ಕನ್ನಡಿಗ ಕೆಎಲ್ ರಾಹುಲ್‍ಗೆ ಸ್ಪೆಷಲ್ ಗಿಫ್ಟ್ ನೀಡದ ಪ್ರೀತಿ ಜಿಂಟಾ

ಐಪಿಎಲ್ 2020 ಇನ್ನೇನೂ ಪ್ಲೇ ಆಫ್ ಹಂತಕ್ಕೆ ತಲುಪಲಿದೆ. ಈಗಾಗಲೆ ಎಲ್ಲಾ ತಂಡಗಳು ಪ್ಲೇ ಆಫ್ ಹಂತಕ್ಕಾಗಿ ಸಖತ್ ಫೈಟ್ ನೀಡ್ತಾ ಇದ್ದು, ಡೆಲ್ಲಿ,ಆರ್‍ಸಿಬಿ ಮತ್ತು ಮುಂಬೈ ಪ್ಲೇ ಆಫ್ ಹಾದು ಸ್ವಲ್ಪ ಸುಲಭವಾಗಿದೆ. ಇನ್ನು ನಾಲ್ಕನೇ ಸ್ಥಾನಕ್ಕಾಗಿ ಉಳಿದ ತಂಡಗಳು ಸಖತ್ ಫೈಟ್ ನೀಡ್ತಾ ಇದ್ದು, ಅದರಲ್ಲೂ ಕೆಎಲ್ ರಾಹುಲ್ ನಾಯಕತ್ವದ ಪಂಜಾಬ್ ತಂಡ ಭರ್ಜರಿ ಪ್ರದರ್ಶನ ನೀಡ್ತಾ ಇದೆ.

ಆಡಿದ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಹ್ಯಾಟ್ರಿಕ್ ಗೆಲುವಿನ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿರೋ ಪಂಜಾಬ್ ತಂಡ ಉಳಿದ ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್‍ಗೆ ಲಗ್ಗೆ ಇಡಲು ಹೋರಾಟ ನಡೆಸುತ್ತಿದೆ. ಪ್ಲೇ ಆಫ್ ತಲುಪಲು ಉಳಿದಿರೋ 4 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಪಂಜಾಬ್ ಈ ಬಾರಿಯ ಐಪಿಎಲ್‍ನಲ್ಲಿ ಪ್ಲೇ ಆಫ್ ಹಂತ ತಲುವುದು ಕಷ್ಟ ಅನ್ನೋ ವೇಳೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸೋ ಮೂಲಕ ಪಂಜಾಬ್ ಪ್ಲೇ ಆಫ್ ಹಾದಿಯನ್ನು ಇನ್ನು ಉಳಿಸಿಕೊಂಡಿದೆ.

ಮುಂಬೈ ಮತ್ತು ಡೆಲ್ಲಿ ವಿರುದ್ಧ ಗೆಲುವು ಸಾಧಿಸಿದ ನಂತರ ಹ್ಯಾಟ್ರಿಕ್ ಗೆಲುವನ್ನು ಪಂಜಾಬ್ ತಂಡ ಸಂಭ್ರಮಿಸಿದ್ದು, ಈ ಸಂಭ್ರಮದಲ್ಲಿ ಪಂಜಾಬ್ ತಂಡದ ಓನರ್ ಪ್ರೀತಿ ಜಿಂಟಾ ಕೆಎಲ್ ರಾಹುಲ್ ಸೇರಿದಂತೆ ತಂಡದ ಆಟಗಾರರಿಗೆ ಸ್ಪೆಷಲ್ ಗಿಫ್ಟ್ ಒಂದನ್ನು ನೀಡಿದ್ದಾರೆ. ಕೆ.ಎಲ್ ರಾಹುಲ್, ಗೇಲ್, ಕಾಟ್ರೆಲ್ ಸೇರಿದಂತೆ ತಂಡದ ಎಲ್ಲಾ ಆಟಗಾರರು ಪ್ರೀತಿ ಜಿಂಟಾ ಕಡೆಯಿಂದ ಸ್ಪೆಷಲ್ ಗಿಫ್ಟ್ ಅನ್ನು ಪಡೆದುಕೊಂಡಿದ್ದಾರೆ. ಇನ್ನು ಸ್ಪೆಷಲ್ ಗಿಫ್ಟ್ ಪಡೆಯುವ ಜೊತೆಯಲ್ಲಿ ಗೇಲ್ ಸೇರಿದಂತೆ ತಂಡದ ಯುವ ಆಟಗಾರರು ಭಾಂಗ್ರಾ ಡ್ಯಾನ್ಸ್ ಮಾಡುವ ಮೂಲಕ ಗೆಲುವನ್ನು ಸಂಭ್ರಮಿಸಿದ್ದು. ವಿಡಿಯೋ ಸದ್ಯ ಟ್ವೀಟರ್‍ನಲ್ಲಿ ಟ್ರೆಂಡಿಂಗ್ ಆಗಿದೆ.

ನಿಮ್ಮ ಪ್ರಕಾರ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಪಂಜಾಬ್ ತಂಡ ಪ್ಲೇ ಆಫ್ ತಲುಪಲಿದ್ಯಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top