ಕಿಡಿಗೇಳಿಗಳ ವಿರುದ್ಧ ದೂರು ನೀಡಿದ ರಾಧಿಕಾ ಕುಮಾರಸ್ವಾಮಿ..

ನಟಿ ರಾಧಿಕಾ ಕಿಡಿಗೇಡಿಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟಿ ರಾಧಿಕಾ ಕಿಡಿಗೇಡಿಗಳ ವಿರುದ್ಧ ಪೈರಸಿ ಆರೋಪದಲ್ಲಿ ಉತ್ತರ ವಿಭಾಗ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಧಿಕಾ ಅಭಿನಯಿಸಿರೋ ʻʻಸ್ವೀಟಿ ನನ್ನ ಜೋಡಿʼ ಸಿನಿಮಾವನ್ನು ಕಾನೂನು ಬಾಹಿರವಾಗಿ ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ ಎಂದು ಕಿಡಿಗೇಡಿಗಳ ವಿರುದ್ದ ದೂರು ನೀಡಿದ್ದಾರೆ.

ಮೂರು ಕೋಟಿ ವೆಚ್ಚ ʻಸ್ವೀಟಿ ನನ್ನ ಜೋಡಿʼ ಸಿನಿಮಾವನ್ನು ನಿರ್ಮಿಸಿದ್ದೇವೆ. ಆದರೆ ಯಾರೋ ಅಪರಿಚಿತರು ಸಿನಿಮಾ ವಿಡಿಯೋವನ್ನು ನನ್ನ ಅನುಮತಿ ಪಡೆಯದೆ ಹಾಗೂ ಗಮನಕ್ಕೆ ತರದೆ ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿದದಾಋಎ. ಹೀಗಾಗಿ ವಿಡಿಯೋ ಅಪ್ಲೋಡ್‌ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.

ನಟಿ ರಾಧಿಕಾ ದೂರು ನೀಡಿದ ಹಿನ್ನೆಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top