ಕ್ರಿಕೆಟ್‌ ಜಗತ್ತಿನಲ್ಲಿ ಟೀಂ ಇಂಡಿಯಾ ಹುಡುಗರ ದರ್ಬಾರ್‌

2020 ಮುಕ್ತಾಯಕ್ಕೆ ಕ್ಷಣಗಣನೆ ಶುರುವಾಗಿದೆ, ಈಗಾಗಲೇ ನ್ಯೂ ಇಯರ್‌ ಸೆಲೆಬ್ರೆಷನ್‌ಗೆ ಎಲ್ಲಾ ತಯಾರಿಯನ್ನು ನಡೆಸುತ್ತಿದ್ದು, 2020ರ ಒಂದು ಮೆಲುಕನ್ನು ಸಹ ಹಾಕಲು ಶುರುಮಾಡಿದ್ದಾರೆ. ಹೀಗಿರುವಾಗಿ ಇದೀಗ ಐಸಿಸಿ 2020 ಮುಕ್ತಾಯವಾಗುತ್ತಿದ್ದಂತೆ ಒಂದು ದಶಕ ಮುಗಿಯಲಿದ್ದು, ಹೀಗಾಗಿ ಐಸಿಸಿ ಮೂರು ಕ್ರಿಕೆಟ್‌ ಮಾದರಿಯಲ್ಲಿ ದಶಕದ ಅತ್ಯುತ್ತಮ ತಂಡವನ್ನು ಪ್ರಕಟಿಸಿದೆ, ಇದರಲ್ಲಿ ಟೀಂ ಇಂಡಿಯಾದ ಆಟಗಾರರ ಹೆಸರು ಕೂಡ ಇದ್ದು ಏಕದಿನ ಮತ್ತು ಟಿ20ಯಲ್ಲಿ ಮೂರು ಜನ ಸ್ಥಾನ ಪಡೆದಿದ್ರೆ ಟೆಸ್ಟ್‌ ತಂಡದಲ್ಲಿ ಇಬ್ಬರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಏಕದಿನ ಟೀಂ ನಲ್ಲಿ ಕ್ಯಾಪ್ಟನ್‌ ಕೂಲ್‌ ಧೋನಿ ವಿಕೇಟ್‌ ಕೀಪರ್‌ ಜೊತೆಯಲ್ಲಿ ತಂಡದ ನಾಯಕತ್ವವನ್ನು ನೀಡಿದ್ದು ಉಳಿದಂತೆ ತಂಡದಲ್ಲಿ ಧೋನಿ,ರೋಹಿತ್‌ ಶರ್ಮಾ, ಡೇವಿಡ್‌ ವಾರ್ನರ್‌,ವಿರಾಟ್‌ ಕೊಹ್ಲಿ, ಎಬಿಡಿ ವಿಲಿಯರ್ಸ್‌,ಶಕೀಬ್‌ ಅಲ್‌ ಹಸನ್‌,ಬೆನ್‌ ಸ್ಟೋಕ್ಸ್‌,ಮಿಚೆಲ್‌ ಸ್ಟಾರ್ಕ್‌,ಟ್ರೆಂಟ್‌ ಬೋಲ್ಟ್‌,ಇಮ್ರಾನ್‌ ತಾಹಿರ್‌, ಲಸಿತ್‌ ಮಾಲಿಂಗ್‌ ಹೆಸರನ್ನು ದಶಕದ ಏಕದಿನ ತಂಡದಲ್ಲಿ ಐಸಿಸಿ ಹೆಸರಿದೆ.

ಇನ್ನು ಟಿ 20ಯಲ್ಲೂ ದಶಕದ ತಂಡದ ಆಟಗಾರರನ್ನು ಹೆಸರಿಸಿದ್ದು ಅದರಲ್ಲೂ ಸಹ ಕ್ಯಾಪ್ಟನ್‌ ಕೂಲ್‌ ಧೋನಿಗೆ ನಾಯಕ ಪಟ್ಟವನ್ನು ನೀಡಿದೆ ಐಸಿಸಿ ಹಾಗಾದ್ರೆ ಆ ತಂಡವನ್ನು ನೋಡೋದಾದ್ರೆ ಮಹೇಂದ್ರ ಸಿಂಗ್‌ ಧೋನಿ,ರೋಹಿತ್‌ ಶರ್ಮಾ ಕ್ರಿಸ್‌ಗೇಲ್‌,ಆರೋನ್‌ ಫಿಂಚ್‌,ವಿರಾಟ್‌ ಕೊಹ್ಲಿ ಎಬಿಡಿ ವಿಲಿಯರ್ಸ್‌,ಗ್ಲೆನ್‌ ಮ್ಯಾಕ್ಸ್‌ವೆಲ್‌,ಕೀರನ್‌ ಪೊಲಾರ್ಡ್‌,ರಶೀದ್‌ ಖಾನ್‌,ಜಸ್‌ಪ್ರೀತ್‌ ಬೂಮ್ರಾ,ಲಸಿತ್‌ ಮಾಲಿಂಗ

ಐಸಿಸಿ ಪ್ರಕಟಿಸಿರೋ ಏಕದಿನ ಮತ್ತು ಟಿ 20 ತಂಡದಲ್ಲಿ ಟೀಂ ಇಂಡಿಯಾ ಆಟಗಾರರ ಹೆಚ್ಚಾಗಿದ್ದು ಏಕದಿನ ತಂಡದಲ್ಲಿ ಮೂರು ಜನ ಸ್ಥಾನ ಪಡೆದಿದ್ರೆ, ಟಿ 20 ತಂಡದಲ್ಲಿ ನಾಲ್ಕು ಜನ ಸ್ಥಾನ ಪಡೆದಿದ್ದಾರೆ. ಇನ್ನು ಐಸಿಸಿ ದಶಕದ ಟೆಸ್ಟ್‌ ತಂಡವನ್ನು ಸಹ ಪ್ರಕಟಿಸಿದ್ದು ಅದರಲ್ಲೂ ಭಾರತೀಯ ಎರಡು ಆಟಗಾರರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗಾದ್ರೆ ದಶಕದ ಟೆಸ್ಟ್‌ ತಂಡ ಯಾವ ರೀತಿ ಇದೆ ಅನ್ನೋದನ್ನ ನೋಡೋಣ ಅಲಾಸ್ಟೇರ್‌ ಕುಕ್‌,ಡೇವಿಡ್‌ ವಾರ್ನರ್, ಕೇನ್‌ ವಿಲಿಯಮನ್ಸ್‌,ವಿರಾಟ್‌ ಕೊಹ್ಲಿ,ಸ್ಟೀವ್‌ ಸ್ಮಿತ್‌,ಕುಮಾರ ಸಂಗಕ್ಕಾರ,ಬೆನ್‌ ಸ್ಟೋಕ್ಸ್‌,ಆರ್‌ ಅಶ್ವಿನ್‌,ಡೇಲ್‌ ಸ್ಟೇನ್‌,ಸ್ಟುವರ್ಟ್‌ ಬ್ರಾಡ್‌,ಜೇಮ್ಸ್‌ ಆಂಡರ್ಸನ್‌. ಇದು ಟೆಸ್ಟ್‌ ತಂಡವಾಗಿದ್ದು ಈ ಟೆಸ್ಟ್‌ ತಂಡಕ್ಕೆ ವಿರಾಟ್‌ ಕೊಹ್ಲಿಯನ್ನು ನಾಯಕನನ್ನಾಗಿ ಮಾಡಿದ್ದು, ಐಸಿಸಿ ಪ್ರಕಾರ ದಶಕದ ತಂಡದಲ್ಲಿ ಮೂರು ಮಾದರಿಯಲ್ಲೂ ಟೀಂ ಇಂಡಿಯಾ ಹುಡುಗರೇ ಬೆಸ್ಟ್‌ ಕ್ಯಾಪ್ಟನ್‌ ಅಂತ ಹೇಳಿದೆ. ಒಟ್ಟಿನಲ್ಲಿ ಕ್ರಿಕೆಟ್‌ ಜಗತ್ತಿನಲ್ಲಿ ಟೀಂ ಇಂಡಿಯಾ ಬಿಗ್‌ ಬಾಸ್‌ ಆಗಿ ಮೆರೆಯುತ್ತಿದ್ದು ದಶಕದ ತಂಡದಲ್ಲೂ ಸಹ ಟೀಂ ಇಂಡಿಯಾ ಆಟಗಾರರೇ ಬೆಸ್ಟ್‌ ಅನ್ನೋದು ಸಾಭೀತಾಗಿದೆ.

ಇನ್ನು ಐಸಿಸಿ ಪ್ರಕಟಿಸಿರೋ ದಶಕದ ತಂಡದಲ್ಲಿ ಪಾಕಿಸ್ತಾನದ ಆಟಗಾರರು ಸ್ಥಾನ ಗಿಟ್ಟಿಸಿಕೊಳ್ಳದೇ ಇರೋದಕ್ಕೆ ಪಾಕ್‌ ಮಾಜಿ ಕ್ರಿಕೆಟರ್‌ ಶೋಯೆಬ್‌ ಅಖ್ತರ್‌ ಕಿಡಿಕಾರಿದ್ದಾರೆ. ಐಸಿಸಿ ಘೋಷಿಸಿದ್ದು ಐಪಿಎಲ್‌ ತಂಡ ದಶಕದ ತಂಡವಲ್ಲ ಅಂತ ಹೇಳಿದ್ದಾರೆ. ಐಸಿಸಿಯು ಪಾಕ್‌ ಟೀಂ ತನ್ನ ಸದಸ್ಯ ರಾಷ್ಟ್ರ ಎನ್ನುವುದು ಮರೆತಂತಿದೆ. ಬಾಬರ್‌ ಅಜಂ ಶ್ರೇಷ್ಠ ಆಟಗಾರ ಆದರೆ ಆತ ದಶಕದ ತಂಡದಲ್ಲಿಲ್ಲ ಪಾಕ್‌ಗೆ ಐಸಿಸಿಯ ದಶಕದ ಟೀಂ ಬೇಕಾಗಿಲ್ಲಾ ಅಂತ ಅಖ್ತರ್‌ ಕಿಡಿಕಾರಿದ್ದಾರೆ.

ಹಾಗಾದ್ರೆ ನಿಮ್ಮ ಪ್ರಕಾರ ಐಸಿಸಿ ಪ್ರಕಟಿಸಿರೋ ದಶಕದ ಮೂರು ಮಾದರಿಯ ಟೀಂನಲ್ಲಿ ಯಾರೆಲ್ಲಾ ಸ್ಥಾನ ಪಡೆಯಬೇಕಾಗಿತ್ತು, ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top