ಕಿಚ್ಚನ ಸಿನಿಮಾಗೆ ಎಂಟ್ರಿಕೊಟ್ಟ ಮತ್ತೊಬ್ಬ ಸ್ಟಾರ್‌ ನಟ..!

ಸ್ಯಾಂಡಲ್‌ವುಡ್‌ ಬಾದ್‌ಷಾ. ಸದ್ಯ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಮುಂದಿನ ವಾರ ಕಿಚ್ಚ ಅಭಿನಯದ ದಬಾಂಗ್‌ 3 ರಿಲೀಸ್‌ ಆಗ್ತಾ ಇದ್ರೆ, ಇನ್ನೊಂದು ಕಡೆ ಕೋಟಿಗೊಬ್ಬ 3 ಚಿತ್ರದ ಶೂಟಿಂಗ್‌ ಭರದಿಂದ ಸಾಗಿದೆ. ಇದರ ನಡುವೆಯಲ್ಲಿ ಈಗ ಅನೂಪ್‌ ಭಂಡಾರಿ ನಿರ್ದೇಶನದ ʻಪ್ಯಾಂಟಮ್‌ʼ ಚಿತ್ರದ ಪ್ರೀಪ್ರೊಡಕ್ಷನ್‌ ವರ್ಕ್‌ ಕೂಡ ನಡೀತಾ ಇದ್ದು. ಈಗ ಪ್ಯಾಂಟಮ್‌ ಚಿತ್ರದ ಕಡೆಯಿಂದ ಹೊಸದೊಂದು ಸುದ್ದಿ ಹೊರ ಬಿದ್ದಿದೆ. ಪ್ಯಾಂಟಮ್‌ ಚಿತ್ರಕ್ಕೆ ಅನೂಪ್‌ ಭಂಡಾರಿ ನಿರ್ದೇಶನ ಮತ್ತು ಸುದೀಪ್‌ ನಾಯಕ ನಟ ಅನ್ನೋದು ಬಿಟ್ರೆ ಬೇರ್ಯಾವ ಸುದ್ದಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ, ಅಲ್ಲದೇ ಬೇರೆ ಕಲಾವಿದರ ಬಗ್ಗೆ ಕೂಡ ಮಾಹಿತಿಯನ್ನು ಸಹ ಹೊರ ಹಾಕಿರಲಿಲ್ಲ, ಆದ್ರೆ ಈಗ ಚಿತ್ರತಂಡಕ್ಕೆ ಮತ್ತೊಬ್ಬ ನಾಯಕ ನಟ ಆಯ್ಕೆಯಾಗಿದ್ದಾರೆ ಅನ್ನೋ ಸುದ್ದಿ ಈಗ ಹೊರ ಬಿದ್ದಿದೆ. ಹೌದು ಕಿಚ್ಚನ ಜೊತೆ ʻಪ್ಯಾಂಟಮ್‌ ʼ ಚಿತ್ರದಲ್ಲಿ ಅನೂಪ್‌ ಭಂಡಾರಿ ಸಹೋದರ ನಾಯಕ ನಟ ನಿರೂಪ್‌ ಭಂಡಾರಿ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ ಅನ್ನೋ ಮಾಹಿತಿ ಈಗ ಹೊರ ಬಿದ್ದಿದೆ.

ಕಿಚ್ಚನ ಅಳಿಯ ಸ್ಯಾಂಡಲ್‌ವುಡ್‌ಗೆ ಎಂಟ್ರಿ..!
ಇನ್ನು ಕಿಚ್ಚನ ಅಕ್ಕನ ಮಗ ಕೂಡ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡ ಬೇಕಾಗಿತ್ತು. ಚಿತ್ರತಂಡ ಕೂಡ ಅವರನ್ನೇ ಆಯ್ಕೆ ಕೂಡ ಮಾಡಿತ್ತು, ನಂತರದ ಬೆಳವಣಿಗೆಯ ನಂತರ ಅವರ ಜಾಗ ನಿರೂಪ್‌ ಭಂಡಾರಿಯನ್ನು ಆಯ್ಕೆ ಮಾಡಲಾಯಿತು. ಇನ್ನು ಕಿಚ್ಚನ ಸೋದರಳಿಯ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡಲು ಚಿತ್ರದ ವರ್ಕ್‌ ಕೂಡ ರೆಡಿಯಾಗಿದೆಯಂತೆ.

ಮೂರನೇ ಸಿನಿಮಾದಲ್ಲೂ ಒಂದಾದ ಭಂಡಾರಿ ಬ್ರದರ್ಸ್‌..!

ಸ್ಯಾಂಡಲ್‌ವುಡ್‌ನಲ್ಲಿ ರಂಗೀತರಂಗ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಭಂಡಾರಿ ಬ್ರದರ್ಸ್‌ ನಂತರ ರಾಜರಥ ಸಿನಿಮಾ ಮಾಡಿದ್ರು, ಈಗ ಪ್ಯಾಂಟಮ್‌ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಒಟ್ಟಿನಲ್ಲಿ ಪ್ಯಾಂಟಮ್‌ ಚಿತ್ರಕ್ಕೆ ಭಂಡಾರಿ ಬ್ರದರ್ಸ್‌ ಬಲ ಕೊಡಲಿದ್ದು.ಚಿತ್ರ 2020ರಲ್ಲಿ ಸೆಟ್ಟೇರಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top