ಕೋವಿಡ್‌ ಸೆಂಟರ್‌ನಲ್ಲಿ ಮದುವೆಯಾದ ಕೊರೋನಾ ಸೋಂಕಿತ ಜೋಡಿ

ಕೋವಿಡ್‌ ಸೆಂಟರ್‌ನಲ್ಲಿಯೇ ಹೊಸ ಜೀವನಕ್ಕೆ ಕಾಲಿಟ್ಟ ವಿಶೇಷವಾದ ಘಟನೆ ರಾಜಸ್ತಾನದ ಬಾರಾದ ಕೆಲ್ವಾರಾ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ನಡೆದಿದೆ. ವಧು ವರ ಇಬ್ಬರು ಪಿಪಿಇ ಕಿಟ್‌ ಧರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ದಿನವೇ ಮದುವೆ ಹುಡುಗಿಗೆ ಕೊರೋನಾ ಪಾಸಿಟಿವ್‌ ವರದಿ ಬಂದ ಹಿನ್ನಲೆಯಲ್ಲಿ ಕೋವಿಡ್‌ ಸೆಂಟ್‌ನಲ್ಲಿಯೇ ಮದುವೆಯನ್ನು ನೆರವೇರಿಸಲಾಯ್ತು.

ವಧು ಮತ್ತು ವರ ಇಬ್ಬರು ಪಿಪಿಇ ಕಿಟ್‌ ಧರಿಸಿ ಮದುಗೆ ಹಾಜರಾಗಿದ್ದು, ಮದುವೆಯಲ್ಲಿ ವಧು ವರ ಮತ್ತು ಪುರೋಹಿತರ ಇದ್ದು ಒಬ್ಬ ವ್ಯಕ್ತಿಯ ಸಮ್ಮುಖದಲ್ಲಿ ವಿವಾಹವನ್ನು ನೆರವೇರಿಸಲಾಯ್ತು. ಕೋವಿಡ್‌ ನಿಯಮಗಳನ್ನು ಅನುಸರಿಸಿ ಮದುವೆ ಕಾರ್ಯವನ್ನು ಮಾಡಿದ್ದು, ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಪಿಪಿಇ ಕಿಟ್‌ನಲ್ಲಿ ಹಸೆಮಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ವರ ಪಿಪಿಇ ಕಿಟ್‌ ಜೊತೆಯಲ್ಲಿ ಕೈಗೆ ಗ್ಲೌಸ್‌ ಮತ್ತು ಮಾಸ್ಕ್‌ ಧರಿಸಿ ನಿಯಮನ್ನು ಪಾಲಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top