ಕಿರುತೆರೆಯ ಸ್ಮಾರ್ಟ್ ಹೀರೋ.. ಧಾರಾವಾಹಿಗಳ ಬಾದ್ ಷಾ ರಕ್ಷ್‍ಗೆ ಹುಟ್ಟುಹಬ್ಬದ ಸಂಭ್ರಮ

ಮನೋರಂಜನ ಕ್ಷೇತ್ರದಲ್ಲಿ ಸಿನಿಮಾ ನಟರು ಹೆಚ್ಚು ಜನಪ್ರಿಯ ಖ್ಯಾತಿ ಗಳಿಸುತ್ತಾರೋ ಇಲ್ಲವೋ, ಆದ್ರೆ ಕಿರುತೆಯ ಧಾರಾವಾಹಿ ನಟರು ಮಾತ್ರ ಪ್ರತಿಯೊಬ್ಬರ ಮನೆ ಮನದಲ್ಲಿ ಹೆಸರನ್ನು ಮಾಡಿಬಿಟ್ಟಿರುತ್ತಾರೆ. ಒಂದು ಸೀರಿಯಲ್ ಬಂತು ಅಂದ್ರೆ ಆ ಸೀರಿಯಲ್‍ನ ನಟ ನಟಿ ಯಾರೇ ಆಗಿರಲಿ ಅವರು ತಮ್ಮ ಮನೆಯ ಮಗ ಅಥವಾ ಮಗಳು ಆಗಿ ಬಿಟ್ಟಿರುತ್ತಾರೆ.

ಅಂತಹ ಕಿರುತೆರೆಯ ನಟರ ಸಾಲಿನಲ್ಲಿ ಕನ್ನಡಿಗರ ಪ್ರತಿಯೊಂದು ಮನೆಯಲ್ಲೂ ಮನೆಮಗನಾಗಿ ಮಿಂಚುತ್ತಿರೋ ಹುಡುಗ ಅಂದ್ರೆ ಅದು ಸದ್ಯ ಕಿರುತೆಯಲ್ಲಿ ನಂಬರ್ ಒನ್ ಸೀರಿಯಲ್ ಆಗಿ ರಾರಾಜಿಸುತ್ತಿರೋ ಜೀ ಕನ್ನಡದಲ್ಲಿ ಪ್ರಸಾರವಾಗೋ ಗಟ್ಟಿಮೇಳ ಧಾರಾವಾಹಿ ನಾಯಕ ನಟ ವೇದಾಂತ್ ವಸಿಷ್ಠ ಆಲಿಯಾಸ್ ರಕ್ಷ್.. ಹೌದು ಸ್ಯಾಂಡಲ್‍ವುಡ್‍ನಲ್ಲಿ ಬಾಕ್ಸಾಫಿಸ್ ಸುಲ್ತಾನ್ ಅಂತ ನಾವು ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ ಅವರನ್ನು ಕರೆದ್ರೆ ಕಿರುತೆಯಲ್ಲಿ ಟಿಆರ್‍ಪಿ ಕಾ ಸುಲ್ತಾನ್ ಅಂದ್ರೆ ಅದು ನಮ್ಮ ಹ್ಯಾಂಡ್ಸಮ್ ಹೀರೋ ರಕ್ಷ್, ಹೌದು ಸದ್ಯ ಕಿರುತೆರೆಯ ಡಿ ಬಾಸ್ ಅಂತಾನೇ ಕರೆಸಿಕೊಳ್ಳುವ ರಕ್ಷ್ ಸೀರಿಯಲ್ ಲೋಕದ ಬಾದ್ ಷಾ ಅಂತಾನೇ ಬಿರುದು ಪಡೆದುಕೊಂಡಿದ್ದಾರೆ. ಪುಟ್ಟಗೌರಿ ಮದುವೆ ಮೂಲಕ ಕರ್ನಾಟಕದ ಪ್ರತಿಯೊಂದು ಮನೆ ಮನದಲ್ಲಿ ಜಾಗ ಮಾಡಿಕೊಂಡ ರಕ್ಷ್ ಕಿರುತೆಯಲ್ಲಿ ಸುಲ್ತಾನನಾಗಿ ಮೆರೆಯುತ್ತಿದ್ದಾರೆ.

ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ನಂಬರ್ ಒನ್ ಧಾರಾವಾಹಿ ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ವಸಿಷ್ಠ ಪಾತ್ರದಲ್ಲಿ ದೊಡ್ಡ ಬ್ಯೂಸಿನೆಸ್ ಮ್ಯಾನ್ ಆಗಿ ಯೂತ್ ಐಕಾನ್ ಆಗಿ ನಟಿಸ್ತಾ ಇದ್ದು, ಗಟ್ಟಿಮೇಳದ ಇವರ ಪಾತ್ರಕ್ಕೆ ಮತ್ತು ಅದರಲ್ಲಿ ಕಾಣಿಸಿಕೊಳ್ಳವ ಅವರ ಹ್ಯಾಂಡಸಮ್ ಲುಕ್‍ಗೆ ಯುವತಿಯರು ಫಿಧಾ ಆಗಿ ಹೋಗಿದ್ದಾರೆ. ಅಂತಹ ಸ್ಮಾರ್ಟ್ ಅಂಡ್ ಹ್ಯಾಂಡ್‍ಸಮ್ ಹುಡುಗ ರಕ್ಷ್‍ಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ, ಕಿರುತೆರೆಯಲ್ಲಿ ಹಿಟ್ ಧಾರಾವಾಹಿಗಳನ್ನು ನೀಡೋ ಮೂಲಕ ಈಗಾಗಲೇ ಪ್ರತಿ ವರ್ಷ ಜನ ಮೆಚ್ಚಿದ ನಾಯಕ ಅನ್ನೋ ಪಟ್ಟವನ್ನು ಅಲಂಕರಿಸುತ್ತಿರೋ ರಕ್ಷ್, ಕಿರುತೆರೆಯಲ್ಲಿ ಹೆಸರು ಮತ್ತು ಪ್ರೀತಿ ಗಳಿಸಿದ ರೀತಿ ಸ್ಯಾಂಡಲ್‍ವುಡ್‍ನಲ್ಲೂ ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಳ್ಳ ಬೇಕು ಅನ್ನೋ ಕನಸಿನಲ್ಲಿ ಇದ್ದಾರೆ.

ಪ್ರತಿಯೊಬ್ಬರು ಸ್ಯಾಂಡಲ್‍ವುಡ್‍ನಲ್ಲಿ ಮಾಸ್ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡುವ ಮೂಲಕ ತಮ್ಮ ನೆಲೆಯನ್ನು ಸ್ಯಾಂಡಲ್‍ವುಡ್‍ನಲ್ಲಿ ಗಟ್ಟಿಗೊಳಿಸಲು ಪ್ರಯತ್ನಗಳನ್ನು ಮಾಡಿದ್ರೆ, ರಕ್ಷ್ ಮಾತ್ರ ಈ ವಿಚಾರದಲ್ಲಿ ಡಿಫರೆಂಟ್ ಅಂತಾನೇ ಹೇಳಬಹುದು, ಕಿರುತೆರೆ ಮೂಲಕ ಮನೆಮಾತಾಗಿರೋ ರಕ್ಷ್ ಸ್ಯಾಂಡಲ್‍ವುಡ್‍ಗೆ ಒಂದೊಳ್ಳೇ ಸಮಾಜಮುಖಿ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರಿಯನ್ನು ಪಡೆದುಕೊಂಡಿದ್ದಾರೆ. `ನರಗುಂದ ಬಂಡಾಯ’ ಅನ್ನೋ ನೈಜ ಘಟನೆಯ ಕಥೆಯನ್ನು ಆಧಾರವಾಗಿಟ್ಟುಕೊಂಡು ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದು, ತಾನೊಬ್ಬ ಸ್ಟೈಲಿಷ್ ಆಕ್ಟರ್ ಜೊತೆಯಲ್ಲಿ ಪ್ರಬುದ್ಧ ನಟ ಅನ್ನೋದನ್ನು ಸಹ ತೋರಿಸಿಕೊಟ್ಟಿದ್ದಾರೆ.

ಸದ್ಯ ಕಿರುತೆಯ ಡಿ ಬಾಸ್ ಆಗಿ ಮಿಂಚುತ್ತಿರೋ ನಟ ರಕ್ಷ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಹ್ಯಾಂಡ್ಸಮ್ ನಟ ಸ್ಯಾಂಡಲ್‍ವುಡ್‍ನಲ್ಲೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಅನ್ನೋದೆ ನಮ್ಮ ಆಶಯ ಕೂಡ.

ಇಂದು ಹುಟ್ಟು ಹಬ್ಬ ಆಚರಿಸಿಕೊಳ್ತಿರೋ ಸ್ಮಾರ್ಟ್ ಹೀರೋ ರಕ್ಷ್ ಅವರಿಗೆ ನಮ್ ಕಡೆಯಿಂದ ರಕ್ಷ್‍ಗೆ ಬತ್‍ಡೇ ವಿಶ್ ಹೇಳಿಬಿಡೋಣ,

ಹ್ಯಾಪಿ ಬರ್ತ್‍ಡೇ ರಕ್ಷ್..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top