ಕನ್ನಡ ಕೋಗಿಲೆ ವಿನ್ನರ್ ಖಾಸಿಂಗೆ 25000₹ ದಂಡ..!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ವಿನ್ನರ್ ಖಾಸಿಂ ಅಲಿಗೆ 25000ರೂ ದಂಡ ವಿಧಿಸಲಾಗಿದೆ, ಕಾರಣ ಇನ್ನು ಇವರಿಗೆ ದಂಡ ವಿಧಿಸಿರೋದು ಯಾವುದೇ ಕೋರ್ಟ್ ಅಲ್ಲ ಬದಲಿಗೆ ಜನತಾ ನ್ಯಾಯಾಲಯ,

ಹೌದು ಖಾಸಿಂ ಹಾನಗಲ್ ತಾಲೂಕಿನ ಸಾವಸಗಿ ಗ್ರಾಮದವರಾಗಿದ್ದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಸಾವಸಗಿ ಒಂದು ಕುಗ್ರಾಮವಾಗಿದ್ದು ಅಲ್ಲಿ ನಾನು ಒಂದು ಜೋಪಡಿಯಲ್ಲಿ ವಾಸವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ, ಇನ್ನು ಇದಕ್ಕೆ ಕೋಪಗೊಂಡಿರೋ ಗ್ರಾಮಸ್ಥರು ದೇವಸ್ಥಾನದಲ್ಲಿ ಪಂಚಾಯಿತಿ ಸೇರಿಸಿ ಊರಿನ ಮಾನ ಹರಾಜಾಕಿದ್ದಕ್ಕೆ 25000 ದಂಡ ವಿಧಿಸಿದ್ದಾರೆ, ಇನ್ನು ಇನ್ನೊಂದು ರಿಯಾಲಿಟಿ ಶೋನಲ್ಲಿ ಹನುಮಂತ ಲಮಾಣಿ ತನ್ನ ಊರಿನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾನೆ ,ಆದ್ರೆ ಖಾಸಿಂ ತನ್ನ ಊರಿನ ಬಗ್ಗೆ ಯಾವುದೇ ಕಳಕಳಿ ತೋರಲಿಲ್ಲ ಅಂತ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ, ಇನ್ನು ಖಾಸಿಂ ನಾನು ನನ್ನ ಹುಟ್ಟೂರಿನ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿರುವೆ ಆದ್ರೆ ಕಾರಣಾಂತರಗಳಿಂದ ಕಾರ್ಯಕ್ರಮದಲ್ಲಿ ‌ಅವುಗಳ‌ನ್ನು ಪ್ರಸಾರ ಮಾಡಿಲ್ಲ ನನಗೆ ಯಾವುದೇ ದುರುದ್ದೇಶವಿಲ್ಲ ಅಂತ ಹೇಳಿ ಗ್ರಾಮಸ್ಥರಿಗೆ ಬೇಸರವಾಗಿದ್ದಲ್ಲಿ ನಾನು ಕ್ಷಮೆಯನ್ನು ಕೇಳುತ್ತೇನೆ ಅಂತ ಖಾಸಿಂ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top