ಕಿಚ್ಚನಿಗೆ ಸಾಥ್ ನೀಡೋಕೆ ರೆಡಿಯಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್..!

ಸ್ಯಾಂಡಲ್‍ವುಡ್‍ನಲ್ಲಿ ಹೊಸದೊಂದು ಸುದ್ದಿಯೊಂದು ಹೊರಬಿದ್ದಿದೆ,ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ,ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ನೀಡಲಿದ್ದಾರಂತೆ, ಕಿಚ್ಚ ಸುದೀಪ್ ಸದ್ಯ ಪೈಲ್ವಾನ್ ಮತ್ತು ಕೋಟಿಗೊಬ್ಬ 3 ಚಿತ್ರದಲ್ಲಿ ಬ್ಯೂಸಿ‌ ಇದ್ರೆ ,ಇತ್ತ ಪುನೀತ್ ರಾಜ್‍ಕುಮಾರ್ ಯುವರತ್ನ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ, ಈ ನಡುವೆ ಈಗ ಕಿಚ್ಚನಿಗೆ ಪುನೀತ್ ಯಾವುದಕ್ಕೇ ಸಾಥ್ ನೀಡ್ತಿದ್ದಾರೆ ಒಟ್ಟಿಗೆ ಸಿನಿಮಾ‌ ಮಾಡ್ತಾ ಇದ್ದಾರ ಅನ್ನೋ ಅನುಮಾನಗಳು ಶುರುವಾಗ್ತಾವೆ, ಆದ್ರೆ ಕಿಚ್ಚನಿಗೆ ಅಪ್ಪು ಸಾಥ್ ನೀಡ್ತಾ ಇರೋದು ಸಿನಿಮಾದಲ್ಲಿ ಅಲ್ಲ ಬದಲಿಗೆ ಸಿನಿಮಾದ ಆಡಿಯೋ ಲಾಂಚ್ ಗೆ.

ಹೌದು ಬಹು ಭಾಷೆಯಲ್ಲಿ ರೆಡಿಯಾಗಿರೋ ಪೈಲ್ವಾನ್ ಸಿನಿಮಾ ಇದೇ 9ರಂದು ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿದೆ, ಈಗಾಗ್ಲೇ ಐದು ಭಾಷೆಯಲ್ಲಿ‌ ತೆರೆಕಾಣಲು ರೆಡಿಯಾಗಿರೋ ಪೈಲ್ವಾನ್ ಸಿನಿಮಾದ ಲಿರಿಕಲ್ ಆಡಿಯೋ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಹಿಟ್ ಆಗಿದೆ, ಈ ನಡುವೆ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿರೋ ಚಿತ್ರತಂಡ 9ರಂದು ಚಿತ್ರದುರ್ಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೈಯಲ್ಲಿ ಆಡಿಯೋ ರಿಲೀಸ್ ಮಾಡಿಸಲಿದೆ.

ಈ ಮೂಲಕ ಒಬ್ಬ ಸ್ಟಾರ್ ನಟನ ಚಿತ್ರದ ಆಡಿಯೋವನ್ನು ಇನ್ನೊಬ್ಬ ಸ್ಟಾರ್ ನಟ ರಿಲೀಸ್ ಮಾಡೋ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಪೈಲ್ವಾನ್ ಚಿತ್ರ, ಈ ಮೂಲಕ ಕಿಚ್ಚ ಸುದೀಪ್ ಗೆ ಸಾಥ್ ನೀಡಲಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಒಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ಇಬ್ಬರು ಸ್ಟಾರ್ ನಟರನ್ನು ಒಂದೇ ವೇದಿಕೆಯಲ್ಲಿ ನೋಡೋ ಭಾಗ್ಯ ಸಿಗಲಿದೆ ಚಿತ್ರದುರ್ಗದ ಜನತೆಗೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top