ಕೆ.ಎಲ್ ರಾಹುಲ್‍ಗೆ ಸೂಪರ್ ಸಲಹೆ ನೀಡಿದ ಬ್ರಿಯಾನ್ ಲಾರಾ

ಕೆ.ಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ.. ಫ್ಯೂಚರ್ ಟೀಂ ಇಂಡಿಯಾದ ನಾಯಕ ಅಂತ ಗುರುತಿಸಿಕೊಂಡಿರೋರು, ಸದ್ಯ ಐಪಿಎಲ್‍ನಲ್ಲಿ ಉತ್ತಮ ಫಾರ್ಮ್‍ನಲ್ಲಿರೋ ಕೆಎಲ್ ರಾಹುಲ್ ಪಂಜಾಬ್ ತಂಡದಲ್ಲಿ ಬ್ಯಾಟಿಂಗ್ ಜೊತೆಯಲ್ಲಿ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ಟೀಂ ಇಂಡಿಯಾದಲ್ಲಿ ಎಂಎಸ್ ಧೋನಿಯಿಂದ ತೆರವಾದ ಕೀಪಿಂಗ್ ಜಾಗಕ್ಕೆ ಕೆಎಲ್ ರಾಹುಲ್ ಸೂಕ್ತವಾದ ವ್ಯಕ್ತಿ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಟೀಂ ಇಂಡಿಯಾದಲ್ಲಿ ಸ್ಥಾನ ಖಾಯಂಪಡಿಸಿಕೊಳ್ಳ ಬೇಕು ಅಂದ್ರೆ ರಾಹುಲ್ ಕೀಪಿಂಗ್ ಅನಿವಾರ್ಯವಾಗಿ ಮಾಡಬೇಕಾಗಿದೆ.

ಆದ್ರೆ ಇದೀಗ ಕೆಎಲ್ ರಾಹುಲ್‍ಗೆ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಅಮೂಲ್ಯವಾದ ಸಲಹೆಯನ್ನು ನೀಡಿದ್ದಾರೆ. ರಾಹುಲ್ ವಿಕೆಟ್ ಕೀಪಿಂಗ್ ಕಡೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಕಿಲ್ಲ, ಅವರು ತಮ್ಮ ಬ್ಯಾಟಿಂಗ್ ಬಗ್ಗೆ ಹೆಚ್ಚು ಗಮನಹರಿಸಲಿ, ಟೀಂ ಇಂಡಿಯಾದ ವಿಚಾರಕ್ಕೆ ಬಂದರೆ ರಾಹುಲ್ ಕೀಪಿಂಗ್ ವಿಚಾರವಾಗಿ ತೀರಾ ಯೋಚನೆ ಮಾಡಬೇಕಾದ ಅಗತ್ಯವಿಲ್ಲ, ರಾಹುಲ್ ಉತ್ತಮ ಬ್ಯಾಟ್ಸಮನ್ ಅವರು ಬ್ಯಾಟಿಂಗ್ ಕಡೆ ಹೆಚ್ಚು ಗಮನ ಹರಿಸಲಿ, ತಂಡಕ್ಕೆ ಹೆಚ್ಚು ಸ್ಕೋರ್ ನೀಡುವ ಕಡೆ ಆಧ್ಯತೆ ನೀಡಬೇಕು ರಾಹುಲ್ ಸ್ಟೈಲ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದು, ರಾಹುಲ್ ಬ್ಯಾಟಿಂಗ್ ಕಡೆ ಹೆಚ್ಚು ಗಮನ ಹರಿಸಿದ್ರೆ ಒಳಿತು ಎಂದು ಸಲಹೆ ನೀಡಿದ್ದಾರೆ.

ಕೆಎಲ್ ರಾಹುಲ್ ಬ್ಯಾಟಿಂಗ್ ಜೊತೆಯಲ್ಲಿ ಕೀಪಿಂಗ್ ಕಡೆಗೂ ಹೆಚ್ಚು ಗಮನ ನೀಡಬೇಕಾ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top