ಕೋಲಾರ ಲೋಕಲ್ ಕ್ರಿಕೆಟ್ ಟೂರ್ನಮೆಂಟ್ ವೇಳೆ ಅವಘಡ! Video

ಕೋಲಾರ ಲೋಕಲ್ ಕ್ರಿಕೆಟ್ ಟೂರ್ನಮೆಂಟ್ ವೇಳೆ ಚೆಂಡನ್ನು ಕ್ಯಾಚ್ ಹಿಡಿಯಲು ಹೋಗಿ ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದಾರೆ, ಪ್ರಜ್ಞೆ ಕಳೆದುಕೊಂಡ ಇಬ್ಬರೂ ಆಟಗಾರರ ಸ್ಥಿತಿ ಗಂಭೀರವಾಗಿದೆ, ಬಾನು ಹಾಗೂ ಶ್ರೀನಿವಾಸ ಡಿಕ್ಕಿ ಹೊಡೆದುಕೊಂಡ ಪೀಲ್ಡರ್ಸ್ ಎನ್ನಲಾಗಿದೆ,

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿಯಲ್ಲಿ ಧೋನಿ ಕಪ್ ಆಯೋಜನೆ ಮಾಡಿದ್ದ ಸೋಮಯಾಜಲಹಳ್ಳಿ ಯುವಕರು, ಈ ಕ್ರಿಕೇಟ್ ಟೂರ್ನಿಯಲ್ಲಿ, ರೈಸಿಂಗ್ ಸ್ಟಾರ್ಸ್ & SAS ಕ್ರಿಕೆಟರ್ಸ್ ನಡುವೆ ಟೆನಿಸ್ ಬಾಲ್ ಮ್ಯಾಚ್ ನಡೆಯುತ್ತಿತ್ತು

ಸದ್ಯಕ್ಕೆ ಪ್ರಜ್ಞೆ ಕಳೆದುಕೊಂಡ ಆಟಗಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ,ಇದೀಗ ಕ್ರಿಕೆಟ್ ಆಟಗಾರರು ಡಿಕ್ಕಿ ಹೊಡೆದುಕೊಂಡು ಕೆಳಗೆ ಬಿದ್ದ ವಿಡಿಯೋ ವೈರಲ್ ಆಗಿದೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top