ಕೊರೋನಾ ಭೀತಿ ಚಿಕನ್ ಮಾರಾಟದಲ್ಲಿ ಭಾರೀ ಇಳಿಕೆ!

ಕೊರೋನಾ ವೈರಸ್ ಈಗ ಎಲ್ಲಾ‌ ಕಡೆ ಭೀತಿ ಹುಟ್ಟಿಸಿದ್ದು, ಈ ಕಾರಣದಿಂದಾಗಿ‌ ಅದೆಷ್ಟೋ ಸಮಸ್ಯೆಗಳು ಈಗ ಎದುರಿಸುವಂತಾಗಿದೆ..ಅದರಲ್ಲೂ ಕೆಲವು ವದಂತಿಗಳಿಂದಾಗಿ ಅದೆಷ್ಟೋ ನಷ್ಟಗಳು ಸಹ ಉಂಟಾಗಿದೆ. ಅದರಲ್ಲಿ ಪ್ರಮುಖವಾಗಿ ಚಿಕನ್ ಮೇಲೆ ಅತಿ ದೊಡ್ಡ ಪರಿಣಾಮ.ಚಿಕನ್ ನಿಂದ ಕೊರೋನ ವೈರಸ್ ಬರುತ್ತೆ ಅನ್ನೋ ಸುದ್ದಿ ಈಗ ಎಲ್ಲಾ ಕಡೆ ಹರಡಿರೋದ್ರಿಂದ ಭಾರತದಲ್ಲಿ ಶೇಖಡಾ 50ರಷ್ಟು ಚಿಕನ್ ಮಾರಾಟ ಕುಸಿತ ಕಂಡಿದೆಯಂತೆ..

ಈ ರೀತಿಯ ಒಂದು ಹೇಳಿಕೆಯನ್ನು ನೀಡಿರೋದು ದೇಶದ ಪ್ರಮುಖ ಚಿಕನ್ ಸಪ್ಲೈಯರ್ ಆದ ಗೋದ್ರೇಜ್ ಆಗ್ರೋ ವೆಟ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಸ್ ಯಾದವ್ ಚಿಕನ್ ನಿಂದ ಕೊರೋನ ವೈರಸ್ ಹರಡುತ್ತದೆ ಎಂದು ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್ ನಲ್ಲಿ ಹರಡಿರೋದ್ರಿಂದ ಕುಸಿತ ಕಾಣೋಕೆ ಪ್ರಮುಖ ಕಾರಣವಾಗಿದೆ ಅಂತ ಹೇಳಿದ್ದಾರೆ.ಇನ್ನು ಜನರು ಕೊರಾನ ವೈರಸ್ ಸೋಂಕು ಬರುತ್ತದೆ ಎಂಬ ಭಯ ಉಂಟಾಗಿದ್ದು ಹೀಗಾಗಿ ವಾರಕ್ಕೆ 7.5ಕೋಟಿ ಕೋಳಿ ಮಾರಾಟ ಮಾಡುತ್ತಿದ್ದ ನಾವು ಈಗ 4ಕೋಟಿಗೆ ಚಿಕನ್ ಮಾರಾಟ ಇಳಿದಿದೆ ಎಂದು ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top