ಕಬ್ಜ ನಂತರ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಉಪೇಂದ್ರ..

ರಿಯಲ್‌ ಸ್ಟಾರ್‌ ಉಪೇಂದ್ರ ಸದ್ಯ ಕಬ್ಜ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಟಿಸ್ತಾ ಇದ್ದಾರೆ. ಆರ್‌ ಚಂದ್ರ ನಿರ್ದೇಶನದ ಈ ಸಿನಿಮಾ ಆರು ಭಾಷೆಯಲ್ಲಿ ರೆಡಿಯಾಗ್ತಾ ಇದ್ದು, ಈಗಾಗಲೇ ಈ ಚಿತ್ರದ ಕೆಲವೊಂದು ಭಾಗಗಳು ಶೂಟಿಂಗ್‌ ಕೂಡ ಮುಗಿಸಿದೆ. ಹೀಗಿರುವಾಗಲೇ ಇದೀಗ ಉಪೇಂದ್ರ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಟಿಸಲು ಸಹಿ ಹಾಕಿದ್ದಾರೆ.. ಈ ಚಿತ್ರಕ್ಕೆ ʻಲಗಾಮ್‌ʼ ಅಂತ ಹೆಸರಿಟ್ಟಿದ್ದು, ಇದು ಐದು ಭಾಷೆಯಲ್ಲಿ ಮೂಡಿ ಬರ್ತಾ ಇದೆ. ಈ ಚಿತ್ರಕ್ಕೆ ಕೆ ಮಾದೇಶ್‌ ಆಕ್ಷನ್‌ ಕಟ್‌ ಹೇಳ್ತಾ ಇದ್ದು, ಈ ಚಿತ್ರದಲ್ಲಿ ಉಪೇಂದ್ರ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಉಪೇಂದ್ರಗೆ ಹರಿಪ್ರಿಯಾ ಜೋಡಿಯಾಗ ನಟಿಸ್ತಾ ಇದ್ದು, ಸದ್ಯದರಲ್ಲಿಯೇ ಮೈಸೂರಿನ ಸುತ್ತಮುತ್ತ ಶೂಟಿಂಗ್‌ ಪ್ಲಾನ್‌ ಮಾಡಿಕೊಂಡಿದೆ ಚಿತ್ರತಂಡ , ʻಲಗಾಮ್‌ʼ ಚಿತ್ರಕ್ಕೆ ಮುನಿರಾಜು ಬಂಡವಾಳ ಹೂಡುತ್ತಿದ್ದು, ಈ ಚಿತ್ರದ ಮೂಲಕ ಅಪ್ಪ ಮಗನ ಜುಗಲ್‌ ಬಂದಿ ಅಂದ್ರೆ ಸಾಧು ಕೋಕಿಲ ಮತ್ತು ಸುರಾಗ್‌ ಸಾಧು ಕೋಕಿಲ ಮ್ಯೂಸಿಕ್‌ ಇರಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top