ಕಪ್‌ ಗೆಲ್ಲೋದು ಪಕ್ಕಾ ಪಟಾಕಿ ಹಚ್ಚೋಕೆ ರೆಡಿಯಾಗಿ

ಐಪಿಎಲ್‌ ಈಗಾಗಲೇ ಕೊನೆಯ ಹಂತಕ್ಕೆ ಬಂದು ತಲುಪಿದ್ದು, ಇಂದು ಮೊದಲ ಪ್ಲೇ ಆಫ್‌ ಮ್ಯಾಚ್‌ ನಡೆಯಲಿದೆ. ಕಳೆದ ಮೂರು ಐಪಿಎಲ್‌ನಲ್ಲಿ ಪ್ಲೇ ಆಫ್‌ಗೆ ಎಂಟ್ರಿಕೊಡಲು ವಿಫಲವಾಗಿದ್ದು ಆರ್‌ಸಿಬಿ ಈ ಬಾರಿ ಪ್ಲೇ ಆಫ್‌ಗೆ ಎಂಟ್ರಿಕೊಡುವ ಮೂಲಕ ಈ ಬಾರಿ ಆರ್‌ಸಿಬಿ ಕಪ್‌ ಗೆದ್ದು ಬರುವ ವಿಶ್ವಾಸದಲ್ಲಿದ್ದು, ಕಳೆದ ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ಸುಲಭವಾಗಿ ಪ್ಲೇ ಆಫ್‌ಗೆ ಎಂಟ್ರಿ ಕೊಡಬಹುದಾಗಿದ್ದ ಸನ್ನಿವೇಶವನ್ನು ಕಠಿಣವಾಗಿಸಿಕೊಂಡರು, ಇದೀಗ ಸತತ ನಾಲ್ಕು ಸೋಲುಗಳು ಆರ್‌ಸಿಬಿ ತಂಡದ ಆಟಗಾರರನ್ನು ಆಘಾತಗೊಳ್ಳುವಂತೆ ಮಾಡಿದೆ. ಇದರಿಂದಾಗಿ ಮುಂದಿನ ಪಂದ್ಯದಲ್ಲಿ ಆಡಲು ಒಂದಿಷ್ಟು ಒತ್ತಡದಲ್ಲಿ ಆರ್‌ಸಿಬಿ ಆಟಗಾರರು ಇದ್ದು, ಇದೀಗ ಆಟಗಾರರಿಗೆ ಆರ್‌ಸಿಬಿ ನಾಯಕ ಬರ್ತ್‌ ಡೇ ಬಾಯ್‌ ವಿರಾಟ್‌ ಕೊಹ್ಲಿ ಸ್ಪೂರ್ತಿಯ ಮಾತುಗಳನ್ನು ಆಡುವ ಮೂಲಕ ಉತ್ಸಾಹವನ್ನು ತುಂಬಿದ್ದಾರೆ. ಆರ್‌ಸಿಬಿ ಈ ಬಾರಿ ಐಪಿಎಲ್‌ ಟ್ರೋಫಿಯನ್ನು ಗೆಲ್ಲಲಿದೆ ಅನ್ನೋ ಭರವಸೆಯ ಮಾತುಗಳನ್ನು ವಿರಾಟ್‌ಕೊಹ್ಲಿ ಆಡಿದ್ದಾರೆ. ಈ ಮಾತುಗಳು ಸದ್ಯ ತಂಡದಲ್ಲಿ ಉತ್ಸಾಹ ತುಂಬಿದ್ದು,

ವಿರಾಟ್‌ ಕೊಹ್ಲಿ ಮಾತನಾಡಿರೋ ವಿಡಿಯೋವನ್ನು ಆರ್‌ಸಿಬಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ವಿರಾಟ್‌ ʻ ನಾವೆಲ್ಲಾ ಒಂದೇ ರೀತಿಯ ಮನೋಭಾವವನ್ನು ಹೊಂದಿರಬೇಕು ಅಂತ ನಾನು ಬಯಸುತ್ತೇನೆ. ನಾನು ನಿಮಗೆ ಸಂಪೂರ್ಣ ಭರವಸೆಯನ್ನು ನೀಡುತ್ತೇನೆ. ಐಪಿಎಲ್‌ ಶುರುವಿನಿಂದ ನಾವು ಅನುಭವಿಸಿದ್ದ ಖುಷಿಗಿಂತ ಹೆಚ್ಚು ಸಂಭ್ರಮವನ್ನು ಮುಂದಿನ ವಾರದಲ್ಲಿ ಅನುಭವಿಸಲಿದ್ದೇವೆ. ನಾವೆಲ್ಲಾ ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿರಬೇಕು. ನನಗೆ ಗೊತ್ತಿದೆ ನಾವು ಫೈನಲ್‌ಗೆ ತಲುಪಿಯೇ ತೀರುತ್ತೇವೆ. ಅಂತ ಸ್ಪೂರ್ತಿಯ ಮಾತುಗಳನ್ನು ಹೇಳುವ ಮೂಲಕ ತಂಡದ ಆಟಗಾರರಲ್ಲಿ ಉತ್ಸಾಹವನ್ನು ತುಂಬುವ ಕೆಲಸವನ್ನು ಮಾಡಿದ್ದಾರೆ.

ವಿರಾಟ್‌ ಕೊಹ್ಲಿಯವರ ಈ ಮಾತಿನ ಬಗ್ಗೆ ನೀವ್‌ ಏನ್‌ ಹೇಳ್ತೀರಾ.. ಹುಟ್ಟುಹಬ್ಬದ ಸಂಭ್ರಮದಲ್ಲಿರೋ ವಿರಾಟ್‌ ಕೊಹ್ಲಿಗೆ ನೀವ್‌ ಕೂಡ ಕಾಮೆಂಟ್‌ ಮಾಡಿ ವಿಶ್‌ ಮಾಡಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top