ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡಲು 10 ಕೋಟಿಗೆ ಆಸ್ತಿ ಆಡವಿಟ್ಟ ನಟ ಸೋನುಸೂದ್‌

ಕೊರೋನಾ ಎಫೆಕ್ಟ್‌ನಿಂದಾಗಿ ದೇಶವೇ ಲಾಕ್‌ಡೌನ್‌ ಆದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಅದೆಷ್ಟೋ ಅಸಾಹಯಕರಿಗೆ ಸಹಾಯವಾಗಿದ್ದ ನಟ ಸೋನು ಸೋದು ಇಡೀ ದೇಶವೇ ಮೆಚ್ಚುವಂತಹ ಕೆಲಸವನ್ನು ಮಾಡಿದ್ರು. ಲಾಕ್‌ ಡೌನ್‌ನಲ್ಲಿ ಕಷ್ಟದಲ್ಲಿ ಇರೋರಿಗೆ, ವಿದ್ಯಾಭ್ಯಾಸದ ವಿಚಾರದಲ್ಲಿ ಮಕ್ಕಳಿಗೆ ಸಹಾಯ ಮಾಡುವ ಮೂಲಕ, ನೂರಾರು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೋಗಲು ಸಹಾಯ ಮಾಡುವ ಮೂಲಕ, ಹಲವರಿಗೆ ಸರ್ಜಿರಿ ಸೇರಿದಂತೆ ಅನೇಕ ವಿಷಯದಲ್ಲಿ ಸಹಾಯ ಮಾಡುವ ಮೂಲಕ ತಮ್ಮ ಸಹಾಯದ ಗುಣದಿಂದಲೇ ಹೀರೋ ಆಗಿದ್ದ ಸೋನು ಸೂದ್‌ ಇದೀಗ ಮತ್ತೊಂದು ಹೆಚ್ಚು ಇಡುವ ಮೂಲಕ ಮತ್ತೆ ಭಾರತೀಯರ ಹೃದಯ ಗೆದ್ದಿದ್ದಾರೆ.

ಹೌದು ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ 10 ಕೋಟಿಗೆ ತಮ್ಮ ಆಸ್ತಿಯನ್ನು ಅಡವಿಟ್ಟಿದ್ದಾರೆ. ಮುಂಬೈನಲ್ಲಿ ವಿವಿಧ ಕಡೆ ಇರೋ ತಮ್ಮ 8 ಆಸ್ತಿಗಳನ್ನು ಸೋನು ಸೂದ್‌ ಅಡವಿಟ್ಟಿದ್ದು ಆ ಮೂಲಕ ಕಷ್ಟದಲ್ಲಿರುವವರೆಗೆ ಸಹಾಯ ಮಾಡಲು 10 ಕೋಟಿ ಸಾಲವನ್ನು ಪಡೆದುಕೊಂಡಿದ್ದಾರೆ. ಸಾಲ ಪಡೆದುಕೊಳ್ಳಲು 2 ಅಂಗಡಿ ಮತ್ತು 6 ಫ್ಲ್ಯಾಟ್‌ಗಳನ್ನು ಅಡವಿಟ್ಟಿದ್ದು. ಸೆಪ್ಟೆಂಬರ್‌ 15ರಂದು ಈ ಒಪ್ಪಂದಕ್ಕೆ ಸಹಿಹಾಕಲಾಗಿದೆ ಎಂದು ವರದಿಯಾಗಿದೆ. ತಮ್ಮ ಸಹಾಯದ ಗುಣದಿಂದಲೇ ಎಲ್ಲ ಮನಸ್ಸು ಗೆದ್ದಿದ್ದ ಸೋನು ಸೂದ್‌ ಇದೀಗ ತಮ್ಮ ಆಸ್ತಿಯನ್ನು ಆಡವಿಟ್ಟು ಕಷ್ಟದಲ್ಲಿರೋರಿಗೆ ಸಹಾಯ ಮಾಡಲು ಮುಂದಾಗಿರುವುದನ್ನು ಕಂಡು ಜನಸಾಮಾನ್ಯರು ಸೋನು ಸೂದ್‌ ರಿಯಲ್‌ ಹೀರೋ ಅಂತ ಹೊಗಳುತ್ತಿದ್ದಾರೆ.

ಇನ್ನು ತಾವು ಅಡವಿಟ್ಟಿರೋ ಆಸ್ತಿ ತಮ್ಮ ಮತ್ತು ಪತ್ನಿ ಹೆಸರಿನಲ್ಲಿ ಇದ್ದು, ಇದರಿಂದ ಬರುವ ಬಾಡಿಗೆಯನ್ನು ಪಡೆದುಕೊಳ್ಳ ಬಹುದು. ತಾವು ತೆಗೆದುಕೊಂಡಿರೋ ಸಾಲದ ಬಡ್ಡಿ ಮತ್ತು ಅಸಲನ್ನು ಸೋನು ಸೂದ್‌ ದಂಪತಿ ಪಾವತಿಸಬೇಕಾಗುತ್ತದೆ.

ಲಾಕ್‌ಡೌನ್‌ ವೇಳೆ ಸೋನು ಸೂದ್‌ ಅವರ ಸಾಮಾಜಿಕ ಕಾರ್ಯವನ್ನು ನೋಡಿ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪ್ರತಿಷ್ಟಿತ ಎಸ್‌ಡಿಜಿ ಸ್ಪೆಷಲ್‌ ಮಾನವೀಯ ಕಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು, ಆ ಮೂಲಕ ವಿಶ್ವಸಂಸ್ಥೆಯ ವರೆಗೆ ಸೋನು ಸೂದ್‌ ಗುರುತಿಸಿಕೊಂಡಿದ್ದರು

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top