ಕೃಷಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ-ಚಿನ್ನಾಭರಣ ಪತ್ತೆ.

ಜೇವರ್ಗಿಯ ಕೃಷಿ ಇಲಾಖೆಯ ಅಧಿಕಾರಿಯ ಮನೆ ಮೇಲೆ ಎಸಿಬಿ ದಾಳಿನಡೆಸಿದ್ದು , ಈ ವೇಳೆ ಚಿನ್ನಾಭರಣ ಮತ್ತು ನಗದು ಪತ್ತೆಯಾಗಿದೆ.

ಕೃಷಿ ಇಲಾಖೆಯ ಅಧಿಕಾರಿ ಸುನಿಲ್ ಕುಮಾರ್‌ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಸುನಿಲ್‌ ಕುಮಾರ್‌ ಜೇವರ್ಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸುನೀಲ್‌ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿದ್ದು 9 ಲಕ್ಷ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ.

ಇನ್ನು ಸುನಿಲ್‌ ಕುಮಾರ್‌ 50000 ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು, ಹೀಗಾಗಿ ಕಲಬುರಗಿಯಲ್ಲಿನ ಸುನಿಲ್‌ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು ಚಿನ್ನಾಭರಣ, ನಗದು ಆಸ್ತಿ ಪತ್ರಗಳು ಪತ್ತೆಯಾಗಿದೆ. ಎಸಿಬಿ ಎಸ್‌ಪಿ ಮಹೇಶ್‌ ಮೇಘಣ್ಣನವರ್‌ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top