
ಟೀಂ ಇಂಡಿಯಾ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯದಲ್ಲಿ ಸತತ ಎರಡು ಸೋಲುಗಳನ್ನು ಕಾಣುವ ಮೂಲಕ ಸರಣಿಯನ್ನು ಕಳೆದುಕೊಂಡಿದೆ. ಹೀಗಿರ ಬೇಕಾದ್ರೆ ಇದೀಗ ತಂಡದ ಉಪನಾಯಕ ಕೆಎಲ್ ರಾಹುಲ್ ಮೇಲೆ ಕ್ರಿಕೆಟ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಹೌದು ಮೊನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಫಿಲ್ಡಿಂಗ್ ಮಾಡುವ ವೇಳೆ ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ಗೆ ಬಾಲ್ ತಗುಲಿ ಗಾಯವಾದ್ರ, ನಂತರ ಅವರು ಪಂದ್ಯದ ಅರ್ಧದಿಂದಲ್ಲೇ ಮೈದಾನದಿಂದ ಹೊರ ಹೋಗಬೇಕಾಯಿತು, ಇನ್ನು ನಂತರದ ಮುಂದಿನ ಸೀಮಿತ ಓವರ್ಗಳಿಗೆ ಅವರು ಅಲಭ್ಯ ಅನ್ನೋದು ಗೊತ್ತಾಗಿದ್ದು, ಈ ವಿಚಾರವಾಗಿ ಕೆ ಎಲ್ ರಾಹುಲ್ ಮಾತನಾಡಿದ್ದು, ಕ್ರಿಕೆಟ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಡೇವಿಡ್ ವಾರ್ನರ್ ಗಾಯವಾಗಿದ್ದರ ಬಗ್ಗೆ ಮಾತನಾಡಿರೋ ರಾಹುಲ್ ವಾರ್ನರ್ ಗಾಯದಿಂದ ಬೇಗ ಚೇತರಿಸಿಕೊಳ್ಳದಿರಲಿ ಅಂತ ಹೇಳಿದ್ದು, ಈ ಹೇಳಿಕೆಗೆ ಇದೀಗ ಕ್ರಿಕೆಟ್ ಅಭಿಮಾನಿಗಳು ಗರಂ ಆಗಿದ್ದಾರೆ. ಜೊತೆ ರಾಹುಲ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಾಹುಲ್ ನಿಮ್ಮ ಹಾಸ್ಯ ಪ್ರಜ್ಞೆ ಉತ್ತಮಪಡಿಸಿಕೊಳ್ಳಿ, ಇದು ನಿಜವಾಗಿಯೂ ಕ್ರೀಡಾಸ್ಫೋರ್ತಿ ತೋರುವುದಿಲ್ಲ, ಗಾಯದ ವಿಚಾರದಲ್ಲಿ ಹಾಸ್ಯ ಮಾಡುವುದು ಸರಿಯಲ್ಲ, ರಾಹುಲ್ ನಿಮ್ಮಿಂದ ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಅಂತ ಕ್ರಿಕೆಟ್ ಅಭಿಮಾನಿಗಳು ರಾಹುಲ್ ಹೇಳಿಕೆಗೆ ಗರಂ ಆಗುವುದರ ಜೊತೆಯಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಸದ್ಯ ಸರಣಿ ಸೋಲನ್ನು ಅನುಭವಿಸಿರೋ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಅಲಭ್ಯತೆ ಕಾಡುತಿದ್ಯ ಅನ್ನೋ ಅನುಮಾನಗಳು ಶುರುವಾಗಿದೆ. ಟೀಂ ಇಂಡಿಯಾ ಬೃಹತ್ ಮೊತ್ತದ ಗುರಿಯನ್ನು ತಲುಪಲು ಉತ್ತಮ ಆರಂಭ ದೊರೆಯದೆ ಇರೋದು ಒಂದು ರೀತಿಯಲ್ಲಿ ಕಾರಣವಾಗಿದ್ದು, ಈ ವಿಚಾರವಾಗಿ ಅನೇಕ ಕ್ರಿಕೆಟ್ ಪಂಡಿತರು ಟೀಂ ಇಂಡಿಯಾ ಸರಣಿ ಸೋಲಿಗೆ ರೋಹಿತ್ ಶರ್ಮಾ ಅನುಪಸ್ಥಿತಿಯೇ ಕಾರಣ ಅನ್ನೋ ಮಾತುಗಳನ್ನು ಹೇಳುತ್ತಿದ್ದಾರೆ. ಇದೀಗ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಕೂಡ ಮಾತನಾಡಿದ್ದು, ೩೫೦ಕ್ಕೂ ಹೆಚ್ಚು ರನ್ ಚೇಸಿಂಗ್ ಮಾಡುವಾಗ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಇರಲೇಬೇಕು, ಇಲ್ಲದಿದ್ದರೆ ಅದು ತಂಡಕ್ಕೆ ದೊಡ್ಡ ಲಾಸ್ ಆಗಲಿದೆ. ರೋಹಿತ್ ಇದ್ದಾಗ ಯಾವುದೇ ಭಯವಿಲ್ಲದೆ ತಂಡದ ಉಳಿದ ಆಟಗಾರರು ಬ್ಯಾಟಿಂಗ್ ಮಾಡಬಹುದು ಕಾರಣ ಆತ ತಂಡಕ್ಕೆ ಉತ್ತಮ ಆರಂಭ ತಂದುಕೊಡುವಲ್ಲಿ ಯಶಸ್ವಿಯಾಗಿರುತ್ತಾನೆ ಹಾಗಾಗಿ ಎದುರಾಳಿ ತಂಡ ನೀಡೋ ದೊಡ್ಡ ಮೊತ್ತೆವನ್ನು ಸಹ ಸಲೀಸಾಗಿ ಚೇಸ್ ಮಾಡಬಹುದು ಎಂದು ರೋಹಿತ್ ಶರ್ಮಾ ಅನುಪಸ್ಥಿತಿ ಬಗ್ಗೆ ಆಕಾಶ್ ಚೋಪ್ರಾ ಹೇಳಿದ್ದಾರೆ.
ನಿಮ್ಮ ಪ್ರಕಾರ ಕೆ ಎಲ್ ರಾಹುಲ್ ವಾರ್ನರ್ ವಿಚಾರವಾಗಿ ಹೇಳಿರೋ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು, ರೋಹಿತ್ ಶರ್ಮಾ ಟೀಂ ಇಂಡಿಯಾದಲ್ಲಿ ಇಲ್ಲದೇ ಇರೋದು ತಂಡಕ್ಕೆ ನಷ್ಟವಾಗಿದ್ಯ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.