
ಐಪಿಎಲ್ ಅದು ಒಂದು ರಂಗಿನ್ ಕಿಕ್ರೆಟ್ ಹಬ್ಬ, ಇಲ್ಲಿ ದುಡ್ಡಿನ ಹೊಳೆಯೇ ಹರಿಯುತ್ತದೆ, ಅಷ್ಟೇ ಅಲ್ಲದೇ ಈ ಒಂದು ಕ್ರಿಕೆಟ್ ಹಬ್ಬ ಅದೆಷ್ಟೋ ಜನ ಜೀವನವನ್ನೇ ಬದಲಿಸಿದೆ. ಇನ್ನು ತಮ್ಮ ಕ್ರಿಕೆಟ್ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಾಬೀತು ಪಡಿಸಲು ಒಂದು ಉತ್ತಮ ವೇದಿಕೆಯಾಗಿದೆ.
ಒಬ್ಬ ವ್ಯಕ್ತಿಗೆ ಟ್ಯಾಲೆಂಟ್ ಇದ್ದು, ಪ್ರರಿಶ್ರಮ ಪಟ್ಟರೇ ಎಂತಹ ಸಾಧನೆ ಆದ್ರು ಮಾಡಬಹುದು ಅನ್ನೋದಕ್ಕೆ ಈ ವ್ಯಕ್ತಿನೇ ಸಾಕ್ಷಿ. ಮನೆಯಲ್ಲಿ ಹೇಳಿಕೊಳ್ಳುವಂತ ಸ್ಥಿತಿವಂತರಲ್ಲ ದಿನ ಕೂಲಿ ಕೆಲಸ ಮಾಡಿದ್ರೆ ಆ ದಿನ ಊಟ ಹೀಗಿರುವ ಮನೆಯ ಹುಡುಗನೊಬ್ಬ ಇದೀಗ ಐಪಿಎಲ್ ಟೀಂನಲ್ಲಿ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಅದು ಬೇರೆಯಾರು ಅಲ್ಲ ಸನ್ರೈಸರ್ಸ್ ಹೈದರಬಾದ್ ತಂಡದಲ್ಲಿ ಪ್ರಮುಖ ಬೌಲರ್ ಮತ್ತು ಹ್ಯಾರ್ಕರ್ ಸ್ಪೆಷಲಿಸ್ಟ್ ಎಡಗೈ ವೇಗಿ ಟಿ.ನಟರಾಜನ್. ಹೌದು ತಮಿಳು ನಾಡಿನ ಬಡ ಕುಟುಂಬದಲ್ಲಿ ಜನಿಸಿದ್ದ ನಟರಾಜನ್, ಇವರ ತಂದೆ-ತಾಯಿ ಇಬ್ಬರು ದಿನಗೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಇನ್ನು ನಟರಾಜನ್ಗೆ ಮೂರು ಜನ ಸಹೋದರಿಯರು ಇದ್ದು, ಇದೀಗ ಐಪಿಎಲ್ನಲ್ಲಿ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಹೌದು ಸನ್ ರೈಸರ್ಸ್ ಹೈದರಬಾದ್ ತಂಡದಲ್ಲಿ ಆಡುತಿರೋ ನಟರಾಜನ್ ,ತಮಿಳು ನಾಡು ಪ್ರೀಮಿಯರ್ ಲೀಸ್ನಲ್ಲಿ ತಕ್ಕ ಮಟ್ಟಿನ ಯಶಸ್ಸನ್ನು ಗಳಿಸುವು ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದರು.ಟಿಪಿಎಲ್ನಲ್ಲಿ ಗಮನ ಸೆಳೆದಿದ್ದ ನಟರಾಜನ್ ತಮಿಳುನಾಡು ತಂಡಕ್ಕೂ ಸೆಲೆಕ್ಟ್ ಆಗಿ ಗಮನ ಸೆಳೆದಿದ್ದರು, ಇದೇ ವೇಳೆ 2017ರಲ್ಲಿ ಕ್ರಿಕೆಟ್ ಕಿಟ್ ತೆಗೆದುಕೊಳ್ಳಲು ಪರದಾಡುತ್ತಿದ್ದ ವೇಳೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕಿಂಗ್ಸ್ ಇಲೆವೆನ್ ತಂಡ ಇವರನ್ನು ಬರೋಬ್ಬರಿ 3ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆದ್ರೆ ಸಿಕ್ಕ ಅವಕಾಶವನ್ನು ಬಳಕೆ ಮಾಡಿಕೊಳ್ಳುವಲ್ಲಿ ಯಡವಿದ್ದ ನಟರಾಜನ್ ಆ ಐಪಿಎಲ್ನಲ್ಲಿ ದುಬಾರಿಯಾಗಿದ್ರು.
ನಂತರ ಪಂಜಾಬ್ ತಂಡ ಇವರನ್ನು ತಂಡದಿಂದ ಕೈ ಬಿಟ್ಟಿತ್ತು, ನಂತರ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಟರಾಜನ್ ಗಮನ ಸೆಳೆದಿದ್ದು ಸನ್ರೈಸರ್ಸ್ ಹೈದರಬಾದ್ನ ಮುತ್ತಯ್ಯ ಮುರುಳೀಧರನ್ ಅವರನ್ನು 2018ರ ಹರಾಜು ಪ್ರಕ್ರಿಯೆಯಲ್ಲಿ 40 ಲಕ್ಷಕ್ಕೆ ಸನ್ರೈಸರ್ಸ್ ಹೈದರಬಾದಿಗೆ ಸೇಲ್ ಆದ ನಟರಾಜನ್ ,ಸದ್ಯ ಈ ಬಾರಿಯ ಐಪಿಎಲ್ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಎಡಗೈ ವೇಗಿಯಾಗಿರೋ ಈ ಬೌಲರ್ ಈ ಬಾರಿಯ ಐಪಿಎಲ್ನಲ್ಲಿ ಹೊಸ ದಾಖಲೆಯನ್ನು ಕೂಡ ಬರೆದಿದ್ದಾರೆ.
ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ನಟರಾಜನ್ ಬರೋಬ್ಬರಿ 10 ಯಾರ್ಕರ್ಗಳನ್ನು ಹಾಕುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ನಲ್ಲಿ ಒಂದು ಇನ್ನಿಂಗ್ಸ್ನಲ್ಲಿ ಅತಿಹೆಚ್ಚು ಯಾರ್ಕರ್ ಹಾಕಿರೋ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ಪ್ರಮುಖ ಘಟ್ಟದಲ್ಲಿ 17ನೇ ಓವರ್ ಬೌಲಿಂಗ್ ಮಾಡಿ ಪ್ರಮುಖ ವಿಕೆಟ್ ಪಡೆದು 7 ರನ್ ನೀಡುವ ಮೂಲಕ ತಂಡದ ಗೆಲುವಿಗೆ ಕಾರಣರಾದ್ರು,
ಸದ್ಯ ಐಪಿಎಲ್ ಉತ್ತಮ ಪ್ರದರ್ಶನ ನೀಡ್ತಾ ಇರೋ ಈ ದೇಸಿ ಪ್ರತಿಭೆ ಸದ್ಯದರಲ್ಲೇ ಟೀಂ ಇಂಡಿಯಾ ಬಾಗಿಲು ತಟ್ಟಿ ತಂಡಕ್ಕೆ ಪ್ರಮುಖ ಬೌಲರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಅಂತಿದ್ದಾರೆ ಕ್ರಿಕೆಟ್ ತಜ್ಞರು.