ಕಸ್ತೂರಿ ನಿವಾಸದಿಂದ ಹೊರಬಂದ ಡಿಂಪಲ್ ಕ್ವೀನ್..

ಸ್ಯಾಂಡಲ್‍ವುಡ್‍ನ ಡಿಂಪಲ್ ಕ್ವೀನ್ ರಚಿತಾರಾಮ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ. ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರ 50ನೇ ಸಿನಿಮಾ `ಕಸ್ತೂರಿ ನಿವಾಸ’ ಚಿತ್ರದಿಂದ ರಚಿತಾ ರಾಮ್ ಹೊರನಡೆದಿದ್ದಾರೆ. ಹೌದು ಡೇಟ್ಸ್ ಹೊಂದಾಣಿಯಾಗದ ಕಾರಣ ಚಿತ್ರದಿಂದ ಹೊರ ಬಂದಿದ್ದಾರೆ ರಚಿತಾ ರಾಮ್.

ಇನ್ನು ಕಸ್ತೂರಿ ಸಿವಾಸ ಟೈಟಲ್‍ನಿಂದಲೇ ಸಖತ್ ಸುದ್ದಿ ಕೂಡ ಮಾಡಿತ್ತು, ಡಾ.ರಾಜ್‍ಕುಮಾರ್ ಅಭಿನಯದ ಎವರ್ ಗ್ರೀನ್ ಸಿನಿಮಾ ಕಸ್ತೂರಿ ನಿವಾಸ, ಈ ಟೈಟಲ್ ಇಟ್ಟು ದಿನೇಶ್ ಬಾಬು ಸಿನಿಮಾದ ಮುಹೂರ್ತ ಕೂಡ ಮಾಡಿದ್ರು, ಆದ್ರೆ ಅಭಿಮಾನಿಗಳಿಂದ ಈ ಟೈಟಲ್‍ಗೆ ವಿರೋಧ ಕೂಡ ವ್ಯಕ್ತವಾಗಿತ್ತು, ಈ ಹಿನ್ನೆಲೆಯಲ್ಲಿ ನಿರ್ದೇಶಕ ದಿನೇಶ್ ಬಾಬು ಟೈಟಲ್ ಕೂಡ ಬದಲಿಸಿರುವುದಾಗಿ ಹೇಳಿದ್ರು,ಇನ್ನು ಈ ಚಿತ್ರಕ್ಕೆ ಕಸ್ತೂರಿ ಮಹಲ್ ಅಂತ ಟೈಟಲ್ ಕೂಡ ಫೈನಲ್ ಆಗಿತ್ತು, ಇನ್ನು ಕೆಲವೇ ದಿನದಲ್ಲಿ ಚಿತ್ರದ ಶೂಟಿಂಗ್ ಕೂಡ ಪ್ರಾರಂಭವಾಗಬೇಕಾಗಿತ್ತು, ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು ಇದರಲ್ಲಿ ರಚಿತಾ ರಾಮ್ ಡಿಫರೆಂಟ್ ಶೇಡ್‍ನಲ್ಲಿ ಕಾಣಿಸಿಕೊಳ್ಳ ಬೇಕಾಗಿತ್ತು, ಆದ್ರೀಗ ಡೇಟ್ಸ್ ಹೊಂದಿಕೆಯಾಗದ ಕಾರಣ ಚಿತ್ರದಿಂದ ರಚಿತಾ ರಾಮ್ ಹೊರನಡೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top