ಕೊರೋನಾ ಟೈಂನಲ್ಲಿ ಸ್ನೇಹಿತರಿಗೆ ಸಾಥ್‌ ನೀಡಿದ ನೆನಪಿರಲಿ ಪ್ರೇಮ್‌..

ಕೊರೋನಾ ಎಫೆಕ್ಟ್‌ನಿಂದಾಗಿ ಅನೇಕರ ಕನಸುಗಳು ಕಮರಿಹೋದಂತಾಗಿದೆ, ಇನ್ನು ಕೆಲವ್ರು ಕೆಲಸವನ್ನು ಕಳೆದುಕೊಂಡಿದ್ದಾರೆ.ಇನ್ನು ವ್ಯಾಪಾರ ವಹಿವಾಟುಗಳಂತು ಫುಲ್‌ ಲಾಸ್‌ನಲ್ಲಿ ಮುಳುಗಿ ಹೋಗಿದೆ, ಆದ್ರೆ ಇಲ್ಲೊಬ್ಬರು ಕರೋನಾದಿಂದ ಕಳೆದುಕೊಂಡಿದ್ದನ್ನು ಅಲ್ಲಿಂದಲೇ ಪಡೆದುಕೊಳ್ಳಬೇಕು ಅನ್ನೋ ಸಾಹಸಕ್ಕೆ ಕೈ ಹಾಕುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ನೆನಪಿರಲಿ ಪ್ರೇಮ್‌ ಅವರ ಗೆಳೆಯ ಮೈಸೂರು ಸೋಮಶೇಖರ್‌ ʻಮೀಲ್‌ ಮೇಟ್‌ ಜಂಪ್‌ ಸ್ಟಾರ್ಟ್‌ʼ ಅನ್ನೋ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ, ಇದಕ್ಕೆ ನೆನಪಿರಲಿ ಪ್ರೇಮ್‌ ಕೂಡ ಸಾಥ್‌ ನೀಡಿದ್ದಾರೆ.


ʻ ಜಂಪ್‌ ಸ್ಟಾರ್ಟ್‌ ಕ್ಲೌಡ್‌ ಕಿಚನ್‌ ಕಾನ್ಸೆಪ್ಟ್‌ನ ರೆಸ್ಟೋರೆಂಟ್‌ ಇದಾಗಿದ್ದು, ಇಲ್ಲಿ ಮನೆಯಿಂದಲೇ ಅಡುಗೆಯನ್ನು ತಯಾರು ಮಾಡಿ ಆನ್‌ಲೈನ್‌ ಮೂಲಕ ಬರುವ ಗ್ರಾಹಕರಿಗೆ ಸುಚಿತ್ವ ಮತ್ತು ರುಚಿಯಾದ ಫುಡ್‌ ಅನ್ನು ಅವರಿಗೆ ತಲುಪಿಸುವ ಕಾರ್ಯವನ್ನು ಇದು ಮಾಡಲಿದೆ.

ಮೈಸೂರು ರಾಹುಲ್ ಗೌಡ‌ ಈ ಹಿಂದೆ ರೆಸ್ಟೋರೆಂಟ್‌ ಒಂದನ್ನು ಶುರುಮಾಡಿದ್ದು ಕರೋನಾ ಎಫೆಕ್ಟ್‌ನಿಂದಾಗಿ ಎಲ್ಲವನ್ನು ಕಳೆದುಕೊಂಡಿದ್ದರು, ಇದೀಗ ರಾಹುಲ್ ಎಲ್ಲಿ ಕಳೆದುಕೊಂಡಿದ್ದರೋ ಅಲ್ಲೇ ಹೊಸದನ್ನು ಹುಡುಕುವ ಪ್ರಯತ್ನ ಮಾಡಿದ್ದು ಇದಕ್ಕೆ ನೆನಪಿರಲಿ ಪ್ರೇಮ್‌ ಕೂಡ ಸಾಥ್‌ ನೀಡಿದ್ದಾರೆ. ಇನ್ನು ಎಲ್ಲಾ ಕಡೆ ಪ್ರಾಂಚೈಸಿ ಮಾದರಿಯಲ್ಲಿ ವಿಸ್ತರಿಸೋ ಪ್ಲಾನ್‌ ಮಾಡಿಕೊಂಡಿದ್ದು, ಈ ಜಂಪ್‌ ಸ್ಟಾರ್ಟ್‌ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿ ಯುವಕರಿಗೆ ಉದ್ಯೋಗ ಸೃಷ್ಟಿಸೋ ಯೋಜನೆ ಇದಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top