ಕೊನೆಗೂ ಫಿಕ್ಸ್‌ ಆಯ್ತು ಪೊಗರು ರಿಲೀಸ್‌ ಡೇಟ್‌..

ಯಸ್‌ ಕೊನೆಗೂ ಧ್ರುವ ಸರ್ಜಾ ಅಭಿಮಾನಿಗಳಿಗೆ ಸಂತಸದ ಖುಷಿಯೊಂದು ಸಿಕ್ಕಿದೆ, ಬರೋಬ್ಬರಿ ಮೂರು ವರ್ಷಗಳಿಂದ ಇವತ್‌ ಬರುತ್ತೆ ನಾಳೆ ಬರುತ್ತೆ ಅಂತ ಕಾದು ಕುಳಿತ್ತಿದ್ದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ದರ್ಶನದ ಭಾಗ್ಯ ಸಿನಿ ರಸಿಕರಿಗೆ ಸದ್ಯದರಲ್ಲಿಯೇ ಸಿಗಲಿದೆ. ಇಂದು ಧ್ರುವ ಸರ್ಜಾ ಮುಂದಿನ ಸಿನಿಮಾ ದುಬಾರಿ ಚಿತ್ರದ ಮುಹೂರ್ತ ನೆರವೇರಿದ್ದು, ನಂದಕಿಶೋರ್‌ ಡೈರೆಕ್ಷನ್‌ನಲ್ಲಿ ಈ ಸಿನಿಮಾ ಮೂಡಿ ಬರ್ತಾ ಇದೆ.

ಈಗಾಗಲೇ ಪೊಗರು ಸಿನಿಮಾ ಈ ಜೋಡಿಯ ಮೂಲಕ ರೆಡಿಯಾಗಿದ್ದು, ಯಾವಾಗ ಪೊಗರು ಸಿನಿಮಾ ರಿಲೀಸ್‌ ಆಗಲಿದೆ ಅನ್ನೋ ಮಾತುಗಳು ಧ್ರುವ ಅಭಿಮಾನಿಗಳಲ್ಲಿ ಕಾಡುತ್ತಿದ್ದು, ಇದೀಗ ನಂದಕಿಶೋರ್‌ ಧ್ರುವ ಅಭಿಮಾನಿಗಳಿಗೆ ಹೊಸ ಸಿನಿಮಾದ ಸುದ್ದಿ ನೀಡೋ ಜೊತೆಯಲ್ಲಿ ಪೊಗರು ಚಿತ್ರದ ದರ್ಶನದ ಬಗ್ಗೆನೂ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ.ಹೌದು ಇಂದು ದುಬಾರಿ ಸಿನಿಮಾದ ಮುಹೂರ್ತದ ವೇಳೆ ಮಾತನಾಡಿರೋ ನಿರ್ದೇಶನ ನಂದಕಿಶೋರ್‌ ಡಿಸೆಂಬರ್‌ 25ಕ್ಕೆ ಪೊಗರು ಸಿನಿಮಾವನ್ನು ಥಿಯೇಟರ್‌ನಲ್ಲಿ ರಿಲೀಸ್‌ ಮಾಡೋ ಯೋಚನೆಯಲ್ಲಿ ಇದ್ದೇವೆ ಅನ್ನೋ ಮಾತುಗಳು ಹೇಳಿದ್ದಾರೆ.

ಕೊರೋನಾ ಹಾವಳಿ ನಡುವೆ ಇದೀಗ ಚಿತ್ರರಂಗ ತನ್ನ ಚುಟುವಟಿಕೆಯನ್ನು ಶುರುಮಾಡಿಕೊಂಡಿದ್ದು, ಥಿಯೇಟರ್‌ ಕೂಡ ಓಪನ್‌ ಆಗಿದ್ದು, ಸ್ಟಾರ್‌ ನಟರ ಸಿನಿಮಾ ಬರುವಿಕೆಗೆ ಕಾಯುತ್ತಿದ್ದಾರೆ. ಈಗಾಗಲೇ ರಾಬರ್ಟ್‌,ಯುವರತ್ನ,ಸಲಗ,ಕೋಟಿಗೊಬ್ಬ 3 ಸಿನಿಮಾ ರಿಲೀಸ್‌ ಮಾಡೋದಕ್ಕೆ ಕಾಯುತ್ತಿದ್ದು, ಇದೀಗ ಪೊಗರು ಚಿತ್ರತಂಡ ಕೂಡ ರಿಲೀಸ್‌ಗೆ ರೆಡಿಮಾಡಿಕೊಳ್ತಿದೆ. ಅಂದುಕೊಂಡಂತೆ ಆದರೆ ಡಿಸೆಂಬರ್‌ 25ರಂದು ಚಿತ್ರವನ್ನು ತೆರೆಮೇಲೆ ತರಲು ಪ್ಲಾನ್‌ ಮಾಡಿಕೊಳ್ಳಲಾಗುತ್ತಿದ್ದು, ಇದೇ ವೇಳೆ ರಾಬರ್ಟ್‌ ಚಿತ್ರವನ್ನು ತೆರೆ ಮೇಲೆ ತರಲು ಪ್ಲಾನ್‌ ಕೂಡ ನಡೆಯುತ್ತಿದೆ.

ಹಾಗೇನಾದ್ರು ರಾಬರ್ಟ್‌ ಡಿಸೆಂಬರ್‌ 25ಕ್ಕೆ ತೆರೆಗೆ ಬರುಲು ಸಿದ್ಧತೆ ಮಾಡಿಕೊಂಡರೆ ಪೊಗರು ಚಿತ್ರವನ್ನು ಸಂಕ್ರಾಂತಿ ವೇಳೆ ತೆರೆಮೇಲೆ ತರುವುದಾಗಿ ನಂದಕಿಶೋರ್‌ ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಮೂರು ವರ್ಷಗಳಿಂದ ಸಿನಿರಸಿಕರು , ಮತ್ತು ಧ್ರುವ ಅಭಿಮಾನಿಗಳು ಪೊಗರು ದರ್ಶನಕ್ಕಾಗಿ ಕಾಯುತ್ತಿದ್ದು, ಅಭಿಮಾನಿಗಳ ಆಸೆ ಸದ್ಯದರಲ್ಲೇ ಈಡೇರೋ ಎಲ್ಲಾ ಲಕ್ಷಣಗಳು ಕಾಣ್ತಾ ಇದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top