ಕೆಜಿಎಫ್‍ಗಾಗಿ ಶರ್ಟ್ ಲೆಸ್ ಫೈಟ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್

ಕೆಜಿಎಫ್ ಚಾಪ್ಟರ್ 2 ಸ್ಯಾಂಡಲ್‍ವುಡ್‍ನ ಮೋಸ್ಟ್ ಎಕ್ಸ್‍ಪೆಕ್ಟೆಡ್ ಸಿನಿಮಾ, ಚಾಪ್ಟರ್ 2 ಯಾವ ರೀತಿ ಬರಲಿದೆ, ಹೇಗಿರಲಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.ಈಗಾಗಲೇ ಚಿತ್ರದ ಉಳಿದ ಭಾಗದ ಶೂಟಿಂಗ್ ಶುರುವಾಗಿದ್ದು, ಇದೀಗ ಕೆಜಿಎಫ್ ಚಾಪ್ಟರ್ 1 ಕ್ಲೈಮ್ಯಾಕ್ಸ್ ರೀತಿ ಕೆಜಿಎಫ್ ಚಾಪ್ಟರ್ 2 ಕ್ಲೈಮ್ಯಾಕ್ಸ್ ತುಂಬಾ ವಿಭಿನ್ನವಾಗಿ ಇರಲಿದೆ ಅನ್ನೋ ಮಾಹಿತಿ ಇದೀಗ ಲಭ್ಯವಾಗಿದೆ. ಇನ್ನು ಚಾಪ್ಟರ್ 2ನಲ್ಲಿ ಯಶ್ ಶರ್ಟ್ ಲೆಸ್ ಆಗಿ ಫೈಟ್ ಮಾಡಲಾಗಿದ್ದಾರೆ ಅನ್ನೋ ಮಾಹಿತಿ ಇದೀಗ ಲಭ್ಯವಾಗಿದೆ.

ಇನ್ನು ಶರ್ಟ್ ಲೆಸ್‍ನಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್ ಇದಕ್ಕಾಗಿ ಈಗಾಗಲೇ ಸಖತ್ ವರ್ಕೌಟ್ ಕೂಡ ಮಾಡುತ್ತಿದ್ದಾರಂತೆ. ಬಾಡಿ ಸಖತ್ ರಗಡ್ ಲುಕ್‍ನಲ್ಲಿ ಕಾಣಿಸಿಕೊಳ್ಳಬೇಕಾಗಿರುವುದರಿಂದ ಸಖತ್ ವರ್ಕೌಟ್ ಮಾಡುತ್ತಿದ್ದಾರಂತೆ. ಈ ಫೈಟ್ ಯಶ್ ಮತ್ತು ಅಧಿರ ಸಂಜಯ್ ದತ್ ನಡುವೆ ನಡೆಯೋ ಫೈಟ್ ಆಗಿದ್ದು, ಇದಕ್ಕಾಗಿ ಯಶ್ ಫಿಟ್ನೆಸ್ ಕಡೆ ಹೆಚ್ಚು ಒತ್ತು ನೀಡಿದ್ದಾರೆ ಮತ್ತು ಸೀರಿಯಸ್ ಆಗಿ ಪಾಲಿಸ್ತಿದ್ದಾರಂತೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top