ಕ್ರಿಕೆಟ್‌ ಪ್ರಿಯರಿಗೆ ಶುರುವಾಗಲಿದೆ ಡಬಲ್‌ ಧಮಾಕಾ..

ಐಪಿಎಲ್‌ 2020 ಯಶಸ್ವಿಯಾಗಿ ಮುಕ್ತಾಯವಾಗಿ ಮುಂಬೈ ತಂಡ ಚಾಂಪಿಯನ್‌ ಆಗಿದ್ದು, ಇದೀಗ ಈ ಬಾರಿಯ ಐಪಿಎಲ್‌ನಲ್ಲಿ ಯಾವ ಯಾವ ಆಟಗಾರರು ಯಾವ ದಾಖಲೆಗಳನ್ನು ಬರೆದಿದ್ದಾರೆ ಅನ್ನೋ ಲೆಕ್ಕಾಚಾರಗಳು ಶುರುವಾಗಿದೆ. ಈ ನಡುವೆ ಇದೀಗ ಪಾದಾರ್ಪಣೆ ಟೂರ್ನಿಯಲ್ಲಿಯೇ ಅಮೋಘ ಪ್ರದರ್ಶನ ನೀಡೋ ಮೂಲಕ ಚೊಚ್ಚಲ ಟೂರ್ನಿಯಲ್ಲಿಯೇ ಅತಿ ಹೆಚ್ಚು ರನ್‌ ಕಲೆಹಾಕಿದ ದಾಖಲೆ ಬರೆದಿರೋ ದೇವದತ್‌ ಪಡಿಕಲ್‌ ಇದೀಗ ಕ್ರಿಕೆಟ್‌ ದೈತ್ಯ, ಮಿಸ್ಟರ್‌ 360 ಡಿಗ್ರಿ ಜೊತೆ ದಾಖಲೆಯೊಂದನ್ನು ಹಂಚಿಕೊಂಡಿದ್ದಾರೆ. ಇನ್ನು ಈ ದಾಖಲೆಯನ್ನು ನಮ್ಮ ಕನ್ನಡಿಗ ಕೆಎಲ್‌ ರಾಹುಲ್‌ ಕೂಡ ಹಂಚಿಕೊಂಡಿರೋ ವಿಶೇಷ ಹೌದು ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರೋ ದೇವದತ್‌ ಪಡಿಕಲ್‌ 15 ಪಂದ್ಯಗಳಿಂದ 473ರನ್‌ ಕಲೆಹಾಕಿದ್ದು, 5 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಇನ್ನು ರಾಹುಲ್‌ ಕೂಡ 14 ಪಂದ್ಯಗಳನ್ನು ಆಡಿ 670ರನ್‌ ಕಲೆ ಹಾಕಿ 5 ಅರ್ಧ ಶತಕ ಸಿಡಿಸಿದ್ರೆ ಮಿಸ್ಟರ್‌ 360 ಡಿಗ್ರಿ ಎಬಿಡಿ ವಿಲಿಯರ್ಸ್‌ ಕೂಡ 15 ಪಂದ್ಯದಲ್ಲಿ 454ರನ್‌ಗಳಲಿ 5 ಅರ್ಧ ಶತಕ ಸಿಡಿಸೋ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧ ಶತಕ ಸಿಡಿಸಿದ ದಾಖಲೆಯಲ್ಲಿ ನಮ್ಮ ಇಬ್ಬರು ಕನ್ನಡಿಗರ ಜೊತೆ ಎಬಿಡಿ ವಿಲಿಯರ್ಸ್‌ ಹಂಚಿಕೊಂಡಿದ್ದಾರೆ.

ಈಗಾಗಲೇ ಐಪಿಎಲ್‌ ಮುಗಿದಿದ್ದು, ಪ್ರತಿ ತಂಡದ ಆಟಗಾರರು ತಮ್ಮ ತಂಡವನ್ನು ತೊರೆದು ತಮ್ಮ ತಮ್ಮ ನೆಲೆಗಳಿಗೆ ದುಬೈನಿಂದ ವಾಪಾಸ್‌ ಆಗಿದ್ದಾರೆ. ಇನ್ನು ಕೆಲ ಟೀಂ ಇಂಡಿಯಾ ಆಟಗಾರರು ದುಬೈನಿಂದಲೇ ಆಸ್ಟ್ರೇಲಿಯಾ ಪ್ರವಾಸ ಟೂರ್ನಿಗೆ ಹೊರಟ್ಟಿದ್ದಾರೆ. ಇದೀಗ ದುಬೈನಿಂದ ಭಾರತಕ್ಕೆ ವಾಪಾಸ್‌ ಆದ ಮುಂಬೈ ಇಂಡಿಯನ್ಸ್‌ ತಂಡದ ಆಲ್‌ರೌಡರ್‌ ಆಟಗಾರ ಕ್ರುನಾಲ್‌ ಪಾಂಡ್ಯಗೆ ಸಂಕಷ್ಟ ಎದುರಾಗಿದೆ. ಹೌದು ಕ್ರುನಾಲ್‌ ಯುಎಇಯಿಂದ ವಾಪಾಸ್‌ ಬರುವ ವೇಳೆ ದಾಖಲೆ ಇಲ್ಲದ ಚಿನ್ನ ಮತ್ತು ಬೆಲೆಬಾಳು ವಸ್ತುಗಳನ್ನು ತಂದಿದ್ದು, ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ತಡೆಹಿಡಿದಿದ್ದಾರೆ. ಕ್ರುನಾಲ್‌ ತಂದಿರುವ ಚಿನ್ನಕ್ಕೆ ದಾಖಲೆ ಕೇಳಿದ್ದಾರೆ ಎಂದು ಹೇಳಲಾಗಿದೆ. ಕ್ರುನಾಲ್‌ ತಮ್ಮ ಜೊತೆ 2 ಬಳೆ, ಕೆಲವು ಬೆಲೆ ಬಾಳುವ ಗಡಿಯಾರ ಮತ್ತು ಅಮೂಲ್ಯ ವಸ್ತುಗಳನ್ನು ತಂದಿದ್ದು, ಈ ವಸ್ತುಗಳಿಗೆ ಡಿಕ್ಲೇರೇಷನ್‌ ಮಾಡದ ಹಿನ್ನೆಲೆ ವಿಚಾರಣೆಗೆ ಒಳಪಡಿಸಲಾಗಿದೆ.

ಇನ್ನು ಮುಂದಿನ ವರ್ಷ ಕ್ರಿಕೆಟ್‌ ಪ್ರಿಯರಿಗೆ ಡಬಲ್‌ ಧಮಾಕ ಇದ್ದು, ಒಂದೇ ವರ್ಷದಲ್ಲಿ ಎರೆಡೆರಡು ಟಿ 20 ಹಬ್ಬ ಶುರುವಾಗಲಿದೆ. ಹೌದು ಈಗಾಗಲೇ ನಿಗದಿಯಂತೆ ಐಪಿಎಲ್‌ ಪ್ರತಿ ವರ್ಷ ನಡೆಯುವ ರೀತಿ ಏಪ್ರಿಲ್‌ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಗಂಗೂಲಿ ಹೇಳಿದ್ದು, ಐಪಿಎಲ್‌ ಮುಗಿಯುತ್ತಿದ್ದಂತೆ, ಟಿ 20 ವಿಶ್ವಕಪ್‌ ಹಬ್ಬ ಕೂಡ ಶುರುವಾಗಲಿದೆ. ಹೌದು 2021ರ ಟಿ20 ವಿಶ್ವಕಪ್‌ ಭಾರತ ಆಥಿತ್ಯವಹಿಸಿದ್ದು, ಈಗಾಗಲೇ ಬಿಸಿಸಿಐ 2021ರ ವಿಶ್ವಕಪ್‌ ನಿಗದಿಯಂತೆ ಭಾರತದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.

ಹಾಗಾದ್ರೆ ಮುಂದಿನ ವರ್ಷದ ಕ್ರಿಕೆಟ್‌ ಹಬ್ಬದ ಬಗ್ಗೆ ನಿಮ್ಮ ಅಭಿಪ್ರಾಯವೇನು, ದೇವದತ್‌,ಎಬಿಡಿ,ರಾಹುಲ್‌ ದಾಖಲೆ ಬಗ್ಗೆ ನಮಗೆ ಕಾಮೆಂಟ್‌ ಮಾಡಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top