ಕನ್ನಡಿಗ ರಾಹುಲ್ ಬೆನ್ನಿಗೆ ನಿಂತ ಸೌರವ್ ಗಂಗೂಲಿ

ಐಪಿಎಲ್‍ನಲ್ಲಿ ಆರ್‍ಸಿಬಿ ಟೂರ್ನಿಯಿಂದ ಹೊರಬಿದ್ದ ಮೇಲೆ ತಂಡದ ಬಗ್ಗೆ ಮತ್ತು ವಿರಾಟ್ ಕೊಹ್ಲಿ ನಾಯತ್ವದ ಬಗ್ಗೆ ಪರ ವಿರೋಧಗಳು ಕೇಳಿ ಬರ್ತಾನೆ ಇದೆ. ಒಬ್ಬರ ಬೆನ್ನಲ್ಲೇ ಒಬ್ಬರು ಹೇಳಿಕೆಯನ್ನು ನೀಡುತ್ತಿದ್ದು, ಗೌತಂ ಗಂಭೀರ್ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಡೆಲ್ಲಿ ಡ್ಯಾಶರ್ ವೀರೇಂದ್ರ ಸೆಹ್ವಾಗ್ ರನ್ ಮಷಿನ್ ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸುವ ಜೊತೆಯಲ್ಲಿ ಆರ್‍ಸಿಬಿ ಮ್ಯಾನೆಜ್‍ಮೆಂಟ್‍ಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹೌದು ಆರ್‍ಸಿಬಿ ಐಪಿಎಲ್ 2020ಯ ಪ್ರದರ್ಶನದ ನಂತರ ತಮ್ಮ ತಮ್ಮ ಸ್ಟೈಲ್‍ನಲ್ಲೇ ಹೇಳಿಕೆಯನ್ನು ಕೊಡುತ್ತಿರುವ ವೇಳೆ ವೀರು ಇದೀಗ ತಮ್ಮ ಹೇಳಿಕೆಯನ್ನು ನೀಡಿದ್ದು, ತಂಡ ಚೆನ್ನಾಗಿದ್ದರೆ ಮಾತ್ರ ನಾಯಕ ಚೆನ್ನಾಗಿ ಕಾಣಲು ಸಾಧ್ಯ, ಮೊದಲು ನೀವು ಆರ್‍ಸಿಬಿ ತಂಡದಲ್ಲಿ ಸಮರ್ಥ ಆಟಗಾರರನ್ನು ಸೆಲೆಕ್ಟ್ ಮಾಡಿ.. ವಿರಾಟ್ ಕೊಹ್ಲಿ ಭಾರತ ತಂಡದ ನಾಯಕನಾಗಿದ್ದು ಅಲ್ಲಿ ಯಶಸ್ಸು ಕಂಡಿಲ್ಲವಾ,ಮೊದಲು ತಂಡದಲ್ಲಿ ಉತ್ತಮ ಆಟಗಾರರನ್ನು ಪಿಕ್ ಮಾಡಿ ವಿರಾಟ್ ಕೊಹ್ಲಿ ನಾಯಕತ್ವ ಅಲ್ಲ, ತಂಡದ ಈ ರೀತಿ ಪ್ರದರ್ಶನಕ್ಕೆ ಕಾರಣ ತಂಡದಲ್ಲಿರುವ ಆಟಗಾರರ ಕ್ವಾಲಿಟಿ ಅಂತ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಇನ್ನು ಒಂದು ಕಡೆ ವಿರಾಟ್ ಕೊಹ್ಲಿ ಪರವಾಗಿ ವೀರು ಬ್ಯಾಟ್ ಬೀಸಿದ್ರೆ, ಇತ್ತ ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ಆಯ್ಕೆ ಮತ್ತು ಉಪನಾಯನಕ ವಿಚಾರವಾಗಿ ಕೆ.ಎಲ್ ರಾಹುಲ್ ಪರವಾಗಿ ಬಿಸಿಸಿಐ ಅಧ್ಯಕ್ಷ ದಾದಾ ಸೌರವ್ ಗಂಗೂಲಿ ಬ್ಯಾಟ್ ಬೀಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಈಗಾಗಲೇ ತಂಡವನ್ನು ಪ್ರಕಟಿಸಿದ್ದು, ಕೆಎಲ್ ರಾಹುಲ್‍ಗೆ ಎರಡು ಮಾದರಿಯಲ್ಲಿ ಉಪನಾಯಕ ಮತ್ತು ಟೆಸ್ಟ್ ತಂಡದಲ್ಲಿ ಸ್ಥಾನ ನೀಡಿದ್ದಕ್ಕೆ ಹಲವರು ಟೀಕಿಸಿದ್ರೆ, ಇನ್ನು ಕೆಲವ್ರು ಕೆಎಲ್ ರಾಹುಲ್ ಪರವಾಗಿ ಮಾತನಾಡಿದ್ರು, ಇದೀಗ ದಾದಾ ಕೂಡ ಮಾತನಾಡಿದ್ದು, ರಾಹುಲ್ ಎಲ್ಲಾ ಸ್ವರೂಗಳಲ್ಲೂ ಕೊಡುಗೆ ನೀಡ ಬಲ್ಲ ಸಾಮಥ್ರ್ಯವುಳ್ಳ ಆಟಗಾರ ಎಂದು ಗುಣಗಾನ ಮಾಡಿದ್ದಾರೆ. ನಾನೊಬ್ಬ ಕ್ರಿಕೆಟಿಗನಾಗಿ ಹೇಳುದಾದರೆ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಕೆ.ಎಲ್ ರಾಹುಲ್‍ಗೆ ಸಾಕಷ್ಟು ಸಮಯವಿದೆ. ಆತ ಎಲ್ಲಾ ಸ್ವರೂಪದ ಕ್ರಿಕೆಟ್‍ನಲ್ಲಿ ಪಂದ್ಯವನ್ನು ಗೆಲ್ಲಿಸಿಕೊಲು ಸಾಮಥ್ರ್ಯವನ್ನು ಹೊಂದಿದ್ದಾರೆ. ಪಂಜಾಬ್ ಪರ ಅತೀ ಹೆಚ್ಚು ರನ್ ಪೇರಿಸಿದರೂ ಅವರ ತಂಡ ಪ್ಲೇ ಆಫ್‍ಗೆ ತಲುಪಲೂ ಆಗಲಿಲ್ಲ, ಆದರೆ ಅವರು ಭಾರತ ತಂಡದಲ್ಲಿ ಸಿಡಿಸುವ ರನ್‍ಗಳು ಖಂಡಿತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಗಂಗೂಲಿ ಹೇಳಿದ್ದಾರೆ.

ಆ ಮೂಲ ವಿರಾಟ್ ಮತ್ತು ಕೆ,ಎಲ್ ರಾಹುಲ್ ವಿಚಾರವಾಗಿ ಟೀಕೆ ಮಾಡುತ್ತಿದ್ದವರಿಗೆ ತಕ್ಕ ಉತ್ತರ ನೀಡಿದ್ದಾರೆ ಕ್ರಿಕೆಟ್ ದಿಗ್ಗಜರಾಗ ವೀರೂ ಮತ್ತು ದಾದಾ.. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top