ಕೆಜಿಎಫ್ 2 ಚಿತ್ರದಿಂದ ಬಂತು ಶಾಕಿಂಗ್ ಸುದ್ದಿ..!

ಕೆಜಿಎಫ್ 2 ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲಗಳು ಹೆಚ್ಚಾಗಿದ್ದು, ಚಿತ್ರ ಯಾವಾಗ ರಿಲೀಸ್ ಆಗಲಿದೆ ಅನ್ನೋ ಕ್ಯೂರ್ಯಾಸಿಟಿ ಸಿನಿರಸಿಕರಲ್ಲಿ ಮನೆಮಾಡಿದೆ. ಇದರ ನಡುವೆಯಲ್ಲಿಯೇ ಚಿತ್ರತಂಡದಿಂದ ಹೊಸ ಹೊಸ ಸುದ್ದಿಗಳು ಸಹ ಹೊರ ಬರ್ತಾ ಇದೆ. ಈಗಾಗಲೇ ಚಿತ್ರತಂಡವನ್ನು ರವೀನಾ ಟಂಡನ್ ಸೇರಿಕೊಂಡಿದ್ದು, ಈಗ ತೆಲುಗಿನ ಸ್ಟಾರ್ ನಟ ಕೂಡ ಕೆಜಿಎಫ್ 2 ಚಿತ್ರತಂಡವನ್ನು ಸೇರಿಕೊಂಡಿರೋ ವಿಷಯವನ್ನು, ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ರು,

https://twitter.com/prashanth_neel/status/1226382258510028802/photo/1

ಹೌದು ಟಾಲಿವುಡ್‍ನ ನಟ ರಾವ್ ರಮೇಶ್ ಅವ್ರು ಕೆಜಿಎಫ್ ಚಿತ್ರತಂಡವನ್ನು ಸೇರಿಕೊಂಡಿರೋ ಸುದ್ದಿಯನ್ನ ಪ್ರಶಾಂತ್‍ನೀಲ್ ತಿಳಿಸಿದ್ರು,

https://twitter.com/prashanth_neel/status/1226757116376956929/photo/1

ಆದ್ರೆ ಈ ಎಲ್ಲಾಸುದ್ದಿಗಳ ನಡುವೆ ಕೆಜಿಎಫ್ ಚಿತ್ರತಂಡದಿಂದ ಶಾಕಿಂಗ್ ಸುದ್ದಿಯೊಂದು ಸಹ ಹೊರಬಿದ್ದಿದೆ ಅದುವೇ ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕೆ ಅಚ್ಚುಕಟ್ಟಾಗಿ ಕತ್ತರಿ ಪ್ರಯೋಗ ಮಾಡಿದ್ದ ಶ್ರೀಕಾಂತ್ ಚಿತ್ರದಿಂದ ಹೊರಬಂದಿದ್ದಾರಂತೆ. ಪ್ರಶಾಂತ್ ನೀಲ್ ಜೊತೆ ಉಗ್ರಂ,ಕೆಜಿಎಫ್ ಚಿತ್ರವನ್ನು ಮಾಡಿ ಸೂಪರ್ ಹಿಟ್ ಎಡಿಟರ್ ಅಂತ ಅನಿಸಿಕೊಂಡಿದ್ದ ಶ್ರೀಕಾಂತ್, ಚಾಪ್ಟರ್ 2 ಚಿತ್ರದಿಂದ ಹೊರ ನಡುವೆಯ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದ್ರೆ ಚಿತ್ರತಂಡದಿಂದ ಎಡಿಟರ್ ಶ್ರೀಕಾಂತ್ ಯಾವ ಕಾರಣಕ್ಕೆ ಹೊರ ಬಂದಿದ್ದಾರೆ ಅನ್ನೋ ಮಾಹಿತಿ ಇನ್ನು ತಿಳಿದುಬಂದಿಲ್ಲ. ಆದ್ರೆ ಶ್ರೀಕಾಂತ್ ಚಾಪ್ಟರ್ 2 ಚಿತ್ರದಿಂದ ಹೊರ ನಡೆಯುತ್ತಿದ್ದಂತೆ, ಅವರ ಜಾಗಕ್ಕೆ ಶ್ರೀಕಾಂತ್ ಅವರ ಶಿಷ್ಯ ಉಜ್ವಲ್ ಅವರನ್ನು ಕೆಜಿಎಫ್ ಚಿತ್ರತಂಡ ಆಯ್ಕೆಮಾಡಿಕೊಂಡಿದ್ದು, ಚಿತ್ರದ ಎಡಿಟಿಂಗ್ ಕೆಲಸವನ್ನು ಮಾಡುತ್ತಿದೆಯಂತೆ. ಈ ಹಿಂದೆ ಉಜ್ವಲ್ ಶ್ರೀಕಾಂತ್ ಜೊತೆ ಸೇರಿ ಕೆಜಿಎಫ್ ಚಾಪ್ಟರ್ 1 ಚಿತ್ರದಲ್ಲಿ ಕೂಡ ಕೆಲಸ ಮಾಡಿದ್ದು, ಉಜ್ವಲ್ ಅವರ ಕೆಲಸವನ್ನು ಮೆಚ್ಚಿರುವ ಪ್ರಶಾಂತ್ ನೀಲ್, ಚಾಪ್ಟರ್ 2ಗೆ ಉಜ್ವಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇನ್ನು ಪ್ರಶಾಂತ್ ನೀಲ್‍ಗೂ ಉತ್ತಮ ಎಡಿಟಿಂಗ್ ತಿಳುವಳಿಕೆ ಇದ್ದು, ಚಿತ್ರದ ಎಡಿಟಿಂಗ್ ಅನ್ನು ಖುದ್ದು ಪ್ರಶಾಂತ್ ನೀಲ್ ಅವರೇ ಮಾಡಿಸುವುದರಿಂದ,ತಮಗೆ ಬೇಕಾದ ರೀತಿಯಲ್ಲಿ ಹೊಸಬರ ಕೈಯಲ್ಲಿ ಕೆಲಸವನ್ನು ತೆಗೆಸುವುದರಲ್ಲಿ ನಿಸ್ಸಿಮಾರಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top