ಕೆಜಿಎಫ್‌ ಚಿತ್ರತಂಡ ಸೇರಿಕೊಂಡ ಅರ್ಮುಗಂ ರವಿಶಂಕರ್‌..

ಭಾರತೀಯ ಚಿತ್ರರಂಗದ ಬಹುನೀರಿಕ್ಷೆಯ ಚಿತ್ರ ಅಂದ್ರೆ ಅದು ಕೆಜಿಎಫ್‌ 2, ಕೆಜಿಎಫ್‌ ಚಾಪ್ಟರ್‌ 1 ಇಡೀ ಭಾರತೀಯ ಚಿತ್ರರಂಗವನ್ನೇ ಸ್ಯಾಂಡಲ್‌ವುಡ್‌ ಕಡೆ ತಿರುವಂತೆ ಮಾಡಿದ ಚಿತ್ರ, ಇದರ ಮುಂದುವರೆದ ಅಧ್ಯಾಯ ಕೆಜಿಎಫ್‌ ಚಾಪ್ಟರ್‌ 2 ಈಗಾಗಲೇ ಕೊನೆಯ ಹಂತದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದೆ. ಕೆಜಿಎಫ್‌ 2 ವಿಚಾರವಾಗಿ ಚಿತ್ರತಂಡ ಒಂದಿಲ್ಲೊಂಡು ಅಪ್‌ಡೇಟ್‌ ನೀಡುತ್ತಿದ್ದು, ಬಿಡುಗಡೆ ದಿನಾಂಕದ ಬಗ್ಗೆ ಸದ್ಯದರಲ್ಲಿಯೇ ಅಪ್‌ಡೇಟ್‌ ನೀಡಲಿದೆ ಚಿತ್ರತಂಡ. ಇನ್ನು ಈಗಾಲೇ ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರೋ ಸಂಜಯ್‌ ದತ್‌ ಚಿತ್ರತಂಡವನ್ನು ಸೇರಿಕೊಂಡಿದ್ದು, ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಇತ್ತಿಚೆಗೆ ತಾವೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು, ಶೂಟಿಂಗ್‌ ವೇಳೆ ಯಾವುದೇ ಡೂಪ್‌ ಬಳಸದೇ ಫೈಟಿಂಗ್‌ ಸೀನ್‌ನಲ್ಲಿ ಭಾಗಿಯಾಗಿರೋ ಬಗ್ಗೆ ಸುದ್ದಿ ವೈರಲ್‌ ಆಗಿತ್ತು, ಇದೀಗ ಅಧಿರನ ಪಾತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರತಂಡದಿಂದ ಹೊಸದೊಂದು ಸುದ್ದಿ ಹೊರಬಂದಿದೆ.

ಹೌದು ಸಂಜಯ್‌ ದತ್‌ ಕಾಣಿಸಿಕೊಂಡಿರೋ ಅಧಿರ ಪಾತ್ರಕ್ಕೆ ಯಾರು ವಾಯ್ಸ್‌ ಡಬ್‌ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಾ ಇತ್ತು, ಇದೀಗ ಇದಕ್ಕೆ ಉತ್ತರ ಸಿಕ್ಕಿದ್ದು, ಅಧಿರ ಪಾತ್ರಕ್ಕೆ ಹಿಂದಿಯಲ್ಲಿ ಸಜಯ್‌ ದತ್‌ ಅವರೇ ವಾಯ್ಸ್‌ ಡಬ್‌ ಮಾಡಲಿದ್ದಾರಂತೆ, ಇನ್ನು ಕನ್ನಡ ಮತ್ತು ತೆಲುಗಿನಲ್ಲಿ ಯಾರು ವಾಯ್ಸ್‌ ಡಬ್‌ ಮಾಡಲಿದ್ದಾರೆ ಅನ್ನೋ ಕುತೂಹಲ ವಿದ್ದು ಆ ಕುತೂಹಲಕ್ಕೆ ಸದ್ಯಕ್ಕೆ ಉತ್ತರ ಸಿಕ್ಕಿದೆ. ಹಿಂದಿಯಲ್ಲಿ ಸಂಜಯ್‌ ದತ್‌ ಅವರೇ ವಾಯ್ಸ್‌ ನೀಡುತ್ತಿದ್ದು, ಕನ್ನಡ ಮತ್ತು ತೆಲುಗಿಗೆ ಬೇರೆ ಬೇರೆ ಖಳನಟರು ಅಧಿರ ಪಾತ್ರಕ್ಕೆ ವಾಯ್ಸ್‌ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇದೆ. ತೆಲುಗಿನಲ್ಲಿ ಅಧಿರ ಪಾತ್ರಕ್ಕೆ ಕನ್ನಡದ ಆರ್ಮುಗ ಕಂಚಿನ ಕಂಠ ನಟ ರವಿಶಂಕರ್‌ ಸಂಜಯ್‌ ದತ್‌ ಅವರ ಅಧಿರ ಪಾತ್ರಕ್ಕೆ ವಾಯ್ಸ್‌ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾಇದೆ. ಇನ್ನು ಕನ್ನಡದಲ್ಲಿ ಖ್ಯಾತ ಖಳನಟ ಮತ್ತು ಖಡಕ್‌ ವಾಯ್ಸ್‌ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರೋ ಮಧು ಗುರುಸ್ವಾಮಿ ಅಧಿರ ಪಾತ್ರಕ್ಕೆ ವಾಯ್ಸ್‌ ನೀಡಲಿದ್ದಾರೆ ಅನ್ನೋ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಕೇಳಿ ಬರ್ತಾ ಇದೆ.ಈ ವಿಚಾರವಾಗಿ ಶೀಘ್ರದಲ್ಲಿ ಚಿತ್ರತಂಡ ಮಾಹಿತಿ ನೀಡಲಿದೆಯಂತೆ.

ಒಟ್ಟಿನಲ್ಲಿ ಇಂಡಿಯನ್‌ ಸಿನಿಮಾದಲ್ಲಿ ಬಹುನಿರೀಕ್ಷೆ ಹುಟ್ಟಿಸಿರೋ ಕೆಜಿಎಫ್‌ 2 ಚಿತ್ರದ ಬಗ್ಗೆ ಒಂದಿಲ್ಲೊಂದು ಅಪ್‌ಡೇಟ್‌ಗಳು ಬರ್ತಾ ಇದ್ದು ಆದಷ್ಟು ಬೇಗ ಚಿತ್ರದ ಬಿಡುಗಡೆ ದಿನಾಂಕದ ಮಾಹಿತಿ ಕೂಡ ಬರಲಿ ಅಂತ ಸಿನಿರಸಿಕರು ಹೇಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top