ಕಬಡ್ಡಿ ತಂಡದಲ್ಲಿ ಕನ್ನಡಿಗರಿಗೆ ಅನ್ಯಾಯ, ಇದನ್ನು ಕೇಳೋರು ಯಾರು..?

ಭಾರತ ತಂಡದ ಜೂನಿಯರ್‌ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದ ಕರ್ನಾಟಕದ ಕಬಡ್ಡಿ ಪಟುವಿಗೆ ತರಬೇತಿ ಶಿಬಿರಕ್ಕೆ ಪಾಲ್ಗೊಳ್ಳಲು ಅವಕಾಶ ನೀಡದೆ ತಡೆ ಒಡ್ಡುವ ಮೂಲಕ ಕನ್ನಡದ ಕ್ರಿಡಾಪಡುವಿಗೆ ಅನ್ಯಾಯವಾಗಿದೆ.

ಭಟ್ಕಳದ ಬೆಳಕೆ ನಿವಾಸಿಯಾದ ವಿನೋದ ಲಚ್ಮಯ್ಯ ನಾಯ್ಕ ತರಬೇತಿ ಶಿಬಿರದಿಂದ ವಂಚಿತರಾದ ಕ್ರೀಡಾ ಪಟು. ವಿನೋದ್‌ ಮೊದಲ ಹಂತದ 36 ಕ್ರೀಡಾ ಪಟುಗಳ ಸಾಲಿನಲ್ಲಿ ಸೆಲೆಕ್ಟ್‌ ಆದ ಕರ್ನಾಟಕದ ಏಕೈಕ ವ್ಯಕ್ತಿಯಾಗಿದ್ದು ಇವರು 24ನೇ ಸ್ಥಾನ ಪಡೆದಿದ್ದರು. ನಂತರ ಮೊದಲ ಹಂತದ ಆನ್‌ಲೈನ್‌ ತರಬೇತಿಯಲ್ಲಿ ಕರ್ನಾಟಕದ ಈ ಕ್ರೀಡಾಪಟುವಿನ ಆಯ್ಕೆಯನ್ನು ತಡೆಹಿಡಿಯಲಾಗಿದೆ. ಜೂನಿಯರ್‌ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ತೋರಿದ ಪ್ರದರ್ಶನದಿಂದ ವಿನೋದ್‌ ಭಾರತ ಕಬಡ್ಡಿ ತಂಡದ 36 ಸದಸ್ಯರ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ದೇಶದ ಬೇರೆ ರಾಜ್ಯದ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆಮಾಡಿದ್ದು ವಿನೋದ್‌ ಆಯ್ಕೆಯನ್ನು ತಡೆಹಿಡಿದು ಬೇರೆಯವರನ್ನು ನೇಮಿಸಲಾಗಿದೆ.

ಫೆ 13ರಂದು ಹರಿಯಾಣದಲ್ಲಿ ಆಯ್ಕೆ ಪ್ರಕ್ರಿಯ ಪಂದ್ಯ ನಡೆಯಬೇಕಾಗಿತ್ತು, ಆದ್ರೆ ಕೊರೋನಾ ಎಫೆಕ್ಟ್‌ನಿಂದಾಗಿ ಪಂದ್ಯ ಮುಂದೂಡಲ್ಪಟ್ಟಿತ್ತು.ಇದೀಗ ತರಬೇತಿಗಾಗಿ ಪಾಲ್ಗೊಳಲ್ಲು ದಿಲ್ಲಿ ಕಬಡ್ಡಿ ಅಸೋಶಿಯೇಷನ್‌ ಪಟ್ಟಿ ಬಿಡುಗಡೆ ಮಾಡಿದ್ದು ಪಟ್ಟಿಯಲ್ಲಿ ವಿನೋದ್‌ ಹೆಸರು ಕೈಬಿಡಲಾಗಿದೆ.

ಈ ವಿಷಯವಾಗಿ ಕೇಳಿದ್ರೆ ತಾತ್ಕಾಲಿಕವಾಗಿ ಹೆಸರನ್ನು ಕೈಬಿಡಲಾಗಿದೆ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಸೀನಿಯರ್‌ ವಿಭಾಗದಲ್ಲೂ ಕರ್ನಾಟಕದಿಂದ ಸೆಲೆಕ್ಟ್‌ ಆಗಿದ್ದ ಐವರ್ನಾಡು ಗ್ರಾಮದ ಸಚಿನ ಪ್ರತಾಪ ಅವರ ಆಯ್ಕೆಯನ್ನು ತಡೆಹಿಡಿಯಲಾಗಿದ್ದು, ಇದೀಗ ಕರ್ನಾಟಕದ ಇಬ್ಬರು ಗ್ರಾಮೀಣ ಪ್ರತಿಭೆಗಳು ಅವಕಾಶದಿಂದ ವಂಚಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top