ಕೆಜಿಎಫ್ 2ಗೆ ಸಂಜಯ್‌ ದತ್ ಎಂಟ್ರಿ ಕನ್ಫರ್ಮ್..!

ಸ್ಯಾಂಡಲ್ವುಡ್ ನ ಗೋಲ್ಡನ್ ಸಿನಿಮಾ ಕೆಜಿಎಫ್ ಮುಂದುವರೆದ ಭಾಗ ಕೆಜಿಎಫ್ 2 ಬೆಂಗಳೂರು ಮತ್ತು ಮೈಸೂರಿನಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಶುರುಮಾಡಿದ್ದಾರೆ.. ಈಗಾಗಲೇ‌ ಚಿತ್ರದ ನರಾಚಿ ನಗರವನ್ನು ಸೃಷ್ಟಿಸಿ ಚಿತ್ರದ ಬಹುತೇಕ ಭಾಗವನ್ನು ಚಿತ್ರೀಕರಿಸಿದ್ದಾರೆ. ಆದ್ರೆ ಈಗ ಕೆಜಿಎಫ್ ತಂಡದಿಂದ ಹೊಸದೊಂದು ನ್ಯೂಸ್ ಹೊರ ಬಂದಿದೆ. ಹೌದು ಕೆಜಿಎಫ್ ಮೊದಲ ಭಾಗದಲ್ಲಿ ಚಿತ್ರದ ಜೀವಾಳವಾಗಿದ್ದ ಅಧೀರ ಪಾತ್ರದಲ್ಲಿ ಬಾಲಿವುಡ್ ನ ಸಂಜಯ್ ದತ್ ನಟಿಸ್ತಾರೆ ಅನ್ನೋ ಸುದ್ದಿ ಇತ್ತು ಆದ್ರೆ ಈಗ ಸಂಜು ಬಾಬಾ ಚಿತ್ರ ತಂಡವನ್ನು ಸೇರೋದು ಪಕ್ಕಾ ಆಗಿದೆ.

ಹೌದು ಜುಲೈ 29ಕ್ಕೆ ಸಂಜು ಬಾಬಾ ಹುಟ್ಟು ಹಬ್ಬ ಇದ್ದು ಅಂದು ಸಂಜಯ್ ದತ್ ಅಧೀರನ ರೋಲ್ ನ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಆ ಮೂಲಕ ಸಂಜು ಬಾಬಾ ಬರೋದು ಪಕ್ಕಾ ಆಗಲಿದೆ..ಇನ್ನು ಚಾಪ್ಟರ್ 2ಗೆ ಬಾಲಿವುಡ್ ನಿಂದ ರವೀನಾ ಟಂಡನ್ ಕೂಡ ಬರ್ತಾರೆ ಅನ್ನೋ ಸುದ್ದಿ ಇದ್ದು ಮುಂದಿನ‌ ದಿನಗಳಲ್ಲಿ ಕಾದುನೋಡಬೇಕು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top