ಕೆಲಸ ಇಲ್ಲದವರಿಗೆ ʻಅಮೆಜಾನ್‌ʼ ಕೊಡ್ತಿದೆ ಮನೆಯಲ್ಲೇ ಕೆಲಸ ಕೈ ತುಂಬ ಸಂಬಳ..

ಕೊರೋನಾ ಬಂದ ಮೇಲೆ ಅನೇಕರು ಕೆಲಸವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕಾಗಿ ಈಗ ಕೆಲಸವಿಲ್ಲದವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಇನ್ನು ಕೊರೊನಾ ಬಂದ ಮೇಲೆ ವರ್ಕ್‌ ಫ್ರಂ ಹೋಮ್‌ ಕಾನ್ಸೆಪ್ಟ್‌ ಕೂಡ ಹೆಚ್ಚಾಗಿದ್ದು, ಇದೀಗ ಕೆಲಸ ಇಲ್ಲದವರು ಮನೆಯಲ್ಲಿ ಕುಳಿತು ಕೆಲಸ ಮಾಡಿ ಕೈತುಂಬಾ ಸಂಬಳ ಪಡೆಯಬಹುದಾಗಿದೆ. ಈ ಒಂದು ಅವಕಾಶವನ್ನು ಕಲ್ಪಿಸಿಕೊಡುತ್ತಿರುವುದು ಅಮೆಜಾನ್‌. ಅಮೆಜಾನ್‌ ಈಗ ವರ್ಕ್‌ ಫ್ರಂ ಹೋಮ್‌ಗೆ ಅವಕಾಶವನ್ನು ನೀಡ್ತಾ ಇದೆ. ಇದೀಗ ಅಮೆಜಾನ್‌ ಸೆಲ್ಲರ್‌ ಪಾರ್ಟನ್‌ ಸಪೋರ್ಟ್‌ ಕೆಲಸವನ್ನು ಮನೆಯಲ್ಲಿಯೇ ಕುಳಿತು ಮಾಡಬಹುದಾಗಿದೆ. ಬಿಎಸ್ಸಿ,ಬಿಎ,ಬಿಕಾಂ,ಬಿಬಿಎಂ ಪದವಿಧರರು ಈ ಕೆಲಸಕ್ಕೆ ಅಪ್ಲಿಕೇಶನ್‌ ಹಾಕಬಹುದು, ಪ್ರೆಶರ್‌ಗಳಿಗೆ ಅವಕಾಶ ಇದ್ದು, ಈ ಕೆಲಸಕ್ಕೆ ಅಪ್ಲಿಕೇಶನ್‌ ಹಾಕುವವರಿಗೆ ಇಂಗ್ಲೀಷ್‌ ಮಾತನಾಡಲು ಮತ್ತು ಬರೆಯಲು ಬರಬೇಕು. ಇನ್ನು ೨೪ಗಂಟೆ ಕೆಲಸ ಇರುವುದರಿಂದ ರಾತ್ರಿ ಪಾಳಿಯಲ್ಲೂ ಕೆಲಸ ಮಾಡಲು ಸಿದ್ಧರಿರಬೇಕು.

ಇನ್ನು ನಾಲ್ಕು ತಿಂಗಳು ಯಾವುದೇ ರಜೆ ಇರುವುದಿಲ್ಲ, ವಾರದಲ್ಲಿ ೫ ದಿನ ಕೆಲಸವಿದ್ದು, ಎರಡು ದಿನ ವಾರದ ರಜೆ ಇರಲಿದೆ. ಅಮೇಜಾನ್‌ ಈ ಕೆಲಸಕ್ಕೆ ಅರ್ಜಿ ಸಲ್ಲಿಸುವವರು, ಡೆಸ್ಕ್‌ಟಾಪ್‌ ಅಥವಾ ಲ್ಯಾಪ್‌ಟಾಪ್‌ ಹೊಂದಿದ್ದು, ವಿಂಡೋಸ್‌ ಓಎಸ್‌,ಮೈಕ್ರೋಸಾಫ್ಟ್‌,ಔಟ್‌ಲುಕ್‌ ಮತ್ತು ಎಂಎಸ್‌ ಆಫೀಸ್‌ ಕೆಲಸ ಗೊತ್ತಿರಬೇಕು. ಇನ್ನು ೨೦ಎಂಬಿಪಿಎಸ್‌ ಇಂಟರ್‌ನೆಟ್‌ ಫಾಸ್ಟ್‌ ಹೊಂದಿರಬೇಕು, ಕರೆಂಟ್‌ ಹೋದಾಗ ಬ್ಯಾಕಪ್‌ ಪವರ್‌ ಹೊಂದಿದ್ದರೆ ಈಗಲೇ ನೀವು ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್‌ ಅನ್ನು ಒತ್ತಿ.

https://jobvision.in/amazon-hiring-2020-selling-partner-support-associate/

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top