ಕಷ್ಟಗಳನ್ನು ಮೆಟ್ಟಿನಿಂತ ವ್ಯಕ್ತಿ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ!

ಕಷ್ಟ ಯಾರಿಗೆ ತಾನೇ ಬರೊಲ್ಲ ಹೇಳಿ, ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿ ಕಷ್ಟಗಳನ್ನು ಎದುರಿಸಲೇ ಬೇಕು, ಅದರಲ್ಲೂ ಕಷ್ಟಗಳನ್ನು ಮೆಟ್ಟಿನಿಂತ ವ್ಯಕ್ತಿ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ, ಇನ್ನು ಕಷ್ಟವನ್ನು ಅರಿತವನೇ ಇನ್ನೊಬ್ಬನ ಕಷ್ಟವನ್ನು ಅರಿತುಕೊಳ್ಳಲು ಸಾಧ್ಯ,ಜೀವನದಲ್ಲಿ ಎಲ್ಲವನ್ನು ಕಂಡವನು ಕಷ್ಟದಲ್ಲಿರುವವರ ಸ್ಥಿತಿಯನ್ನು ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ, ಆದ್ರೆ ಕಷ್ಟದಲ್ಲಿ ಬೆಳೆದ ವ್ಯಕ್ತಿ ತನ್ನಂತಯೇ ನೋವುಗಳನ್ನು ಕಂಡವರನ್ನು ನೋಡಿ ಎಂತಹ ತ್ಯಾಗಕ್ಕೂ ಸಿದ್ಧವಾಗಿರುತ್ತಾನೆ, ಅಂತಹ ತ್ಯಾಗದ ಗುಣವನ್ನು ಹೊಂದಿರುವ ಮಹಾ ತಾಯಿಯ ಕಥೆಯನ್ನು ಇವತ್ತು ನಾವ್ ಹೇಳ್ತಾ ಇದ್ದೇವೆ, ಸಾವಿರಾರು ಅನಾಥರ ಬಾಳಿಗೆ ಆಶಾಕಿರಣವಾಗಿರೋ ಆ ಮಹಾ ತಾಯಿಯೇ `ಸಿಂಧೂ ತಾಯ್ ಸಪ್ಕಲ್’.

ಭಿಕ್ಷೆ ಬೇಡಿ ಸರಿ ಸುಮಾರು 1400ಕ್ಕೂ ಹೆಚ್ಚು ಅನಾಥರಿಗೆ ಆಶಾಕಿರಣವಾಗಿರೊ ಈ ಮಹಾತಾಯಿಯ ಜೀವನದ ಕಥೆ ಕೇಳಿದ್ರೆ ಎಂತಹವರಿಗೂ ಒಮ್ಮೆ ಕರುಳು ಹಿಂಡೊದು ಗ್ಯಾರಂಟಿ. ಅನಾಥರ ಜೀವನ ಬೆಳಗಲು ತಮ್ಮ ಜೀವನವನ್ನೇ ಮುಡುಪಾಗಿಟ್ಟ ಈ ಮಹಾತಾಯಿ ಹುಟ್ಟಿದ್ದು ಮಹಾರಾಷ್ಟ್ರದ ಪಿಂಪ್ರಿ ಮೆಘೆ ಹಳ್ಳಿಯಲ್ಲಿ 14 ನವೆಂಬರ್ 1948ರಲ್ಲಿ ಜನಿಸಿದ ಸಿಂಧುತಾಯಿ, ಕಲಿಯುವ ಆಸಕ್ತಿ ಇದ್ದರು ಮನೆಯವರ ಪ್ರೋತ್ಸಹ ದೊರಕದ ಹಿನ್ನೆಲೆ ನಾಲ್ಕನೇ ತರಗತಿಗೆ ವಿಧ್ಯಾಭ್ಯಾಸವನ್ನು ಮೊಟಕುಗೊಳಿಸ ಬೇಕಾಯಿತು.ನಂತರ ಎಲೆ ಮತ್ತು ಮರಳಿನಲ್ಲಿ ಅಕ್ಷರಭ್ಯಾಸ ಮಾಡುತ್ತಿದ್ದ ಸಿಂಧು ತಾಯಿಗೆ 10ನೇ ವಯಸ್ಸಿನಲ್ಲಿ ಮದುವೆಯನ್ನು ಮಾಡಿದ್ರು, ಇದರಿಂದಾಗಿ ಅವರ ಶಿಕ್ಷಣಕೂಡ ಅರ್ಧಕ್ಕೆ ನಿಂತು ಹೋಯಿತು. ತಮ್ಮ ಇಪ್ಪತ್ತನೆ ವಯಸ್ಸಿನಲ್ಲಿ 9ತಿಂಗಳು ಇರುವಾಗ ಸಿಂಧೂ ತಾಯಿಯನ್ನು ಗಂಡನ ಮನೆಯವರು ಸಹ ಹೊರದೂಡಿದಾಗಿ, ಅಲ್ಲಿಂದ ಕಿಲೋಮೀಟರ್ ನಡೆದು ತವರು ಸೇರಲು ಮುಂದಾದಾಗ ತವರು ಮನೆಯವರು ಆಕೆಯನ್ನು ಮನೆಯೊಳಗೆ ಸೇರಿಸಿಕೊಳ್ಳುವುದಿಲ್ಲ.

ಆಗ ದನದ ಕೊಟ್ಟಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ, ತನಗೆ ಬಂದ ಕಷ್ಟವನ್ನು ನೆನೆದು ಆತ್ಮಹತ್ಯೆ ಮಾಡಿಕೊಳ್ಳಲು ಯೋಚನೆ ಮಾಡಿದ್ದರಂತೆ, ಆದ್ರೆ ತನ್ನ ಮಗು ಮಾಡಿದ ತಪ್ಪೇನು ಆಕೆಗಾಗಿಯಾದ್ರು ನಾನು ಬದುಕಬೇಕು ಅನ್ನೋ ದೃಢ ನಿರ್ಧಾರವನ್ನು ತೆಗೆದುಕೊಂಡ ಸಿಂಧೂ ತಾಯಿ, ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡಲು ಪ್ರಾರಂಭಿಸಿದ್ರು, ತಾವು ಭಿಕ್ಷೆ ಬೇಡಿ ಕೇವಲ ತಮ್ಮ ಜೀವನವನ್ನು ಮಾತ್ರ ಸಾಗಿಸದೆ, ಬೇರೆ ಅನಾಥರ ಬಾಳನ್ನು ಬೆಳಗಿಸೋ ಕಾರ್ಯಕ್ಕೆ ಮುಂದಾದ್ರು, ಇದಕ್ಕಾಗಿ ತಾವು ಹೆಚ್ಚು ಹೆಚ್ಚು ಸಮಯ ಭಿಕ್ಷೆ ಬೇಡಲು ಮುಂದಾದರು, ಇದರಿಂದ ಬಂದ ಹಣದಿಂದ ಹಲವು ಮಕ್ಕಳನ್ನು ದತ್ತು ಪಡೆಯಲು ಇವರು ಮುಂದಾದ್ರು, ಈ ಮೂಲಕ ಅನಾಥ ಮಕ್ಕಳ ಪಾಲಿನ ಮಹಾ ತಾಯಿಯಾದ್ರು, ಇನ್ನು ಇದುವರೆಗೂ ಇವರು 1400ಕ್ಕೂ ಹೆಚ್ಚು ಮಕ್ಕಳನ್ನು ದತ್ತು ಪಡೆದಿದ್ದು, ಇವರಿಗೆಲ್ಲ ಒಂದು ಒಳ್ಳೆಯ ಜೀವನದ ಮಾರ್ಗವನ್ನು ಸಹ ತೋರಿಸಿದ್ದಾರೆ.

ಇನ್ನೊಂದು ಇಂಟರೆಸ್ಟಿಂಗ್ ವಿಚಾರವೆಂದರೆ ಅನಾಥ ದತ್ತು ಮಕ್ಕಳಿಗೆ ಉತ್ತಮ ಶಿಕ್ಷಣ, ಜೀವನವನ್ನು ಕಲ್ಪಿಸಿರುವ ಸಿಂಧುತಾಯಿ,ತನ್ನ ಸ್ವಂತ ಮಗಳು ಮತ್ತು ತನ್ನ ಸಾಕು ಮಕ್ಕಳ ಬಗ್ಗೆ ಭೇದಭಾವ ಮೂಡಬಾರದು ಎಂಬ ಕಾರಣಕ್ಕೆ ತನ್ನ ಮಗಳನ್ನು ಇನ್ನೊಂದು ಅನಾಥಾಶ್ರಮಕ್ಕೆ ನೀಡಿ ಅಲ್ಲಿ ಬೆಳೆಸಿದ್ದರು, ಸದ್ಯ ಅವರ ಮಗಳು ಕೂಡ ಒಂದು ಅನಾಥಾಶ್ರಮವನ್ನು ನಡೆಸುತ್ತಿದ್ದಾರೆ. ಇನ್ನು ಸಿಂಧೂ ತಾಯಿ ದತ್ತು ಪಡೆದು ಸಾಕಿ ಸಲುಹಿದ ಅದೆಷ್ಟೋ ಅನಾಥರು ಈಗ ವಕೀಲರು,ವೈದ್ಯರಾಗಿದ್ದಾರೆ, ಆ ಮೂಲಕ ಆ ಮಕ್ಕಳ ಪಾಲಿನ ಮಹಾ ತಾಯಿಯಾಗಿದ್ದಾರೆ.

ಇನ್ನು ಸಿಂಧೂ ತಾಯಿಯ ಈ ಕಾರ್ಯಕ್ಕೆ ಅನೇಕ ಪ್ರಶಸ್ತಿಗಳು ಲಭಿಸಿದ್ದು, 2017ರಲ್ಲಿ ರಾಷ್ಟಪತಿಯವರಿಂದ `ನಾರಿ ಶಕ್ತಿ ಪುರಸ್ಕಾರ’ ಕೂಡ ಲಭಿಸಿದೆ. ಅಷ್ಟೇ ಅಲ್ಲದೇ ಇವರ ಈ ಮಹಾಕಾರ್ಯಕ್ಕೆ ಈಗ ಅನೇಕರು ಸಹ ಕೈ ಜೋಡಿಸಿದ್ದು, ತಮ್ಮ 20ನೇ ವಯಸ್ಸಿನಲ್ಲಿ ಮನೆಯಿಂದ ಹೊರಹಾಕಿದ್ದ ಗಂಡನೂ ಸಹ ಈಗ ಇವರ ಆಶ್ರಯದಲ್ಲೇ ಇದ್ದಾರೆ. ಸಿಂಧೂ ತಾಯಿಯ ಈ ಕಾರ್ಯಕ್ಕೆ ಅನೇಕ ಪ್ರಶಂಸೆಗಳು ಬಂದಿದ್ದರೆ, ಇವರ ಜೀವನದ ಯಶೋಗಾಥೆಯ ಸಿನಿಮಾ ಕೂಡ ಮರಾಠಿಯಲ್ಲಿ ಮೂಡಿಬಂದಿದೆ, ಇತರರಿಗೆ ಸ್ಫೂರ್ತಿಯ ಸೆಲೆಯಾಗಿರೋ ಮಹಾತಾಯಿಗೆ ನಮ್ಮ ಕಡೆಯಿಂದನೂ ಒಂದು ಸಲಾಂ ಹೇಳೋಣ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top