ಕೆ ಎಲ್ ರಾಹುಲ್ ಬಳಿ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವನ್ನು ಸಾಧಿಸಿತು, ಇನ್ನು ಟೀಂ ಇಂಡಿಯಾ ಮೊದಲ ಪಂದ್ಯ ಸೋಲಲು ಪ್ರಮುಖ ಕಾರಣ ಹುಡುಕುವುದಾದರೆ, ಫಿಲ್ಡಿಂಗ್‍ನಲ್ಲಿ ಕ್ಯಾಚ್ ಕೈ ಚೆಲ್ಲಿದ್ದು ಕಾರಣವಾದ್ರೆ, ಬೌಲಿಂಗ್‍ನಲ್ಲಿ ಎಡವಿದ್ದು ಸಹ ಪ್ರಮುಖ ಕಾರಣ ಅಂತಾನೇ ಹೇಳಬಹುದು. ಇದೀಗ ನಾಳೆ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳು ಇದೆ. ತಂಡದಲ್ಲಿ ಬೌಲಿಂಗ್‍ನಲ್ಲಿ ಕೊಂಚ ಮಟ್ಟಿನ ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಗಿದ್ದು, ಹೀಗಾಗಿ ಟೀಂ ಇಂಡಿಯಾದಲ್ಲಿ ಈ ಬೌಲರ್‍ಗೆ ಅವಕಾಶ ಲಭಿಸಲಿದ್ಯ ಅನ್ನೊ ಕುತೂಹಲ ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಶುರುವಾಗಿದೆ. ಹೌದು ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿರೋ ಯಾರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್ ಅವರನ್ನು 11ರ ಬಳಗದಲ್ಲಿ ಆಡಿಸುವ ಮೂಲಕ ಒಂದಿಷ್ಟು ಬದಲಾವಣೆ ಮಾಡುತ್ತಾರ ಕಾದುನೋಡಬೇಕು. ಫಾಸ್ಟ್ ಬೌಲಿಂಗ್ ಪಿಚ್‍ನಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್ ಅವರಿಗೆ ಅವಕಾಶ ಕೊಡುವ ಮೂಲಕ ಆಸ್ಟ್ರೇಲಿಯಾ ಆಟಗಾರರನ್ನು ಕಟ್ಟಿಹಾಕುವ ಪ್ಲಾನ್ ಟೀಂ ಇಂಡಿಯಾದ್ದು, ಹಾಗಾದ್ರೆ ನಾಳೆಯ ಪಂದ್ಯದಲ್ಲಿ ಏಕದಿನ ಪಂದ್ಯಕ್ಕೆ ಟಿ ನಟರಾಜನ್ ಪಾದಾರ್ಪಣೆ ಮಾಡಲಿದ್ದಾರಾ ಕಾದುನೋಡಬೇಕು.

ಮೊದಲ ಏಕದಿನ ಪಂದ್ಯದಲ್ಲಿ ಐಪಿಎಲ್‍ನಲ್ಲಿ ಭರ್ಜರಿ ಫಾರ್ಮ್‍ನಲ್ಲಿ ಇದ್ದ ಟೀಂ ಇಂಡಿಯಾ ಆಟಗಾರರು ಕಳಪೆ ಪ್ರದರ್ಶನದ ಮೂಲಕ ತಂಡದ ಸೋಲಿಗೆ ಕಾರಣವಾದ್ರೆ, ಇತ್ತ ಆಸ್ಟ್ರೇಲಿಯಾ ತಂಡದಲ್ಲಿ ಐಪಿಎಲ್ ತಂಡದಲ್ಲಿ ಕಳಪೆ ಫಾರ್ಮ್ ತೋರಿದ್ದ ಆಟಗಾರರು ಭರ್ಜರಿ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿಗೆ ಕಾರಣವಾಗಿದ್ರು, ಆರ್‍ಸಿಬಿ ಪರ ಆಡಿದ್ದ ಫಿಂಚ್ ಶತಕ ಸಿಡಿಸಿದ್ರೆ,ಇತ್ತ ರಾಜಸ್ತಾನ್ ರಾಯಲ್ಸ್ ಪರ ಆಡುತ್ತಿದ್ದ ಸ್ಟೀವ್ ಸ್ಮಿತ್ ಕೂಡ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣವಾದ್ರು, ಇನ್ನು ಇತ ಪಂಜಾಬ್ ತಂಡದಲ್ಲಿ ಕಳಪೆ ಪ್ರದರ್ಶನ ತೋರಿದ್ದ ಮ್ಯಾಕ್ಸ್ ವೆಲ್ ಆಸ್ಟ್ರೇಲಿಯಾ ಪರ ಭರ್ಜರಿ ಆಟವಾಡಿ 45ರನ್‍ಗಳನ್ನು ಸಿಡಿಸಿದ್ರು, ಇದೀಗ ಮ್ಯಾಕ್ಸ್ ವೆಲ್ ಬ್ಯಾಟಿಂಗ್ ವಿಚಾರವಾಗಿ ಕೆ ಎಲ್ ರಾಹುಲ್ ಅವರನ್ನು ಟ್ರೋಲ್ ಮಾಡಿದ್ದು, ಮ್ಯಾಕ್ಸ್‍ವೆಲ್ ಬ್ಯಾಟ್ ಮಾಡುತ್ತಿರುವಾಗ ಕೀಪಿಂಗ್ ಮಾಡುತ್ತಿದ್ದ ಕೆ ಎಲ್ ರಾಹುಲ್ ಮನಸ್ಥಿತಿಯ ಬಗ್ಗೆ ಹಲವರು ಟ್ರೋಲ್ ಮಾಡಿದ್ದ, ನನ್ನ ನಾಯಕತ್ವದಲ್ಲಿ ಕೆಟ್ಟ ಪ್ರದರ್ಶನ ತೋರಿದ್ದ ಗ್ಲೆನ್ ಮ್ಯಾಕ್ಸ್‍ವೆಲ್ ಇದೀಗ ಬ್ಯಾಟಿಂಗ್ ಹೇಗೆ ಮಾಡುತ್ತಿದ್ದಾನೆ ಎಂದು ಯೋಜಿಸುವ ಮುಖಭಾವದೊಂದಿಗೆ ರಾಹುಲ್ ಫೋಟೋ ಹಾಕಿ ಟ್ರೋಲ್ ಮಾಡಿದ್ದಾರೆ.

ವರುಣ್ ಎಂಬುವವರು ಟ್ವೀಟರ್‍ನಲ್ಲಿ ಫೋಟೋ ಹಾಕಿ ಮ್ಯಾಕ್ಸ್ ವೆಲ್ ಬ್ಯಾಟಿಂಗ್ ಮಾಡಿ ರಾಹುಲ್ ಪರಿಸ್ಥಿತಿ ಹೀಗಾಗಿದೆ ಎಂದು ಬರೆದಿದು ಮ್ಯಾಕ್ಸ್‍ವೆಲ್ ಅವರನ್ನು ಟ್ಯಾಗ್ ಮಾಡಿದ್ದರು,, ಇದೀಗ ಈ ಪೋಸ್ಟ್‍ಗೆ ಮ್ಯಾಕ್ಸ್‍ವೆಲ್ ಪ್ರತಿಕ್ರಿಯೆ ನೀಡಿದ್ದು `ನಾನು ಬ್ಯಾಟಿಂಗ್ ಮಾಡುವ ವೇಳೆ ರಾಹುಲ್ ಬಳಿ ಕ್ಷಮೆ ಕೇಳಿದ್ದೇನೆ ಎಂದು ಹೇಳಿದ್ದಾರೆ.

ಹಾಗಾದ್ರೆ ನಾಳೆಯ ಪಂದ್ಯದಲ್ಲಿ ಟೀಂ ಇಂಡಿಯಾ ಟಿ ನಟರಾಜನ್ ಅವರಿಗೆ ಅವಕಾಶ ಕೊಡಬೇಕಾ, ಮ್ಯಾಕ್ಸ್‍ವೆಲ್ ಕೆಎಲ್ ರಾಹುಲ್ ಬಳಿ ಕ್ಷಮೆ ಕೇಳಿದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top