ಕೆಜಿಎಫ್‌ ನಂತರ ಪ್ರಭಾಸ್‌ ಜೊತೆ ಪ್ರಶಾಂತ್‌ ನೀಲ್‌ ಸಿನಿಮಾ..

ಕೆಜಿಎಫ್‌ ಚಿತ್ರದ ಮೂಲಕ ಇಡೀ ಭಾರತೀಯ ಸಿನಿಮಾ ರಂಗಕ್ಕೆ ಪರಿಚಯವಾದ ವ್ಯಕ್ತಿ ಪ್ರಶಾಂತ್‌ ನೀಲ್‌, ಸದ್ಯ ಕೆಜಿಎಫ್‌ ೨ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರೋ ಪ್ರಶಾಂತ್‌ ನೀಲ್‌ ಮುಂದಿನ ಪ್ರಾಜೆಕ್ಟ್‌ ಯಾವುದು ಅನ್ನೋ ಕುತೂಹಲ ಎಲ್ಲಾ ಸಿನಿ ರಸಿಕರಲ್ಲೂ ಮನೆಮಾಡಿದೆ. ಈಗಾಗಲೇ ಪ್ರಶಾಂತ್‌ ನೀಲ್‌ ಕೆಜಿಎಫ್‌ ೨ ಚಿತ್ರದ ನಂತರ ಜೂ.ಎನ್‌ಟಿಆರ್‌ ಜೊತೆಯಲ್ಲಿ ಸಿನಿಮಾ ಮಾಡಲಿದ್ದಾರೆ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇತ್ತು, ಆದ್ರೆ ಅದು ಅಧಿಕೃತವಾಗಿಲ್ಲ, ಹೀಗಿರಬೇಕಾದರೆ ಇದೀಗ ಪ್ರಶಾಂತ್‌ ನೀಲ್‌ ಮುಂದಿನ ಸಿನಿಮಾವನ್ನು ಬಾಹುಬಲಿ ಪ್ರಭಾಸ್‌ ಜೊತೆಯಲ್ಲಿ ಮಾಡಲಿದ್ದಾರೆ ಅನ್ನೋ ಮಾತು ಸದ್ಯ ಟ್ವೀಟರ್‌ನಲ್ಲಿ ಟ್ರೆಂಡಿಂಗ್‌ ಆಗಿದೆ.

ಕೆಜಿಎಫ್‌ ಚಿತ್ರದ ಭರ್ಜಿರಿ ಸಕ್ಸಸ್‌ನ ನಂತರ ಕೆಜಿಎಫ್‌ ೨ ಚಿತ್ರದ ಮೇಲೂ ಅಷ್ಟೇ ನಿರೀಕ್ಷೆಗಳಿದ್ದು, ಶೂಟಿಂಗ್‌ ಕೊನೆಯ ಹಂತದಲ್ಲಿದ್ದು, ಮುಂದಿನ ವರ್ಷ ಆರಂಭದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಅನ್ನೋ ಮಾಹಿತಿ ಇದೆ. ಇನ್ನು ಅಭಿಮಾನಿಗಳು ಸಹ ಪ್ರಶಾಂತ್‌ ನೀಲ್‌ ಮುಂದಿನ ಸಿನಿಮಾ ಯಾವುದು ಅನ್ನೋ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಹೀಗಿರಬೇಕಾದ್ರೆ ಇದೀಗ ಟ್ವೀಟರ್‌ನಲ್ಲಿ ಪ್ರಶಾಂತ್‌ ನೀಲ್‌ ಪ್ರಭಾಸ್‌ ಜೊತೆಯಲ್ಲಿ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ವೈರಲ್‌ ಆಗಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ಹೊಂಬಾಳೆ ಫಿಲಂಸ್‌ ಅವರ ಆ ಒಂದು ಪೋಸ್ಟ್‌ ಕೂಡ ಕ್ಯೂರ್ಯಾಸಿಟಿ ಹುಟ್ಟಿಸಿದೆ.

ಹೌದು ಹೊಂಬಾಳೆ ಫಿಲಸಂ ಸೋಶಿಯಲ್‌ ಮೀಡಿಯಾದಲ್ಲಿ ಒಂದು ಪೋಸ್ಟ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ಆತ್ಮಿಯ ಸಿನಿರಸಿಕರೆ, ನೀವು ನಮ್ಮ ಸಿನಿಮಾಗಳನ್ನು ನಮಗಿಂತಲೂ ಹೆಚ್ಚು ಪ್ರೀತಿಸುತ್ತೀರಿ, ಈ ಪ್ರೀತಿ ಸದಾ ನಮ್ಮ ಮೇಲೆ ಇರಲಿ ನಾವು ಮತ್ತೊಂದು ʻಇಂಡಿಯನ್‌ ಸಿನಿಮಾʼ ಮೂಲಕ ನಿಮ್ಮ ಮುಂದೆ ಬರಲಿದ್ದೇವೆ ಎಂದು ಬರೆದುಕೊಂಡಿದ್ದು, ನಾಳೆ ಆ ವಿಚಾರವನ್ನು ರಿವೀಲ್‌ ಮಾಡಲಿದ್ದೇವೆ ಅಂತ ಹೇಳಿದ್ದಾರೆ.

ಈ ಪೋಸ್ಟ್‌ ಹೊರ ಬರುತ್ತಿದ್ದಂತೆ ಟ್ವೀಟರ್‌ನಲ್ಲಿ ಟ್ರೆಂಡ್‌ ಆಗಿದ್ದು ಪ್ರಶಾಂತ್‌ ನೀಲ್‌ ಹೊಂಬಾಳೆ ಬ್ಯಾನರ್‌ನಲ್ಲಿ ಪ್ರಭಾಸ್‌ಗಾಗಿ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ವೈರಲ್‌ ಆಗಿದೆ.

ಇನ್ನು ಇದರ ಜೊತೆಯಲ್ಲಿ ಹೊಂಬಾಳೆ ಫಿಲಂ ಬಿಡುಗಡೆ ಮಾಡಿದ ಪೋಸ್ಟರ್‌ ಹೊತ್ತಲ್ಲೆ ಯುವರತ್ನ ಟೀಂ ಜೊತೆಯಲ್ಲಿ ಹ್ಯಾಟ್ರಿಕ್‌ ಸಿನಿಮಾ ಹೊಂಬಾಳೆ ಫಿಲಂಸ್‌ ಮಾಡಲಿದೆ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದೆ.

ಸದ್ಯ ಹೊಂಬಾಳೆ ಫಿಲಂಸ್‌ ಅವರ ಮುಂದಿನ ಪ್ಯಾನ್‌ ಇಂಡಿಯಾ ಸಿನಿಮಾ ಪ್ರಶಾಂತ್‌ ನೀಲ್‌ ಪ್ರಭಾಸ್‌ ಜೋಡಿಯಲ್ಲಿ ಬರಲಿದ್ಯಾ ಅಥವಾ ಸಂತೋಷ್‌ ಆನಂದ್‌ ರಾಮ್‌ ಮತ್ತು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಕಾಂಬಿನೇಷನ್‌ನಲ್ಲಿ ಬರಲಿದ್ಯಾ ಅನ್ನೋದನ್ನ ನಾಳೆಯ ವರೆಗೆ ಕಾದುನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top