ಕ್ರಿಕೆಟ್‌ ಅಭಿಮಾನಿಗಳಿಗೆ ಸಿಹಿಸುದ್ದಿ, ಕ್ರಿಕೆಟ್‌ನ ಸ್ಟೇಡಿಯಂನಲ್ಲಿ ನೋಡಬಹುದು..

ಕೊರೋನಾ ಎಫೆಕ್ಟ್‌ನಿಂದಾಗಿ ಈಗಾಗಲೇ ಕ್ರಿಕೆಟ್‌ ಟೂರ್ನಿಮೆಂಟ್‌ಗಳು ಖಾಲಿ ಸ್ಟೇಡಿಯಂನಲ್ಲಿ ನಡೆಸುತ್ತಿದ್ದು, ಇದೀಗ ಐಪಿಎಲ್‌ ಕೂಡ ಕ್ರಿಕೆಟ್‌ ಪ್ರೇಕ್ಷಕರು ಇಲ್ಲದೇ ಖಾಲಿ ಸ್ಟೇಡಿಯಂನಲ್ಲಿ ಆಡಿಸಲು ತೀರ್ಮಾನಿಸಲಾಗಿದೆ. ಹೀಗಿರುವಾಗಲೇ ಆಸ್ಟ್ರೇಲಿಯಾ ಕ್ರಿಕೆಟ್‌ ಬೋರ್ಡ್‌ ಕ್ರಿಕೆಟ್‌ ಪ್ರಿಯರಿಗೆ ಸಂತೋಷದ ಸುದ್ದಿಯೊಂದನ್ನು ನೀಡಿದೆ. ಸೆಪ್ಟೆಂಬರ್‌ ೨೬ರಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಮಹಿಳಾ ತಂಡಗಳ ಮೂರು ಏಕದಿನ ಪಂದ್ಯ ಹಾಗೂ ಟಿ೨೦ ಸರಣಿ ನಡೆಯಲಿದೆ ಈ ಟೂರ್ನಿಗೆ ಸ್ಟೇಡಿಯಂನಲ್ಲಿ ಪ್ರೇಕ್ಷರಿಗೆ ಅವಕಾಶ ಕಲ್ಪಿಸಲು ಆಸ್ಟ್ರೇಲಿಯಾ ಕ್ರಿಕೆಟ್‌ ಬೋರ್ಡ್‌ ತೀರ್ಮಾನಿಸಿದ್ದು, ಸ್ಟೇಡಿಯಂನಲ್ಲಿ ಶೇ50 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಲು ತೀರ್ಮಾನಿಸಿದೆ. ಇನ್ನು ಮೊಬೈಲ್‌ ಟಿಕೆಟ್‌ಗೆ ಅವಕಾಶ ಕಲ್ಪಿಸಲಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಪ್ರೇಕ್ಷಕರು ತಮ್ಮ ವಿವರಗಳನ್ನು ನೀಡಬೇಕಾಗಿರುತ್ತದೆ. ಇನ್ನು ಆಸ್ಟ್ರೇಲಿಯಾ ಕ್ರಿಕೆಟ್‌ ಬೋರ್ಡ್‌ನ ಈ ನಿರ್ಧಾರವನ್ನು ಕೆಲವರು ಟೀಕಿಸಿದ್ರೆ, ಇನ್ನು ಕೆಲವ್ರು ಸಂತೋಷ ವ್ಯಕ್ತಪಡಿಸಿದ್ದಾರೆ.

ಇನ್ನು ಐಪಿಎಲ್‌ನಲ್ಲಿ ದುಬೈ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶೇ 30 ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಬಿಸಿಸಿಐ ಜೊತೆ ಮಾತುಕತೆ ನಡೆಸಿದ್ದು, ಆದ್ರೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಇದನ್ನು ತಿರಸ್ಕರಿಸಿದ್ದಾರೆ. ಇನ್ನು ಐಪಿಎಲ್‌ ಅರ್ಧದ ನಂತರ ತಂಡಗಳ ಅಭಿಮಾನಿಗಳಿಗೆ ಅವಕಾಶ ಕಲ್ಪಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top