
ಕರ್ನಾಟಕದಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದಯ ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಈಗಾಗಲೇ ಕರ್ನಾಟಕದಲ್ಲಿ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಶುರುವಾಗಿದೆ. ಇನ್ನು ಭಾರೀ ಮಳೆಗೆ ಈಗಾಗಲೇ ಊರುಗಳು ಜಲಾವೃತ್ತವಾಗಿದ್ದು, ಕೆಲವು ಕಡೆ ಸೇತುವೆ,ಹೆದ್ದಾರಿಗಳು ಮುಳುಗಿ ಹೋಗಿವೆ, ಇನ್ನು ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಹವಾಮಾನ ಇಲಾಖೆ ಭಾರೀ ಮಳೆ ಬರುದುರ ಬಗ್ಗೆ ಸೂಚನೆಯನ್ನು ನೀಡಿದೆ.