ಕಿಚ್ಚನ ಜೊತೆ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್‌ನ ಕತ್ರೀನಾ ಕೈಫ್‌

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ಫ್ಯಾಂಟಮ್‌ ಹವಾ ಸದ್ಯ ಜೋರಾಗೆ ಇದೆ. ಪ್ರತಿ ದಿನ ಒಂದಿಲ್ಲೊಂದು ಹೊಸ ಅಪ್‌ಡೇಟ್‌ ಕೊಡ್ತಾ ಇರೋ ಸಿನಿಮಾ ತಂಡ ಇದೀಗ ಹೊಸದೊಂದು ಸುದ್ದಿಯ ಮೂಲಕ ಸದ್ದುಮಾಡ್ತಾ ಇದೆ.

ಹೌದು ಸದ್ಯ ಲಾಕ್‌ಡೌನ್‌ ನಂತರ ಚಿತ್ರ ಶೂಟಿಂಗ್‌ಗೆ ಅನುಮತಿ ನೀಡುತ್ತಿದ್ದಂತೆ ಹೈದರಬಾದ್‌ನಲ್ಲಿ ದೊಡ್ಡ ಸೆಟ್‌ನಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿರೋ ಚಿತ್ರತಂಡ ಈಗಾಗಲೇ ಚಿತ್ರದ ಬಹುಭಾಗ ಶೂಟಿಂಗ್‌ ಕಂಪ್ಲೀಟ್‌ ಮಾಡಿಯಾಗಿದೆ. ಇನ್ನು ಕೊನೆಯ ಹಂತದ ಶೂಟಿಂಗ್‌ಗಾಗಿ ಕೇರಳಕ್ಕೆ ಹೋಗಲು ಸಹ ಪ್ಲಾನ್‌ ಮಾಡಿಕೊಳ್ತಾ ಇದೆ.

ಹೀಗಿರ ಬೇಕಾದ್ರೆ ಇದೀಗ ಚಿತ್ರತಂಡಿದಿದ್ದ ಹೊಸದೊಂದು ಸುದ್ದಿ ಹೊರಬಿದ್ದಿದ್ದು, ಚಿತ್ರತಂಡ ಫ್ಯಾಂಟಮ್‌ ಚಿತ್ರಕ್ಕಾಗಿ ಒಂದು ಸ್ಪೆಷಲ್‌ ಸಾಂಗ್‌ ಮಾಡಲು ಪ್ಲಾನ್‌ ಮಾಡಿಕೊಳ್ತಾ ಇದ್ಯಂತೆ, ಇನ್ನು ಈ ಸ್ಪೆಷಲ್‌ ಸಾಂಗ್‌ಗಾಗಿ ಸ್ಪೆಷಲ್‌ ಡ್ಯಾನ್ಸರ್‌ಗಳನ್ನು ಕರೆತರಲು ಚಿತ್ರತಂಡ ಪ್ಲಾನ್‌ ಮಾಡಿದ್ದು, ಇದಕ್ಕಾಗಿ ಬಾಲಿವುಡ್‌ ಕಡೆ ಮುಖಮಾಡಿದೆಯಂತೆ. ಇದಕ್ಕಾಗಿ ಬಾಲಿವುಡ್‌ ಬೆಡಗಿಯಾದ ಕತ್ರಿನಾ ಕೈಫ್‌ ಹಾಗೂ ನೋರಾ ಫತೇಹಿ ಅವರನ್ನು ಕಿಚ್ಚನ ಜೊತೆ ಹೆಚ್ಚ ಹಾಕಲು ಅಪ್ರೋಚ್‌ ಮಾಡಲಾಗಿದೆಯಂತೆ ಸದ್ಯ ಆ ಕಡೆಯಿಂದ ಇನ್ನು ಓಕೆ ಅನ್ನೋ ಮಾಹಿತಿ ಲಭ್ಯವಾಗಿಲ್ಲ, ಸದ್ಯ ಕೊನೆಯ ಹಂತದ ಶೆಡ್ಯುಲ್‌ ಡಿಸೆಂಬರ್‌ 4ರಿಂದ ಕೇರಳದಲ್ಲಿ ಶುರುವಾಗಲಿದ್ದು, ಆ ನಂತರದಲ್ಲಿ ಸ್ಪೆಷಲ್‌ ಸಾಂಗ್‌ಗೆ ಸಖತ್‌ ಸ್ಟೆಪ್‌ ಹಾಕಲು ಬಾಲಿವುಡ್‌ ನಿಂದ ಬೆಡಗಿಯರು ಬರಲಿದ್ದಾರೆ. ಸದ್ಯ ಕಿಚ್ಚನ ಜೊತೆ ಕತ್ರಿನಾ ಕೈಫ್‌ ಸೊಂಟ ಬಳುಕಿಸಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದ್ದು, ಇನ್ನು ಯಾವುದೇ ಅಧಿಕೃತವಾಗಿಲ್ಲ.

ಇನ್ನು ಈ ಚಿತ್ರಕ್ಕೆ ಅನೂಪ್‌ ಭಂಡಾರಿ ಡೈರೆಕ್ಷನ್‌ ಮಾಡ್ತಾ ಇದ್ದು, ಜ್ಯಾಕ್‌ ಮಂಜು ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಮ್ಯೂಸಿಕ್‌ ಮೋಡಿ ಇರಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top