ಕೊಹ್ಲಿ-ಎವಿಡಿ ಜೊತೆಯಾಟ ಕೋಮಾದಲ್ಲಿದೆ ಎಂದ – ಮಾಜಿ ಆಟಗಾರ

ಐಪಿಎಲ್ ನಲ್ಲಿ ಅತಿ ಹೆಚ್ಚು ಜೊತೆಯಾಟದ ದಾಖಲೆ ಇರೋದು ಅಂದ್ರೆ ಅದು ವಿರಾಟ್ ಮತ್ತು ಎಬಿಡಿ ಅವರ ಸಾರಥ್ಯದಲ್ಲಿ..ಇವರಿಬ್ಬರಿ ಐಪಿಎಲ್ ನಲ್ಲಿ 3000ಕ್ಕೂ ಹೆಚ್ಚು ರನ್ ಜೊತೆಯಾಟ ಆಡೋ ಮೂಲಕ ನಂಬರ್ 1 ಸ್ಥಾನದಲ್ಲಿ ಐಪಿಎಲ್ ನಲ್ಲಿ‌ ದಾಖಲೆ ಬರೆದಿದ್ದಾರೆ. ಆದ್ರೆ ಇದೀಗ ಇವರಿಬ್ಬರ ಜೊತೆಯಾಟದ ಬಗ್ಗೆ ಅಪಸ್ವರ ಎತ್ತಿದ್ದಾರೆ ಟೀಂ ಇಂಡಿಯಾದ ಮಾಜಿ ಆಟಗಾರ.ಹೌದು ಟೀಂ ಇಂಡಿಯಾದ ಮಾಜಿ ಆಟಗಾರ ಡೆಲ್ಲಿ ಡ್ಯಾಶರ್ ವೀರೇಂದ್ರ ಸೆಹ್ವಾಗ್ ಇವರಿಬ್ಬರ ಜೊತೆಯಾಟದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದು, ಇವರಿಬ್ಬರ ಜೊತೆಯಾಟ ಕೋಮಾದಲ್ಲಿದೆ ಅಂತ ಟೀಕೆ ಮಾಡಿದ್ದಾರೆ.ಹೀಗೆ ಹೇಳಲು ಸಹ‌ ಕಾರಣವಿದ್ದು,ಸಿಎಸ್ ಕೆ ವಿರುದ್ಧದ ಪಂದ್ಯದಲ್ಲಿ ಎಬಿಡಿ ಮತ್ತು ಕೊಹ್ಲಿ ಉತ್ತಮ ಜೊತೆಯಾಟ ಕೊಟ್ಟಿದ್ರು ಸಹ ಕಡಿಮೆ ಸ್ಕೋರ್ ಮಾಡೋ ಮೂಲಕ‌ ಪಂದ್ಯವನ್ನು ಸೋಲಬೇಕಾಯಿತು. ಇದೀಗ ಈ ಸೋಲಿನಲ್ಲಿ ಕೊಹ್ಲಿ ಪಡೆ ಸೋತಿದ್ದೇಲ್ಲಿ ಅನ್ನೋದನ್ನ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.ಆರ್ ಸಿ ಬಿ ಎರಡು ವಿಕೆಟ್ ಕಳೆದುಕೊಂಡ ನಂತರ 7 ಓವರ್ ನಿಂದ ಕೊಹ್ಲಿ ಮತ್ತು ಎಬಿಡಿ ಜೊತೆಯಾಟ ಶುರುವಾಗಿದ್ದು ಅಲ್ಲಿ 18ನೇ ಓವರ್ ವರೆಗೂ ಇವರಿಬ್ಬರ ಜೊತೆಯಾಟ ಕೋಮಾಗೆ ತಲುಪಿತ್ತು, ಹೀಗಾಗಿ ತಂಡ ಸೋಲಿಗೆ ಪ್ರಮುಖ ಕಾರಣವಾಯ್ತು ಅಂತ ಹೇಳಿದ್ದಾರೆ.ಇನ್ನು ನಿನ್ನೆಯ ಪಂದ್ಯದಲ್ಲಿ ವಿರಾಟ್ ಮತ್ತು ಎಬಿಡಿ ನಿಧಾನಗತಿಯ ಜೊತೆಯಾಟದಿಂದಲೇ ಕಡಿಮೆ ಸ್ಕೋರ್ ಮಾಡುವಂತಾಗಿತ್ತು ಅನ್ನೋ‌ ಮಾತುಗಳು ಸಹ ಕೇಳಿಬಂದಿತ್ತು.ಇದೀಗ ವೀರೇಂದ್ರ ಸೆಹ್ವಾಗ್ ಇವರಿಬ್ಬರ ಜೊತೆಯಾಟ ಕೋಮಾಗೆ ತಲುಪಿತ್ತು ಅನ್ನೋ‌ ಮಾತುಗಳು ಹೇಳಿದ್ದು,ಈ ವಿಚಾರವಾಗಿ ಪರ ವಿರೋಧಗಳು ಸಹ ನಡೆಯುತ್ತಿದೆ.

ನಿಮ್ಮ ಪ್ರಕಾರ ಎವಿಡಿ,ಕೊಹ್ಲಿ ಜೊತೆಯಾಟದ ಬಗ್ಗೆ ನೀವ್ ಏನ್ ಹೇಳ್ತಿರಾ.ನಿಧಾನಗತಿ ಜೊತೆಯಾಟದಿಂದಲೇ ಮ್ಯಾಚ್ ಸೋಲಲು ಕಾರಣವಾಯ್ತ ಕಾಮೆಂಟ್ ಮಾಡಿ‌ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top