ಕೆಜಿಎಫ್ ಗರುಡನಿಗಿ ಬಂಪರ್ ನಲ್ಲಿ ಬಂಪರ್ ಆಫರ್!

ಕೆಜಿಎಫ್‍ನಲ್ಲಿ ರಾಕಿಭಾಯ್ ಪಾತ್ರದ ರೀತಿ ಸಖತ್ ಫೇಮಸ್ ಆದ ಪಾತ್ರ ಅಂದ್ರೆ ಅದು ಗರುಡ ಪಾತ್ರ, ಇನ್ನು ಆ ಪಾತ್ರದಲ್ಲಿ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು ರಾಮ್ ಅನ್ನೋ ಸಖತ್ ರಗಡ್ ಲುಕ್‍ನ ಮನುಷ್ಯ, ಮೊದಲ ಚಿತ್ರದಲ್ಲೇ ಸೂಪರ್ ಡ್ಯೂಪರ್ ಎಂಟ್ರಿ ಕೊಟ್ಟು ಜನಪ್ರಿಯತೆ ಗಳಿಸಿದ ರಾಮ್‍ಗೆ ತೆಲುಗು ಮತ್ತು ತಮಿಳಿನಿಂದ ವಿಲನ್ ರೋಲ್‍ಗೆ ಸಖತ್ ಆಫರ್ ಕೂಡ ಬರತೊಡಗಿತು, ಆದ್ರೆ ಇದೀಗ ರಾಮ್ ತಮ್ಮ ಎರಡನೇ ಚಿತ್ರವನ್ನು ಕನ್ನಡದಲ್ಲಿ ನಟಿಸ್ತಾ ಇದ್ದು, ಹರಿ ಸಂತು ನಿರ್ದೇಶನದ ಬಂಪರ್ ಚಿತ್ರಕ್ಕೆ ರಾಮ್ ವಿಲನ್ ಆಗಿ ಆಯ್ಕೆ ಯಾಗಿದ್ದಾರೆ.

ಇನ್ನು ಈ ಚಿತ್ರದಲ್ಲಿ ಸ್ಯಾಂಡಲ್‍ವುಡ್‍ಗೆ ಬಜಾರ್ ಮೂಲಕ ಎಂಟ್ರಿ ಕೊಟ್ಟಿದ್ದ ಧನ್ವೀರ್ `ಬಂಪರ್’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ತಾ ಇದ್ದು ಧನ್ವಿರ್‍ಗೆ ಈಗ ಖಡಕ್ ವಿಲನ್ ಆಗಿ ಗರುಡ ಖ್ಯಾತಿಯ ರಾಮ್ ಎಂಟ್ರಿಕೊಟ್ಟಿರೋದು ಚಿತ್ರದ ಮೇಲೆ ಇನ್ನಷ್ಟು ನಿರೀಕ್ಷೆಗಳು ಹೆಚ್ಚಾಗಿವೆ, ಈಗಾಗಲೇ ಬಂಪರ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಚಿತ್ರಕ್ಕೆ ಭರಾಟೆ ಖ್ಯಾತಿಯ ಸುಪ್ರಿತ್ ಬಂಡವಾಳ ಹೂಡಿದ್ದು, ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಸದ್ಯ ಬಂಪರ್ ಚಿತ್ರಕ್ಕೆ ಗರುಡ ರಾಮ್ ಎಂಟ್ರಿ ಕೊಡುವ ಮೂಲಕ ಚಿತ್ರದ ಮೈಲೇಜ್ ಇನ್ನಷ್ಟು ಹೆಚ್ಚಿದಂತಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top