ಕೊನೆಗೂ ಗೆದ್ದ ಟೀಂ ಇಂಡಿಯಾ, ಆ ದಾಖಲೆ ಇಲ್ಲದೆ ವರ್ಷ ಮುಗಿಸಿದ ವಿರಾಟ್

ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಸೋತು ಕೊನೆಯ  ಪಂದ್ಯದಲ್ಲಿ ಗೆಲುವು ಸಾಧಿಸೋ ಮೂಲಕ ವೈಟ್‌ ವಾಶ್‌ನಿಂದ ತಪ್ಪಿಸಿಕೊಂಡ ಟೀಂ ಇಂಡಿಯಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಮೂರನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಎಂದಿನಂತೆ ಓಪನಿಂಗ್‌ ಬ್ಯಾಟ್ಸಮನ್‌ಗಳ ಕಳೆಪೆ ಪ್ರದರ್ಶನದಿಂದ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಲಕ್ಷಣಗಳು ಕಂಡವು.

ಈ ವೇಳೆ ತಂಡಕ್ಕೆ ನೆರವಾಗಿದ್ದು ನಾಯಕ ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧ ಶತಕದ ಮೂಲಕ ತಂಡ ಉತ್ತಮ ಮೊತ್ತ ಕಲೆಹಾಕುವಲ್ಲಿ ಸಹಾಯವಾಯ್ತು ನಂತರ ಜೊತೆಯಾದ ಹಾರ್ಧಿಕ್‌ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಜೋಡಿ  ಆಟಕ್ಕೆ ಆಸ್ಟ್ರೇಲಿಯಾ ಬೌಲರ್‌ಗಳು ತತ್ತರಿಸಿ ಹೋದ್ರು, ಕೊನೆಯ ಐವತ್ತು ಎಸೆತಗಳಲ್ಲಿ 100ರನ್‌ ಕಲೆಹಾಕಿದ ಈ ಜೋಡಿ ತಂಡದ ಮೊತ್ತವನ್ನು 302ಕ್ಕೆ ಮುಟ್ಟಿಸಿತು, ಆ ಮೂಲಕ ಆಸ್ಟ್ರೇಲಿಯಾಕೆ ಸವಾಲಿ ಮೊತ್ತವನ್ನು ನೀಡಿತು, ಇನ್ನು ಆಸ್ಟ್ರೇಲಿಯಾ ವಿರುದ್ಧ ಇಂದಿನ ಪಂದ್ಯದಲ್ಲಿ ಕರಾರುವಕ್ಕಾದ ಬೌಲಿಂಗ್‌ ನಡೆಸಿದ ಟೀಂ ಇಂಡಿಯಾ ಬೌಲರ್‌ಗಳು ಉತ್ತಮ ದಾಳಿ ನಡೆಸುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾದ್ರು,

ಟೀಂ ಇಂಡಿಯಾ ನೀಡಿದ್ದ 303ರನ್‌ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಗದ ಆಸ್ಟ್ರೇಲಿಯಾ  289  ರನ್‌ಗಳನ್ನು ಕಲೆಹಾಕುವ ಮೂಲಕ ಸೋಲನ್ನು ಕಂಡಿತು ಇನ್ನು ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ನಟರಾಜ್‌ ಕೊಟ್ಟ ಅವಕಾಶವನ್ನು ಸದುಪಯೋ ಪಡಿಸಿಕೊಂಡು ಉತ್ತಮ ದಾಳಿ ನಡೆಸುವ ಜೊತೆಯಲ್ಲಿ ತಂಡದ ಗೆಲುವಿಗೆ ಸಹಕಾರಿಯಾದ್ರು    ಓವರ್‌ಗಳಲ್ಲಿ   10ಓವರ್‍ಗೆ  70ರನ್ ನೀಡಿ 2 ವಿಕೆಟ್  ವಿಕೆಟ್‌ ಪಡೆದ್ರು. ಇದೀಗ ನಟರಾಜ್‌ ಅವರ ಪ್ರದರ್ಶನಕ್ಕೆ ಟ್ವೀಟರ್‌ನಲ್ಲಿ ಶ್ಲಾಘಿಸುತ್ತಿದ್ದು, ಕಠಿಣ ಪ್ರರಿಶ್ರಮಕ್ಕೆ ಉತ್ತಮ ಫಲಿತಾಂಶ ಸಿಕ್ಕಿದೆ ಎಂದು ಅಭಿನಂದಿಸುತ್ತಿದ್ದಾರೆ.

ಇನ್ನು ಇಂದಿನ ಪಂದ್ಯದಲ್ಲಿ 63ರನ್‌ಗಳಿಸುವ ಮೂಲಕ ವಿರಾಟ್‌ ಅತಿ ವೇಗವಾಗಿ 12 ಸಾವಿರ ರನ್‌ ಗಳಿಸಿದ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರವಾದ್ರು, ಸಚಿನ್‌ 300 ಇನ್ನಿಂಗ್ಸ್‌ನಲ್ಲಿ 12 ಸಾವಿರ ರನ್‌ ಕಲೆಹಾಕಿದ್ರೆ , ವಿರಾಟ್‌ 242 ಇನ್ನಿಂಗ್ಸ್‌ನಲ್ಲಿ ಕಲೆಹಾಕುವ ಮೂಲಕ ಸಚಿನ್‌ ದಾಖಲೆಯನ್ನು ಸರಿಗಟ್ಟಿದ್ರು,

ಇನ್ನು 12 ಸಾವಿರ ರನ್ ಪೂರೈಸಿದ ವಿರಾಟ್ ಕೊಹ್ಲಿ 2009ರಿಂದ ಮಾಡಿಕೊಂಡು ಬಂದ ದಾಖಲೆಯನ್ನು ಮಾಡುವುದರಲ್ಲಿ ಮಾತ್ರ ಈ ಬಾರಿ ಕೊಹ್ಲಿಗೆ ಆಗಲಿಲ್ಲ, ಹೌದು ಪ್ರತಿ ವರ್ಷವೂ ಏಕದಿನ ಸರಣಿಯಲ್ಲಿ ಶತಕ ಸಿಡಿಸುತ್ತಿದ್ದ ವಿರಾಟ್ ಕೊಹ್ಲಿ 2020ರ ವರ್ಷದಲ್ಲಿ ಯಾವುದೇ ಶತಕ ಸಿಡಸಿದ ವರ್ಷವನ್ನು ಮುಕ್ತಾಯಗೊಳಿಸುವು ಮೂಲಕ ಪ್ರತಿ ವರ್ಷ ಮಾಡುತ್ತಿದ್ದ ದಾಖಲೆಯನ್ನು ಈ ಬಾರಿ ಮಾಡಲು ವಿರಾಟ್ ಕೊಹ್ಲಿಗೆ ಸಾಧ್ಯವಾಗಲಿಲ್ಲ. 

ಇನ್ನು ವೈಟ್‌ ಬಾಲ್‌ ಕ್ರಿಕೆಟ್‌ಗೆ ಜಡೇಜಾ ಮತ್ತು ಪಾಂಡ್ಯ ಯೋಗ್ಯರಲ್ಲ ಅಂತ ಹೇಳಿದ್ದ ಮಂಜ್ರೆಕರ್‌ಗೆ ಇಂದು ಜಡೇಜಾ ಮತ್ತು ಪಾಂಡ್ಯ ತಮ್ಮ ಆಟದ ಮೂಲಕವೇ ಉತ್ತರವನ್ನು ಕೊಟ್ಟಿದ್ದಾರೆ. ಪಾಂಡ್ಯ 76 ಬಾಲ್‌ಗಳಲ್ಲಿ 92, ಜಡೇಜಾ 50 ಬಾಲ್‌ಗಳಲ್ಲಿ 66ರನ್‌ ಸಿಡಿಸೋ ಮೂಲಕ ಮಂಜ್ರೇಕರ್‌ಗೆ ಉತ್ತರವನ್ನು ನೀಡಿದ್ದಾರೆ.

ಒಟ್ಟಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಗೆಲುವನ್ನು ಸಾಧಿಸೋ ಮೂಲಕ ವೈಟ್‌ವಾಶ್‌ನಿಂದ ಟೀಂ ಇಂಡಿಯಾ ತಪ್ಪಿಸಿಕೊಂಡ್ರೆ ಇತ್ತ ವಿರಾಟ್‌ ಕೊಹ್ಲಿ ಮತ್ತೊಮ್ಮೆ ದಾಖಲೆಯನ್ನು ನಿರ್ಮಿಸೋ ಮೂಲಕ ದಾಖಲೆಗಳಿಗೆ ನಾನೇ ಸರದಾರ ಅನ್ನೋದನ್ನ ಮತ್ತೊಮ್ಮೆ ಹೇಳಿದ್ರು

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top