ಕಿಚ್ಚ ಸುದೀಪ್ ಮೇಲಿನ ಪ್ರೀತಿಗೆ ಗ್ರಂಥಾಲಯ ಸ್ಥಾಪಿಸಿದ ಅಭಿಮಾನಿ..!

ಸಿನಿಮಾ ಸ್ಟಾರ್ ಅಂದ್ರೆ ಅಭಿಮಾನಿ‌ ದೇವರುಗಳಿಗೆ ಎಲ್ಲಿಲ್ಲದ ಪ್ರೀತಿ ತನ್ನ ನೆಚ್ಚಿನ ಅಭಿಮಾನಿಗಾಗಿ ಏನು ಬೇಕಾದ್ರು ಮಾಡೋದಕ್ಕೆ ರೆಡಿಯಾಗಿರ್ತಾರೆ..ಅದರಲ್ಲೂ ಕಿಚ್ಚ ಸುದೀಪ್ ಅಂದ್ರೆ ತನ್ನದೇ ಆದ ಫ್ಯಾನ್ ಬೇಸ್ ಇದೆ. ಕಿಚ್ಚನಿಗಾಗಿ ಅಭಿಮಾನಿಗಳು ಎಲ್ಲದಕ್ಕೂ ಸೈ ಅಂತಾರೆ, ಇನ್ನು ಕಿಚ್ಚ ಕೂಡ ಅಭಿಮಾನಿಗಳಿಗಾಗಿ ಸದಾ ಮಿಡಿಯುವ ಹೃದಯ, ಅದೇ ರೀತಿ ಕಿಚ್ಚನ ಅಭಿಮಾನಿಗಳು ಸಹ ಅದಕ್ಕೆ ಈಗ ಬೆಸ್ಟ್ ಎಕ್ಸಾಂಪಲ್ ಒಂದು ದೊರೆತಿದೆ ತನ್ನ ನೆಚ್ಚಿನ ನಟನ ಮೇಲಿನ ಪ್ರೀತಿಗಾಗಿ ಅಭಿಮಾನಿಯೊಬ್ಬ ಕಿಚ್ಚನ ಹೆಸರಿನಲ್ಲಿ ಗ್ರಂಥಾಲಯವೊಂದನ್ನು ಕಟ್ಟಿಸಿ ಕಿಚ್ಚನ ಹುಟ್ಟುಹಬ್ಬದಂದು ಉದ್ಘಾಟನೆ ಮಾಡಿದ್ದಾರೆ. ಬೊಂಬೇರಹಳ್ಳಿ ಎಂಬ ಗ್ರಾಮದಲ್ಲಿ ಕಿಚ್ಚನ ಅಭಿಮಾನಿಯೊಬ್ಬ ಕಿಚ್ಚನ ಹೆಸರಿನಲ್ಲಿ ಗ್ರಂಥಾಲಯ ತೆರೆದಿದ್ದಾನೆ, ಇನ್ನು ಈ ಖುಷಿವಿಚಾರವನ್ನು ಕಿಚ್ಚ ಸುದೀಪ್ ಕೂಡ ತನ್ನ ಟ್ವಿಟರ್ ನಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗಾಗಿ ಕಿಚ್ಚ ಮಿಡಿಯುತಿದ್ದರೆ ಇತ್ತ ಅಭಿಮಾನಿಗಳು ಸಹ ತನ್ನ ನೆಚ್ಚಿನ ನಟನ ಮೇಲೆ ಪ್ರೀತಿನೂ ಕೂಡ ಈ ರೀತಿಯಲ್ಲಿ ತೋರಿಸುತ್ತಾರೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top