ಕಸ್ತೂರಿ ಮಹಲ್‌ ಶಾನ್ವಿಯ ಫಸ್ಟ್‌ ಲುಕ್‌ ರಿಲೀಸ್‌

ಕಸ್ತೂರಿ ಮಹಲ್‌ ಚಿತ್ರ ಸಖತ್‌ ಸೌಂಡ್‌ ಮಾಡುತ್ತಿರೋ ಟೈಟಲ್‌.. ಮೊದಲು ಕಸ್ತೂರಿ ನಿವಾಸ ಎಂಬ ಟೈಟಲ್‌ ಇಟ್ಟು ವಿರೋಧ ವ್ಯಕ್ತವಾಗಿದ್ದರಿಂದ ಕಸ್ತೂರಿ ಮಹಲ್‌ ಎಂದು ಟೈಟಲ್‌ ಚೇಂಚ್‌ ಮಾಡಿದ ಚಿತ್ರತಂಡ ಇದೀಗ ನಾಯಕಿಯ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದೆ. ಈ ಚಿತ್ರಕ್ಕೆ ಮೊದಲು ರಚಿತಾ ರಾಮ್‌ ಆಯ್ಕೆಯಾಗಿದ್ದರು, ಆದ್ರೆ ಡೇಟ್ಸ್‌ ಹೊಂದಾಣಿಕೆಯಾಗದ ಕಾರಣ ಚಿತ್ರದಿಂದ ರಚಿತಾ ರಾಮ್‌ ಹೊರ ಬಂದಿದ್ರು, ಇನ್ನು ಆ ಜಾಗಕ್ಕೆ ಶಾನ್ವಿ ಶ್ರೀವತ್ಸ ಎಂಟ್ರಿಕೊಟ್ಟಿದ್ದರು, ಇದೀಗ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು ಈ ಬಗ್ಗೆ ಟ್ವೀಟರ್‌ನಲ್ಲಿ ಶಾನ್ವಿ ಖುಷಿಯನ್ನು ಹಂಚಿಕೊಂಡಿದ್ದಾರೆ.

ʻನನ್ನ ಮುಂದಿನ ಕನ್ನಡ ಚಿತ್ರ ಪ್ರಖ್ಯಾತ ನಿರ್ದೇಶಕರಾದ ದಿನೇಶ್ ಬಾಬು ಸರ್ ಅವರ #ಕಸ್ತೂರಿಮಹಲ್ ಎಂದು ನಿಮ್ಮೆಲ್ಲರಿಗೂ ತಿಳಿಸಲು ನನಗೆ ಸಂತೋಷವಾಗುತ್ತದೆ. ನನ್ನ ಕನ್ನಡದ ಮೊದಲ ಚಿತ್ರದ ನಂತರ ಮತ್ತೊಮ್ಮೆ ಹಾರರ್ ಚಿತ್ರ ಮಾಡುತ್ತಿದ್ದು, ಇನ್ನೂ ಅನೇಕ ಒಳ್ಳೆಯ ಅವಕಾಶದ ನಿರೀಕ್ಷೆಯಲ್ಲಿದ್ದೇನೆ. ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹಕ್ಕೆ ಚಿರಋಣಿ ʼ

ಅಕ್ಟೋಬರ್‌ 5ರಿಂದ ಚಿಕ್ಕಮಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್‌ ನಡೆಯಲ್ಲಿದ್ದು, ಇದು ದಿನೇಶ್‌ ಬಾಬು ನಿರ್ದೇಶನದ 50ನೇ ಚಿತ್ರ ಅನ್ನೋದು ವಿಶೇಷ. ಇನ್ನು ಈ ಚಿತ್ರದಲ್ಲಿ ಬಿಗ್‌ಬಾಸ್‌ ಖ್ಯಾತಿಯ ಶೃತಿ ಪ್ರಕಾಶ್‌ ಕೂಡ ನಟಿಸ್ತಾ ಇದ್ದು ಶಾನ್ವಿಯ ಕಸ್ತೂರಿ ಮಹಲ್‌ ಫಸ್ಟ್‌ ಲುಕ್‌ ಎಲ್ಲರ ಕಣ್ಣು ಕುಕ್ಕಿಸುವಂತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top