ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ.. ಸ್ಯಾಂಡಲ್‍ವುಡ್ ಸ್ಟಾರ್ಸ್‍ಗಳ ಬೆಂಬಲ..!

ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲು ಉದ್ಯೋಗ

ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲು ಉದ್ಯೋಗಕ್ಕೆ ಆದ್ಯತೆ ನೀಡಿ ಅನ್ನೋದು ಅನಾಧಿಕಾಲದಿಂದಲ್ಲೂ ಕೂಗು ಕೇಳಿ ಬರ್ತಾನೆ ಇದೆ, ಈಗ ಕರ್ನಾಟಕದಲ್ಲಿ ಮೊದಲು ಕನ್ನಡಿಗರಿಗೆ ಉದ್ಯೋಗ ಕೊಡಿ ಎಂಬ ಅಭಿಯಾನ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಗಿದ್ದು, ಈ ಒಂದು ಅಭಿಯಾನಕ್ಕೆ ಈಗ ಸ್ಯಾಂಡಲ್‍ವುಡ್‍ನ ಸ್ಟಾರ್ ನಟರು ಸಹ ಸಾಥ್ ನೀಡಿದ್ದಾರೆ.
ಇನ್ನು ಕನ್ನಡಿಗರಿಗೆ ಕರ್ನಾಟಕದಲ್ಲಿ ಮೊದಲು ಅದ್ಯತೆ ನೀಡಿ ಎಂಬ ಧ್ವನಿಗೆ ಈಗ ಸ್ಯಾಂಡಲ್‍ವುಡ್ ಚಕ್ರವರ್ತಿ ಶಿವರಾಜ್‍ಕುಮಾರ್ ಕೂಡ ಕೈ ಜೋಡಿಸಿದ್ದು ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ, ಕನ್ನಡಿಗರಿಗೆ ಮೊದಲು ಆದ್ಯತೆ ಕೊಡಿ, ಆ ಬಳಿಕ ಇತರರಿಗೆ ಉದ್ಯೋಗ ನೀಡಿ ಎಂದು ಶಿವಣ್ಣ ಮನವಿ ಮಾಡಿಕೊಂಡಿದ್ದಾರೆ,
ಕರ್ನಾಟಕ ಎಂಬ ವಿಷಯ ಬಂದಾಗ ಅಲ್ಲಿ ಮೊದಲು ಕನ್ನಡಿಗರಿಗೆ ಆದ್ಯತೆ ನೀಡಬೇಕು, ಭಾಷೆ,ನೀರು ಅಥವಾ ಉದ್ಯೋಗ ಹೀಗೆ ಯಾವುದೇ ವಿಚಾರವಿರಲಿ ಅಲ್ಲಿ ಮೊದಲು ಕನ್ನಡಿಗರಿಗೆ ಅವಕಾಶವನ್ನು ನೀಡಬೇಕು ಇದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದ ಶಿವಣ್ಣ ಇದೇ ತಿಂಗಳು 14 ಮತ್ತು 15ಕ್ಕೆ ಉಪವಾಸ ಸತ್ಯಾಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ, ಅದು ಯಶಸ್ವಿಯಾಗಲಿ,ಅದಕ್ಕೆ ನನ್ನ ಬೆಂಬಲವಿದೆ ಉದ್ಯೋಗಕ್ಕಾಗಿ ಮಾಡುತ್ತಿರೋ ಈ ಕಾರ್ಯಕ್ರಮ ಒಳ್ಳೆದಾಗಿ ಮುಂದುವರೆಯಲಿ ಎಂದು ಶಿವಣ್ಣ ಹೇಳಿದ್ದಾರೆ,
ಇನ್ನು ಈ ಅಭಿಯಾನಕ್ಕೆ ನಿರ್ದೇಶಕ, ನಟ ರಿಶಭ್ ಶೆಟ್ಟಿ ಕೂಡ ಬೆಂಬಲ ಸೂಚಿಸಿದ್ದು ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಇದು ಬಹಳ ವರ್ಷದ ಬೇಡಿಕೆಯಾಗಿದೆ ಈ ಅಭಿಯಾನಕ್ಕೆ ಬೆಂಬಲ ನೀಡುತ್ತೇನೆ ಅಂತ ಹೇಳಿದ್ದಾರೆ,
ಈ ವೇಳೆ ಸಿಎಂ ಯಡಿಯೂರಪ್ಪನವರು ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ವಿಚಾರವಾಗಿ ಬೇಡಿಕೆ ಈಡೇರಿಸುವ ಭರವಸೆಯನ್ನು ಸಹ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top