ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ ವಿಕೇಟ್‌ ಕೀಪರ್‌ ಪಾರ್ಥಿವ್‌ ಪಟೇಲ್‌

ಟೀಂ ಇಂಡಿಯಾದ ವಿಕೇಟ್‌ ಕೀಪರ್‌, ಆರ್‌ಸಿಬಿ ತಂಡದ ಆಟಗಾರ ಪಾರ್ಥಿವ್‌ ಪಟೇಲ್‌ ತಮ್ಮ ಕ್ರಿಕೆಟ್‌ ಜೀವನದ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಇಂದು ತಮ್ಮ ಟ್ವೀಟರ್‌ ಖಾತೆಯಲ್ಲಿ ಕ್ರಿಕೆಟ್‌ ಜೀವನಕ್ಕೆ ನಿವೃತ್ತಿ ಘೋಷಿಸಿರೋ ಬಗ್ಗೆ ಹೇಳಿಕೊಂಡಿದ್ದಾರೆ.
ಪಾರ್ಥಿವ್‌ ಪಟೇಲ್‌ ಇದುವರೆಗೂ ಟೀಂ ಇಂಡಿಯಾ ಪರ 25 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 934ರನ್‌ಗಳಿಸಿದ್ದಾರೆ. 38 ಏಕದಿನ ಪಂದ್ಯಗಳನ್ನು ಆಡಿದ್ದು 2 ಟಿ ೨೦ ಪಂದ್ಯಗಳನ್ನು ಟೀಂ ಇಂಡಿಯಾ ಪರ ಆಡಿದ್ದಾರೆ. ಇದೀಗ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾರ್ಥಿವ್‌ ಪಟೇಲ್‌ ನಿವೃತ್ತಿ ಘೋಷಿಸಿದ್ದು. ಧೋನಿ ಟೀಂ ಇಂಡಿಯಾ ಎಂಟ್ರಿಗೂ ಮುಂಚೆ ಟೀಂ ಇಂಡಿಯಾದ ಕಾಯಂ ಕೀಪರ್‌ ಆಗಿದ್ರು., ಧೋನಿ ನಂತರದಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಪಾರ್ಥಿವ್‌ ವಿಫಲರಾಗಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top