ಕೆಜಿಎಫ್‌ ೨ನಾಯಕಿ ಶ್ರೀನಿಧಿ ಶೆಟ್ಟಿ ಫಸ್ಟ್‌ಲುಕ್‌ ರಿಲೀಸ್‌

ಇಂಡಿಯನ್‌ ಸಿನಿಮಾದ ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ಸಿನಿಮಾ ಕೆಜಿಎಫ್‌ ೨ ಸಿನಿಮಾ ಎಲ್ಲವೂ ಸರಿಇದ್ದಿದ್ದರೆ ಈಗಾಗಲೇ ರಿಲೀಸ್‌ ಆಗಿ ಸೌಂಡ್‌ ಮಾಡಬೇಕಾಗಿತ್ತು, ಆದ್ರೆ ಕೊರೋನಾದಿಂದಾಗಿ ಶೂಟಿಂಗ್‌ ಸ್ಟಾಪ್‌ ಮಾಡಿದ್ದ ಚಿತ್ರತಂಡ ಇದೀಗ ಚಿತ್ರದ ಶೂಟಿಂಗ್‌ ಶುರುಮಾಡಿಕೊಂಡಿದ್ದು, ಮುಂದಿನ ವರ್ಷಕ್ಕೆ ಡೇಟ್‌ ಫಿಕ್ಸ್‌ ಮಾಡಿಕೊಂಡಿದೆ. ಆಗಾಗೇ ಒಂದಿಲ್ಲೊಂದು ಕೆಜಿಎಫ್‌ 2 ಬಗ್ಗೆ ಮಾಹಿತಿಯನ್ನು ನೀಡೋ ಚಿತ್ರತಂಡ ಇದೀಗ ಕೆಜಿಎಫ್‌ ಬ್ಯೂಟಿ ಶ್ರೀನಿಧಿ ಶೆಟ್ಟಿಯ ಕೆಜಿಎಫ್‌ ೨ನ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದೆ. ಶ್ರೀನಿಧಿ ಶೆಟ್ಟಿ ಬರ್ತ್‌ಡೇ ಪ್ರಯುಕ್ತವಾಗಿ ಫಸ್ಟ್‌ ಲುಕ್‌ ರಿಲೀಸ್‌ ಮಾಡಿ ಚಿತ್ರತಂಡ ವಿಶ್‌ ಮಾಡಿದೆ.

ಕೆಜಿಎಫ್‌ನಲ್ಲಿ ರಾಕಿಭಾಯ್‌ ಜೋಡಿಯಾಗಿ ಕಾಣಿಸಿಕೊಂಡಿರೋ ರೀನಾ ಅಲಿಯಾಸ್‌ ಶ್ರೀನಿಧಿ ಶೆಟ್ಟಿ ಕೆಜಿಎಫ್‌ ೨ನನಲ್ಲಿ ಯಾವ ಲುಕ್‌ನಲ್ಲಿ ಕಾಣಿಸಲಿದ್ದಾರೆ ಅಂತ ಚಿತ್ರತಂಡ ಎಲ್ಲೂ ರಿವೀಲ್‌ ಮಾಡಿರಲಿಲ್ಲ, ಇದೀಗ ಬರ್ತ್‌ಡೇ ಪ್ರಯುಕ್ತ ಶ್ರೀನಿಧಿ ಶೆಟ್ಟಿ ಕಪ್ಪು ಸೀರೆಯಲ್ಲಿ ಇರೋ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದ್ದು, ಶ್ರೀನಿಧಿ ಶೆಟ್ಟಿ ಸೀರೆಯಲ್ಲಿ ಮಿಂಚುತ್ತಿದ್ದಾರೆ.

ನಿರ್ದೇಶಕ ಪ್ರಶಾಂತ್‌ ನೀಲ್‌ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಪೋಸ್ಟ್‌ ಮಾಡಿ ವಿಶ್‌ಮಾಡಿದ್ದು, ಜೊತೆಗೆ ʻಕ್ರೂರತೆ ಹಾಗೂ ಪ್ರೀತಿ ಒಟ್ಟಿಗೆ ಜೊತೆಯಾಗಿ ಹೋಗಲು ಆಗುತ್ತಾ..? ಪ್ರಶ್ನೇ ಮಾಡಿ ಕ್ಯಾಪ್ಶನ್‌ ಬರೆದಿದ್ದಾರೆ. ಸದ್ಯ ಇದು ಸಿನಿರಸಿಕರನ್ನು ಶ್ರೀನಿಧಿ ಶೆಟ್ಟಿ ಫಸ್ಟ್‌ ಜೊತೆಯಲ್ಲಿ ಎಲ್ಲರನ್ನೂ ಆಕರ್ಷಿಸುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top