ ಇನ್ನು ಟೈಟಲ್‌ ಫೈನಲ್‌ ಮಾಡಿಲ್ಲ ಈ ವರ್ಷದ ಅಂತ್ಯದಲ್ಲಿ ಚಿತ್ರಕ್ಕೆ ಕಲಾವಿದರ ಆಯ್ಕೆಯನ್ನು ಮಾಡಲಾಗುವುದು ಎಂದು ಸಾಕ್ಷಿ ಧೋನಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top