ಕೊರೋನಾ ಟೈಂನಲ್ಲಿ ಈ ಶಾಲೆಯ ಶಿಕ್ಷಕರ ಸಾಧನೆ ದೇಶಕ್ಕೆ ಮಾದರಿ

ಕೊರೋನಾ ಪ್ರಪಂಚದಲ್ಲಿ ಎಲ್ಲಾ ವಲಯಕ್ಕೂ ದೊಡ್ಡ ಹೊಡೆತವನ್ನು ಕೊಟ್ಟಿದೆ, ಈಗಾಗಲೇ ಕೆಲವು ವಲಯಗಳು ಮತ್ತೆ ತಮ್ಮ ಕಾರ್ಯವನ್ನು ಶುರುಮಾಡುವ ಮೂಲಕ ಒಂದಿಷ್ಟು ಸುಧಾರಿಸುವ ಪ್ರಯತ್ನವನ್ನು ಮಾಡಿಕೊಳ್ತಾ ಇದ್ರೆ, ಶಿಕ್ಷಣ ವ್ಯವಸ್ಥೆಯಲ್ಲಿ ಇನ್ನು ಸಹ ಒಂದಿಷ್ಟು ಗೊಂದಲಗಳು ಉಂಟಾಗಿದೆ.

ಕೊರೋನಾ ಎಫೆಕ್ಟ್ ಇನ್ನು ಕಡಿಮೆಯಾಗದ ಕಾರಣ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಬೇಕಾ ಅಥವಾ ಬೇಡವ ಅನ್ನೋ ಗೊಂದಲದಲ್ಲಿ ಸರ್ಕಾರ ಇವೆ. ಇನ್ನು ಸರ್ಕಾರ ಮತ್ತು ಖಾಸಗಿ ಶಾಲೆಗಳು ಆನ್‍ಲೈನ್ ಶಿಕ್ಷಣ ಮಾಡುವ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಪ್ರಯತ್ನಗಳನ್ನು ಮಾಡ್ತಾ ಇವೆ, ಆದ್ರೆ ಇದು ಕೆಲವ್ರಿಗೆ ಅನುಕೂಲವಾಗಿದ್ರೆ, ಹಳ್ಳಿಗಾಡಿನ ಪ್ರದೇಶದ ಮಕ್ಕಳಿಗೆ ಒಂದಿಷ್ಟು ತೊಂದರೆಯನ್ನು ಉಂಟುಮಾಡಿದೆ.

ಹಳ್ಳಿಗಾಡು ಮತ್ತು ಗುಡ್ಡಗಾಡು ಪ್ರದೇಶದ ಶಾಲಾ ಮಕ್ಕಳಿಗೆ ಸಿರಯಾದ ಆನ್‍ಲೈನ್ ಕ್ಲಾಸಿಗೆ ಬರಲು ಸರಿಯಾದ ವ್ಯವಸ್ಥೆ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ಆದ್ರೆ ಇಲ್ಲೊಂದು ಸರ್ಕಾರಿ ಶಾಲೆ ಮಾತ್ರ ಇಡೀ ದೇಶಕ್ಕೆ ಮಾದರಿಯಾಗುವ ಮೂಲಕ ಬಡ ವಿದ್ಯಾರ್ಥಿಗಳ ಬೆಳಕಿಗೆ ದಾರಿದೀಪವಾಗಿದೆ.

ಹೌದು ಈ ಸರ್ಕಾರಿ ಶಾಲೆಯ ಶಿಕ್ಷಕರು ಮಾಡಿದ ಈ ಒಂದು ಐಡಿಯಾದಿಂದಾಗಿ ಕೊರೋನಾ ಟೈಂನಲ್ಲೂ ಶಾಲೆಗೆ ಹೋಗಿ ಶಿಕ್ಷಣ ಕಲಿಯುವ ಅವಕಾಶವನ್ನು ಪಡೆದಿದ್ದಾರೆ. ಜಾರ್ಖಂಡ್‍ನ ಹಳ್ಳಿಯೊಂದರ ಶಾಲೆಯಲ್ಲಿ ಶಿಕ್ಷಕರ ಪರಿಶ್ರಮದಿಂದ ಕರೋನಾ ಟೈಂನಲ್ಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಿಶಿಷ್ಟ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ.

ಹೌದು ಈ ಶಾಲೆಯಲ್ಲಿ ಮಕ್ಕಳಿಗೆ ಪತ್ಯೇಕವಾಗಿ ಕಪ್ಪು ಹಲಗೆಗಳನ್ನು ವ್ಯವಸ್ಥೆಮಾಡುವ ಮೂಲಕ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಪ್ರಯತ್ನವನ್ನು ಈ ಶಾಲೆಯ ಶಿಕ್ಷಕರು ಮಾಡುತ್ತಿದ್ದಾರೆ. ಸದ್ಯ ಈ ಶಾಲೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿದ್ದು, ಯಾವುದೋ ಒಂದು ವ್ಯವಸ್ಥೆಗೆ ಕಟ್ಟುಬೀಳದ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಯೋಜನೆಯನ್ನು ರೂಪಿಸಿ ಕಾರ್ಯವನ್ನು ನಿರ್ವಹಿಸುವುದು ಉತ್ತಮ ಸಾಧನೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅದೇನೇ ಇದ್ರು ಈ ಹಳ್ಳಿಯ ಶಾಲೆಯ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ಸಲುವಾಗಿ ತೆಗೆದುಕೊಂಡಿರೋ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top