ಕೆಜಿಎಫ್ ಅಬ್ಬರಕ್ಕೆ ಯೂಟ್ಯೂಬ್ ಶೇಕ್

ನೀವ್ ಟೀಸರ್ ಲೀಕ್ ಮಾಡಿ ಸ್ಟೇಟಸ್‍ಗೆ ಹಾಕೋಬಹುದು, ಆದ್ರೆ ಕನ್ನಡ ಸಿನಿಮಾಗೆ ಸ್ಟೇಟಸ್ ತಂದು ಕೊಟ್ಟವರ ಶ್ರಮಕ್ಕೆ ಯಾವತ್ತು ಕನ್ನಡಿಗರು ಕೈ ಬಿಡೋದಿಲ್ಲ, ಯಸ್ ಅದ್ಯಾರೋ ನಾಲಕ್ಕು ಜನ ಹೊಟ್ಟೆಗೆ ಅನ್ನ ತಿನ್ನದೇ ಅದೇನೋ ತಿನ್ನೋ ಕೆಲ್ಸ ಮಾಡಿದ್ರೆ, ಪಟ್ಟ ಶ್ರಮ ಯಾವತ್ತು ವ್ಯರ್ಥ ಆಗೋಲ್ಲ ಅನ್ನೋದಕ್ಕೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಾಕ್ಷಿ, ಟೀಸರ್ ಇನ್ನೇನೂ ನಾಳೆ ರಿಲೀಸ್ ಆಗುತ್ತೆ ಅನ್ನೋವಾಗ್ಲೇ ಹೊಟ್ಟೆಗೆ ಅನ್ನ ತಿನ್ನದವ್ರು ಟೀಸರ್ ಲೀಕ್ ಮಾಡಿದ್ರೆ,

ತಲೆ ಕೆಡಿಸಿಕೊಳ್ಳದ ಚಿತ್ರತಂಡ ನೀವ್ ಎಷ್ಟೇ ಹೊಡೆತ ಕೊಡೋಕೆ ಬಂದ್ರು ಅದನ್ನು ಮೆಟ್ಟಿ ಮುನ್ನುಗ್ತೀವಿ ಅನ್ನೋ ಮೂಲಕ ಲೀಕಾದ ಕೆಲವೇ ಹೊತ್ತಿನಲ್ಲಿ ಯಾವುದೇ ಊಹೇ ಇಲ್ಲದ ರೀತಿ ಟೀಸರ್ ರಿಲೀಸ್ ಮಾಡಿ ಸಿನಿಮಾದ ತಾಕತ್ತು ಏನೂ ಅನ್ನೋದನ್ನ ತೋರಿ ಕಿರಿಗೇಡಿಗಳಿಗೆ ಸರಿಯಾಗೇ ಉತ್ತರ ಕೊಟ್ಟಿದ್ದಾರೆ. ಇನ್ನು ಟೀಸರ್ ವಿಚಾರಕ್ಕೆ ಬರೋಣ, ಒಂದು ಕಾಲ ಇತ್ತು ಅಯ್ಯೋ ಕನ್ನಡ ಸಿನಿಮಾನಾ.. ಕ್ವಾಲಿಟಿ ಇಲ್ಲಾ ಅಂತ ಮೂಗು ಮುರಿತಾ ಇದ್ರು, ಆದ್ರೆ ಈಗ ಕಾಲ ಬದಲಾಗಿದೆ, ಕನ್ನಡ ಸಿನಿಮಾ ಗುರು ಅನ್ನೊ ಲೆವೆಲ್‍ಗೆ ಹೋಗಿದೆ..ಅದಕ್ಕೆ ಸಾಕ್ಷಿ ಕೆಜಿಎಫ್ 2ನ ಒಂದು ಸಣ್ಣ ಟೀಸರ್. ರಿಲೀಸ್ ಆಗಿ ಇನ್ನು 24 ಗಂಟೆನೂ ಕಳೆದಿಲ್ಲ, ಆಗ್ಲೇ 60ಕ್ಕೂ ಹೆಚ್ಚು ಮಿಲಿಯನ್ ವಿವ್ಯೂಸ್ ಮಾಡೋ ಮೂಲಕ ಯೂಟ್ಯೂಬ್‍ನಲ್ಲಿ ಹೊಸ ದಾಖಲೆ ಬರೆದಿದೆ. ಹಾಲಿವುಡ್ ಕಾಲಿವುಡ್,ಟಾಲಿವುಡ್,ಬಾಲಿವುಡ್ ಎಲ್ಲಾ ವುಡ್‍ನಲ್ಲೂ ಈ ಒಂದೇ ಮಾತು ಕೆಜಿಎಫ್ 2.. ಟೀಸರ್‍ನಲ್ಲೇ ಇರೋ ಹಾಗೇ ಪವರ್ ಫುಲ್ ಫೀಪಲ್ಸ್ ಮಿಲ್ ಮೇಕ್ ಪವರ್ ಫುಲ್ ಪ್ಲೇಸ್ ಅನ್ನೋ ಹಾಗೇ ಸ್ಯಾಂಡಲ್‍ವುಡ್‍ನ ಗತ್ತೆ ಅಂತದ್ದು, ಯಾವ ಜನ ಕನ್ನಡ ಚಿತ್ರರಂಗ ಅಂದ್ರೆ ಮೂಗು ಮುರಿಯುತ್ತಿದ್ರೋ ಅಂತಹ ಜನರೇ ಇಂದು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವ ಹಾಗೇ ಮಾಡಿದೆ ಕೆಜಿಎಫ್.. ಇನ್ನು ಕೆಜಿಎಫ್ ಕೇವಲ ಟೀಸರ್ ರಿಲೀಸ್ ಮಾಡಿರೋ ಅರ್ಭಟಕ್ಕೆ ಒಂದಷ್ಟು ಹುಳುಕು ಮನಸ್ಸಿನ ಕೊಳಕು ಜನ ಸದ್ಯ ಟೀಸರ್‍ನಲ್ಲಿ ಇರೋ ಸೀನ್ ನೋಡಿ ಟಾಲಿವುಡ್ ರೀತಿ ಕಾರ್ ಹಾರಿಸಿದ್ದಾರೆ ಅಷ್ಟೇ ಅಂತ ಗೇಲಿ ಮಾಡಿದ್ರು,

ಇನ್ನು ದೊಡ್ಡ ದೊಡ್ಡ ಮಹಾಶಯರ ಸೀನ್ ಕಾಫಿ ಮಾಡಿದ್ದಾರೆ ಅಂತ ಟ್ರೋಲ್ ಮಾಡೋಕು ಶುರು ಮಾಡಿದ್ರು, ಆದ್ರೆ ಅಂತಹ ಮಹಾಶಯರಿಗೆ ಗೊತ್ತಿಲ್ಲ, ಪ್ರಶಾಂತ್ ನೀಲ್ ಮಾಡಿದ ಎರಡೇ ಎರಡು ಸಿನಿಮಾಗಳಿಂದ ಅದೆಷ್ಟೋ ಸೀನ್‍ಗಳನ್ನ ಟಾಲಿವುಡ್ ಕಾಲಿವುಡ್ ಬಾಲಿವುಡ್‍ನವ್ರು ತಮ್ಮ ಸಿನಿಮಾದಲ್ಲಿ ಕಾಪಿಮಾಡಿದ್ದಾರೆ ಅಂತ, ಅದಕ್ಕೆ ಒಂದು ಬೆಸ್ಟ್ ಎಕ್ಸಾಂಪಲ್ ಕೋಡೋದಾದ್ರೆ ಉಗ್ರಂ ಚಿತ್ರದಲ್ಲಿ ಶ್ರೀ ಮುರಳಿ ವಿಲನ್ ಅನ್ನು ಕೊಲೆ ಮಾಡೋ ಸೀನ್ ಅನ್ನ ವಿಕ್ರಂ ಅವರ ಸ್ಕೆಚ್ ಮೂವಿಯಲ್ಲಿ ಕಾಫಿ ಮಾಡಿರೋ ರೀತಿ ನೋಡಿದ್ರೆ ಗೊತ್ತಾಗುತ್ತೆ ಕನ್ನಡ ಸಿನಿಮಾದ ತಾಕತ್ತು ಏನು ಅನ್ನೋದು ,

ಅದೇನೇ ಇದ್ರು ಯಶ್ ರಾಜಹುಲಿ ಸಿನಿಮಾದಲ್ಲಿ ಹೇಳೋ ಡೈಲಾಗ್ ರೀತಿ ಕಾಲ್ ಎಳೆಯೋರು ಯಾವತ್ತಿದ್ರು ಕಾಲ್ ಕೆಳಗೆ ಇರ್ತಾರೆ ಅನ್ನೋ ಮಾತು ಮಾತ್ರ ಅಕ್ಷರ ಸಹ ಸತ್ಯ.. ಕೆಜಿಎಫ್ ಚಿತ್ರದ ಟೀಸರ್ ಲೀಕ್ ಮಾಡಿ ವಿಕೃತ ಮೆರೆದ್ರು,ಕನ್ನಡಿಗರು ಮಾತ್ರ ಶ್ರಮಕ್ಕೆ ಕೊಡೋ ಬೆಲೆಯನ್ನ ಕೊಟ್ಟೆ ಕೊಡ್ತಾರೆ ಅನ್ನೋದಕ್ಕೆ ಕೆಜಿಎಫ್ 2 ಟೀಸರ್ ಯೂಟ್ಯೂಬ್‍ನಲ್ಲಿ ಧೂಳೆಬಿಸಿರೋದೇ ಸಾಕ್ಷಿ ಅಂತಾನೇ ಹೇಳಬಹುದು. ಸದ್ಯ ಯೂಟ್ಯೂಬ್‍ನಲ್ಲಿ ನಮ್ಮನೆಲ್ಲಾ ಬಿಟ್ಟು ಹೋದ ಸುಶಾಂತ್ ಸಿಂಗ್ ರಜಪೂತ್ ಅವರ ದಿಲ್ ಬೆಚರಾ ಸಿನಿಮಾದ ಟ್ರೈಲರ್ ಒಂದೇ ದಿನದಲ್ಲಿ 90 ಮಿಲಿಯನ್ ವಿವ್ಯುಸ್ ಪಡೆದು ದಾಖಲೆ ಬರೆದಿತ್ತು, ಆದ್ರೆ ಆ ದಾಖಲೆಯನ್ನ ಇದೀಗ ಕೆಜಿಎಫ್ 2 ಟೀಸರ್ ಮುರಿಯೋ ಸನಿಹದಲ್ಲಿದೆ. ಸದ್ಯ ಟೀಸರ್ ಆರ್ಭಟ ನೋಡಿರೋ ಸಿನಿರಸಿಕರು ಆದಷ್ಟು ಬೇಗ ಸಿನಿಮಾ ಥಿಯೇಟರ್‍ಗೆ ಬರ್ಲಿ ಅಂತ ಹಾರೈಸ್ತಾ ಇದ್ದಾರೆ.

ಹಾಗಾದ್ರೆ ನೀವೂ ಕೆಜಿಎಫ್ 2 ಟೀಸರ್ ನೋಡಿದ್ದೀರ ಅಲ್ವಾ ಚಿತ್ರದ ಮೇಕಿಂಗ್, ಸೀನ್.. ಮ್ಯೂಸಿಕ್..ಯಶ್ ಸ್ಟೈಲ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top